ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ನಗರದ ವೆಲೆನ್ಸಿಯಾದಲ್ಲಿರುವ ಮನೆಗೆ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಸರಿ ಬಣ್ಣ ಮತ್ತು ಕೇಸರಿ ಶಾಲಿನ ಬಗ್ಗೆ ಐವನ್ ಡಿಸೋಜ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರ ಆಕ್ರೋಶ
ಮಂಜೇಶ್ವರ: ಮನೆ ಟೆರೇಸ್ ನಲ್ಲಿ ಆಟವಾಡುತಿದ್ದ ಹತ್ತು ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾನೆ. ಮೀಂಜ ಮೊರತ್ತಣೆ ಆಟೋ ಚಾಲಕ ಸದಾಶಿವ ಶೆಟ್ಟಿ- ಯಶೋಧ ದಂಪತಿಗಳ ಪುತ್ರ ಮೊಕ್ಷಿತ್ ರಾಜ್ ಸಾವನ್ನಪ್ಪಿದ ದುರ್ದೈವಿ. ತಲೇಕ್ಕಲ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಮೋಕ್ಷಿತ್ ರಾಜ್ ಆಟವಾಡುತಿದ್ದ ಟೆರೇಸ್ ಮೇಲಿನಿಂದ ಪಕ್ಕದ ಮನೆಗೆ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದಾಗ ಶಾಕ್ ತಗಲಿ ಟೆರೇಸ್ ನ ಕೆಳಗೆ
ಬಂಟ್ವಾಳದ ಎಸ್‍ಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆಹಾಗೂ ಅದರಲ್ಲಿದ್ದ ಭಗವಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿದೆ. ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವಹಿಂದೂಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಇದನ್ನು ಸಹಿಸದ ದುಷ್ಕರ್ಮಿಗಳು ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಒಡೆದು ಹಾಕಿ, ಭಗವಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ
ಮಂಜೇಶ್ವರ: ಪ್ರಸಿದ್ದವಾಗಿರುವ ಉದ್ಯಾವರ ಸಾವಿರ ಜಮಾಹತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಅಸಯ್ಯದ್ ಶಹೀದ್ ವಲಿಯುಲ್ಲಾಯಿ (ಖ. ಸಿ) ರವರ ದರ್ಗಾ ಶೆರೀಫ್ ನಲ್ಲಿ ನಡೆದ ಪ್ರಾಥಣೆಯ ಬಳಿಕ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಘಲ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿಯವರು ಮಸೀದಿ ಅಧ್ಯಕ್ಷರಿಗೆ
ಮಂಗಳೂರು: ಮಾನವನ ಅಭಿವೃದ್ಧಿಯ ತೆವಲಿಗೆ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲ, ಸೂಕ್ಷ್ಮಜೀವಿಗಳು ಬಲಿಯಾಗುತ್ತಿವೆ. ಕಾಡು ಕಡಿದು ನಾಡು ಮಾಡಿ ತನ್ನ ಇರವನ್ನು ಗಟ್ಟಿ ಮಾಡಿಕೊಂಡ ಮಾನವ ಪರಿಸರದ ಇತರ ಜೀವಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡ ಇದರಿಂದ ನೆಲೆಕಳೆದುಕೊಂಡು ಅದೆಷ್ಟೋ ಜೀವಿಗಳು ಕಣ್ಮರೆಯಾಗಿವೆ. ಆದರೆ ಪ್ರಾಣಿ – ಪಕ್ಷಿಗಳ ಮೇಲೆ ಕಾಳಜಿ ಇದ್ದವರು ಇಲ್ಲವೆಂದೇನೂ ಇಲ್ಲ. ಅದೇ ರೀತಿ ಇಲ್ಲೊಂದು ದಂಪತಿ ಪಕ್ಷಿಗಳು ಗೂಡು ಕಟ್ಟಲು ನೆರವಾಗುವ ಮೂಲಕ ಪಕ್ಷಿ
ಮಂಗಳೂರು: ಇಂಟರ್ನ್‍ಶಿಪ್ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖ್ಯಾತ ವಕೀಲ ಕೆ .ಎಸ್.ಎನ್.ರಾಜೇಶ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತ ವಿದ್ಯಾರ್ಥಿನಿಯು ವಕೀಲರ ವಿರುದ್ಧ ನಿನ್ನೆ ರಾತ್ರಿ ನೀಡಿದ ದೂರಿನ ಮೇರೆಗೆ ಮಂಗಳೂರು ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ ಎಲ್ ಬಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ, ಮೊದಲ ಬಿ.ಎಸ್.ಸಿ ವಿದ್ಯಾರ್ಥಿ ಹೃತಿಕ್ ಅವರು ದಕ್ಷಿಣ ವಲಯ ಮಟ್ಟದ ಗಣರಾಜ್ಯೋತ್ಸವದ ಪರೇಡ್‌ಗಾಗಿ ನಡೆಯಲಿರುವ ಪೂರ್ವಸಿದ್ಧತಾ ಆಯ್ಕೆ ಶಿಬಿರಕ್ಕೆ ಅರ್ಹತೆ ಪಡೆದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಗಣರಾಜ್ಯೋತ್ಸವದ ಪರೇಡ್ ಪೂರ್ವಸಿದ್ಧತಾ ಆಯ್ಕೆ ಶಿಬಿರದಲ್ಲಿ ಮೊದಲ ಸ್ಥಾನದೊಂದಿಗೆ ದಕ್ಷಿಣ ವಲಯ ಮಟ್ಟಕ್ಕೆ
ಸುಬ್ರಹ್ಮಣ್ಯ: ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.ಕುಟುಂಬದವರೊಂದಿಗೆ ಆಗಮಿಸಿದ ಪ್ರವೀಣ್ ಸೂದ್ ಅವರು ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಪೂಜೆ, ಅಭಿಷೇಕ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಪ್ರವೀಣ್ ಸೂದ್ ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್
ಕೇರಳದಲ್ಲಿ ಶನಿವಾರದಿಂದೀಚೆಗೆ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತ ಮುಂದುವರಿದಿದೆ. ರವಿವಾರ ಮಧ್ಯಾಹ್ನದ ವೇಳೆಗೆ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಸಂಭಾವ್ಯ ಭೂಕುಸಿತದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಏತನ್ಮಧ್ಯೆ ಮಳೆ ಸಂಬಂಧಿ ಅನಾಹುತಗಳಿಂದ ಮೃತಪಟ್ಟವರ ಸಂಖ್ಯೆ 24ಕ್ಕೇರಿದ್ದು, 11 ಜಿಲ್ಲೆಗಳಲ್ಲಿ ಸೋಮವಾರ ಕೂಡಾ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ವಿವಿಧೆಡೆ
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಬೆಳೆಗಳು ಹಾಳಾಗಿದ್ದು ರೈತ ತಲೆ ಮೇಲೆ ಕೈಹೊತ್ತು ಕುಳಿತು ಕಂಗಾಲಾಗಿದ್ದಾನೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಅಚ್ಚ ಗೊಡನಹಳ್ಳಿಯಲ್ಲಿ ಕಳೆದ ರಾತ್ರಿ ಸರಿಸುಮಾರು 32 ಆನೆಗಳು ರೈತರು ಬೆಳೆದ ಭತ್ತದ 3 ಎಕರೆಯ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಅಲ್ಲದೆ ಅದೇ ಪ್ರದೇಶದಲ್ಲಿ ಬೆಳೆದಿರುವ ಗೆಣಸು, ಅಡಕೆ, ಬಾಳೆ ಮುಂತಾದ ಬೆಳೆಗಳು ಸಂಪೂರ್ಣವಾಗಿ


















