Home Posts tagged #udupi (Page 90)

ಉಡುಪಿಯಲ್ಲಿ ನಾಗರಿಕ ಸಮಿತಿಯಿಂದ ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ ; ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಕಾನೂನಿನ ಪ್ರಕ್ರಿಯೆಗಳು ನಡೆದ ಬಳಿಕ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ, ಸಮಕ್ಷಮದಲ್ಲಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ಕೋವಿಡ್ ಪೀಡಿತ ಗ್ರಾಮಕ್ಕೆ ರೇಷನ್ ಕಿಟ್ ವಿತರಣೆ

ಕಾಪು: ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಕಿಲಿಂಜೆ ವಾರ್ಡ್‌ನಲ್ಲಿ ಕೊರೊನ ಬಂದು ಸೀಲ್ ಡೌನ್ ಅದ ಕುಟುಂಬಗಳಿಗೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ರೇಷನ್ ಕಿಟ್ ವಿತರಿಸಲಾಯಿತು. ಜಿಲ್ಲಾದ್ಯಂತ ಈ ವರೆಗೆ 54೦೦ ಕಿಟ್‌ಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಈ ಸಮಯದಲ್ಲಿ ಕೊರೊನ ಪೀಡಿತರಿಗೆ ಫುಡ್ ಕಿಟ್ ನೀಡಿದ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಹಾಗೂ ಬಡವರಿಗೆ ನೀಡುವ ಸೌಲಭ್ಯಗಳಿಗೆ

“ಹಡಿಲು ಭೂಮಿ ಕೃಷಿ ಅಂದೋಲನ”ರಾಷ್ಟ್ರಕ್ಕೆ ಮಾದರಿ: ಸಚಿವ ಬಿ.ಸಿ. ಪಾಟೀಲ್

ಫಲವತ್ತಾದ ಕೃಷಿ ಭೂಮಿಗಳನ್ನು ಹಡಿಲು ಬಿಡುವುದು ರಾಷ್ಟ್ರಕ್ಕೆ ಮಾಡುವ ದ್ರೋಹ. ಭೂಮಿ ತಾಯಿಯನ್ನು ಹಸನಾಗಿಸಿದರೆ ಆ ತಾಯಿ ನಮಗೆ ಚಿನ್ನದಂತಹ ಬೆಳೆಯನ್ನು ನೀಡುತ್ತಾಳೆ. ಹಡಿಲು ಭೂಮಿಯನ್ನು ಕೃಷಿ ಮಾಡುವಂತಹ ಈ ಪುಣ್ಯದ ಕಾರ್ಯವನ್ನು ಉಡುಪಿಯಲ್ಲಿ ಹಮ್ಮಿಕೊಂಡು ರಾಷ್ಟ್ರಕ್ಕೆ ಮಾದರಿಯಾಗಿದ್ದೀರಿ ಎಂದು ಕೃಷಿ ಸಚಿವರಾದ ಶ್ರೀ ಬಿ. ಸಿ. ಪಾಟೀಲ್ ಹೇಳಿದರು. ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕಡೆಕಾರ್ ಗ್ರಾಮ ಪಂಚಾಯತ್

ಉಡುಪಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ

ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ಲಾಕ್ ಡೌನ್ ಘೋಷಿಸಿದ್ದರಿಂದ ಜನ ಸಾಮಾನ್ಯರು ಕೆಲಸ ಕಾರ್ಯಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಗ್ಯಾಸ್, ಪೆಟ್ರೋಲ್, ಡಿಸೇಲ್, ವಿದ್ಯುತ್ ಹಾಗೂ ನಿತ್ಯ ಉಪಯೋಗಿ ವಸ್ತುಗಳ ಬೆಲೆ ಏರಿಕೆ ವಿರುದ್ಧ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಜೆ.ಡಿ.ಎಸ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಯವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಲಾಯಿತು. ಈ

ಮಣಿಪಾಲದಲ್ಲಿ ಸಿಲಿಂಡರ್ ಸ್ಪೋಟ

ಅಡುಗೆಗೆ ಬಳಸುವ ಸಿಲಿಂಡರ್ ಸ್ಪೋಟಗೊಂಡ ಘಟನೆ ಮಣಿಪಾಲದ ಸೋನಿಯಾ ಕ್ಲಿನಿಕ್ ಬಳಿ ನಡೆದಿದೆ. ಮನೆಗೆ ಬಳಸುವ ಸಿಲಿಂಡರ್‌ನಲ್ಲಿ ಅಡುಗೆ ಅನಿಲ ಸೋರುತ್ತಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡಿದರೂ ಸಫಲವಾಗದೇ ಸಿಲಿಂಡರ್ ಸ್ಪೋಟಗೊಂಡಿದೆ. ಅದೃಷ್ಟವಶತ್ ಮನೆಯವರು ಹೊರ ಓಡಿದ್ದು ಅಡುಗೆ ಮನೆಯ ಮೇಲ್ಚಾವಣೆಗಳು ಸ್ಪೋಟದ ರಭಸಕ್ಕೆ ಹಾರಿ ಹೋಗಿವೆ. ಅಡುಗೆ ಕೋಣೆಯೊಳಗಡೆಯೂ ಹಾನಿ ಉಂಟಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ತಂಡ ತಕ್ಷಣ ತಲುಪಿ

ಸರಕಾರ ಸಹಾಯ ಮಾಡದಿದ್ರೆ ಸುಗಮ ಸಂಚಾರ ಕಷ್ಟ : ಕುಯಿಲಾಡಿ ಸುರೇಶ್ ನಾಯಕ್ 

ಕೊವಿಡ್ ಲಾಕ್ ಡೌನ್ ನಿಂದ ಖಾಸಗಿ ಬಸ್ ಉದ್ಯಮ ಸಂಕಷ್ಟದಲ್ಲಿದೆ.ಸರಕಾರ ಡಿಸೇಲ್ ದರ ಏರಿಕೆಯನುಸಾರ ದರ ಪರಿಷ್ಕರಿಸಿ ಒಂದಷ್ಟು ತೆರಿಗೆ ವಿನಾಯಿತಿಗಳನ್ನು ಮಾಡಿದ್ರೆ ಖಾಸಗಿ ಬಸ್ಸುಗಳು ಸುಗಮ ಸಂಚಾರ ಮಾಡಲು ಅನುಕೂಲವಾಗುವುದು ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಗ್ರಹಿಸಿದ್ದಾರೆ. ಕಳೆದ ವರುಷ ಕೆ ಎಸ್ ಅರ್ ಟಿಸಿ ದರ ಕಡಿತ ಹಾಗೂ ವಿದ್ಯಾರ್ಥಿಗಳಿಗೆ ವಿನಾಯಿತಿ ಮಾಡಿರುವ ಕಾರಣಗಳನ್ನು ನೀಡಿದ ಹಿನ್ನಲೆಯಲ್ಲಿ, ಸರಕಾರ ಸುಮಾರು

ಉಡುಪಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ವಿವಿಧ ಸಂಘಟನೆಗಳಿಂದ ಜನಾಂದೋಲನ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಯೂ ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಪ್ಯಾಕೇಜ್ ಗಳನ್ನು ನೀಡುವಂತೆ ಅಗ್ರಹಿಸಿ ಹಮ್ಮಿಕೊಂಡಿರುವ ಜನಂದೋಲನವು ಇಂದು ಉಡುಪಿ ಶಾಸಕ ರಘುಪತಿ ಭಟ್ ಕಚೇರಿ ಮುಂದುಗಡೆ ನಡೆಸಲಾಯಿತು.ವಿವಿಧ ಸಂಘಟನೆಗಳ ಕಾರ್ಯಕರ್ತರು ಜನಾಂದೋಲನದಲ್ಲಿ ಭಾಗವಹಿಸಿ ಶಾಸಕ ರಘುಪತಿ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ದ ಘೊಷಣೆಗಳನ್ನು ಕೂಗಿದ್ರು. ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ ಕೊವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಪ್ಯಾಕೇಜ್ ಗಳನ್ನ

ಉಡುಪಿಯಲ್ಲಿ ಕಾಲು ಕೊಳೆತು ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ಶ್ವಾನದ ರಕ್ಷಣೆ

ಉಡುಪಿ: ಬೀದಿ ಶ್ವಾನವೊಂದು ಕಾಲಿಗೆ ಗಾಯಗೊಳಗಾಗಿ ಕೆಲವು ವರ್ಷಗಳಿಂದ ಉಡುಪಿ ಮಿತ್ರ ಆಸ್ಪತ್ರೆ ಬಳಿ ಅಸಹಾಯಕ ಸ್ಥಿತಿಯಲ್ಲಿ ದಿನಗಳ ಕಳೆಯುತಿತ್ತು. ಶ್ವಾನದ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಪ್ರಾಣಿ ಪ್ರೀಯರಾದ, ಅನೀಶ್, ಭರತ್, ಸುಮನಾ, ನಿಖಿತಾ ಪೂಜಾರಿ, ಮಂಜುಳ ಕರ್ಕೆರಾ ಅವರು ಶ್ವಾನವನ್ನು ವಶಕ್ಕೆ ಪಡೆದು, ಖಾಸಗಿ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಆ ಬಳಿಕ ಮಣಿಪಾಲದ ಶ್ವಾನ ಪುರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಿದರು. ಬಬಿತಾ ಮಧ್ವರಾಜ್

ವೃದ್ಧೆಯೊಬ್ಬರ ಕಣ್ಣಿನಲ್ಲಿತ್ತು ಜೀವಂತ ಹುಳ : ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಯಶಸ್ವಿ ಚಿಕಿತ್ಸೆ

ಪ್ರಖ್ಯಾತ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದ ವೈದ್ಯರು ವೃದ್ಧೆಯೊಬ್ಬರ ಕಣ್ಣಿನಿಂದ ಜೀವಂತ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ತೀವ್ರವಾದ ಕಣ್ಣು ನೋವಿನಿಂದ ಬಳಲುತ್ತಿದ್ದ 74 ವರ್ಷದ ವೃದ್ಧೆಯ ಕಣ್ಣಿನಿಂದ ವೈದ್ಯರಾದ ಡಾ. ಕೃಷ್ಣ ಪ್ರಸಾದ್ ಅವರ ತಂಡ ತುರ್ತು ಚಿಕಿತ್ಸೆ ನಡೆಸಿ ಈ ಹುಳ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಕಣ್ಣು ನೋವಿನಿಂದ ಬಳಲುತ್ತಿದ್ದ ವೃದ್ಧೆ, ಜೂ 1 ರಂದು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದ್ದರು.

ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಆರೋಪಿಗಳು ದೋಷಿ ಎಂದು ತೀರ್ಪು

ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ತೀರ್ಪು ಇಂದು ಪ್ರಕಟಗೊಂಡಿದ್ದು, ಮೂವರು ಪ್ರಮುಖ ಆರೋಪಿಗಳು ದೋಷಿಗಳೆಂದು ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ನೀಡಿದ್ದಾರೆ. ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ರಾಜೇಶ್ವರಿ ಶೆಟ್ಟಿ, ರಾಜೇಶ್ವರಿ ಶೆಟ್ಟಿ ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಆರೋಪಿಗಳಾಗಿದ್ದರು. ಆರೋಪಿಗಳು ದೋಷಿ ಎಂದು ನ್ಯಾಯಾಲಯ