Home Posts tagged #v4news karnataka (Page 198)

ದಸರಾ ಹೆಸರಲ್ಲಿ ಜನರ ತೆರಿಗೆ ಹಣವ ಲೂಟಿ – ಸುನೀಲ್‌ ಕುಮಾರ್ ಬಜಾಲ್

ಮಂಗಳೂರು ಮಹಾನಗರ ಪಾಲಿಕೆಯು ದಸರಾ ಹಬ್ಬಕ್ಕೆ ದಾರಿ ದೀಪಾಲಂಕಾರಕ್ಕಾಗಿ 38 ಲಕ್ಷ ಹಣವನ್ನು ಪೋಲು ಮಾಡುತ್ತಿರುವ ಹಿಂದೆ ಬಿಜೆಪಿ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣವು ಅಡಗಿದೆ ಮಾತ್ರವಲ್ಲ ಇದು ಜನತೆಯ ತೆರಿಗೆಯ ಹಣವನ್ನು ದಸರಾ ಹೆಸರಲ್ಲಿ ಲೂಟಿ ಮಾಡಲು ಹೊರಟಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಇಂದು ಮಂಗಳೂರು

ಕೇರಳ ಗಡಿ ನಿರ್ಬಂಧ ತೆರವಿಗೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ: ಸಿಎಂ ಬಸವರಾಜ ಬೊಮ್ಮಾಯಿ

ಕೋವಿಡ್ 19 ಹಿನ್ನೆಲೆಯಲ್ಲಿ ಕೇರಳ ಗಡಿ ನಿರ್ಬಂಧ ತೆರವಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ದ.ಕ. ಮತ್ತು ಉಡುಪಿ ಜಿಲ್ಲೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನು ಜಿಲ್ಲೆಯಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ವಿಚಾರದ ಬಗ್ಗೆ ಪ್ರತಿಕ್ರಿಯೆ

ಹಾನಗಲ್ ಉಪಚುನಾವಣೆಗೆ ಉಸ್ತುವಾರಿಯಾಗಿ ಎಂ ಎಲ್ ಸಿ ಹರೀಶ್ ಕುಮಾರ್ ನೇಮಕ

ಮಂಗಳೂರು : ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯಾಗಿ ದಕ್ಷಿಣ ಕನ್ನಡ ಜಿಲ್ಲ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ನೇಮಕ ಮಾಡಿದೆ.ಕೆಪಿಸಿಸಿ ಕಾರ್ಯಾಧ್ಯಕ್ಷ , ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಾನಗಲ್ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಉಸ್ತುವಾರಿಗಳ ತಂಡವನ್ನು ನಿಯೋಜಿಸಲಾಗಿದೆ.

ವಿಟ್ಲದ ಇಡ್ಕಿದು ಎಂಬಲ್ಲಿ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

ವಿಟ್ಲ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರರೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ   ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ ದುರ್ದೈವಿ. ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು

ಪ್ರಾಯೋಗಿಕ ಕಂಬಳದಲ್ಲಿ ಮೂಡಿ ಬಂದ ಭರವಸೆಯ ಓಟಗಾರರಿಗೆ ಬಹುಮಾನ

ಮೂಡುಬಿದಿರೆ : ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಆಶ್ರಯದಲ್ಲಿ 6ನೇ ವರ್ಷದ ಶಿಬಿರಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಡಲಕೆರೆಯ ಕೋಟಿ ಚೆನ್ನಯ ಜೋಡುಕರೆ ಕಂಬಳ ಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ರೆಂಜಾಳ ಡ್ರೀಮ್ ಹೌಸ್ ವಲೇರಿಯನ್ ಸಾಂತ್‌ಮೇರ್ (ಪ್ರ), ಬೈಂದೂರು ದುರ್ಗಾ ಫ್ರೆಂಡ್ಸ್ (ದ್ವಿ) ನೇಗಿಲು ವಿಭಾಗದ ಈದು ಬಟ್ಟೇನಿ ಶ್ರೀಧರ್ ಗಿರಿಯಪ್ಪ ಪೂಜಾರಿ(ಪ್ರ) ಮತ್ತು ಶ್ರೀ

ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ -ಕಮ್ -ಹೀಟರ್ನ ನ ಕೊಡುಗೆ

ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ ಕಂ ಹೀಟರ್ ನ್ನು ಭಾರತೀಯ ಜೀವ ವಿಮಾ ನಿಗಮವು ಕೊಡುಗೆಯಾಗಿ ನೀಡಿದೆ. ಈ ಕಾರ್ಯ ಮಾದರಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಅವರು ಹೇಳಿದರು. ಭಾರತೀಯ ಜೀವವಿಮಾ ನಿಗಮದ 65ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಅವರು ವಾಟರ್ ಪ್ಯುರಿಫಯ್ಯರ್ ಕಂ ಹೀಟರ್ ಅನ್ನು ಸ್ವೀಕರಿಸಿ ಮಾತನಾಡಿದರು. ನಿಗಮದ ಮಂಗಳೂರು ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಎಚ್

ಮೂಡುಬಿದಿರೆ : ಎಸ್‌ ಕೆ ಎಸ್‌ ಎಸ್‌ ಎಫ್‌ ನಿಂದ ಪ್ರತಿಭಟನೆ

ಮೂಡುಬಿದಿರೆ: ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ನಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು. ವಾಗ್ಮಿ ಅಹ್ಮದ್ ನಹೀಮ್ ಪೈಝಿ ಮುಕ್ವೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದೇಶ ಒಡೆಯುವ ಕೋಮುವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಆಹಾರದ ಕಾರಣಕ್ಕಾಗಿ ನಮ್ಮ ಮೇಲೆ ದೌರ್ಜನ್ಯವೆಸಗುವ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದೇನೆ : ಶೇಖರಗೌಡ ಮಾಲಿಪಾಟೀಲ

ಕನ್ನಡದ ಗರಿಮೆ, ಹಿರಿಯೆಯ ಪ್ರತೀಕವಾದ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಲು ಸಮರ್ಥ ನಾಯಕತ್ವ ಅಗತ್ಯವಿದೆ. ಇಂಥ ಪ್ರಾತಿನಿಧಿಕ ಸಂಸ್ಥೆಗೆ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಸಂಘಟಕರು, ಜನಪರ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳ ಒತ್ತಾಯದಿಂದ ಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದೇನೆ ಎಂದು ಶೇಖರಗೌಡ ಮಾಲಿಪಾಟೀಲ ಹೇಳಿದರು. ಮಂಗಳವಾರ ಕನ್ನಡ ಸಾಹಿತ್ಯ

ಕೊಟ್ಟಾರ ಚೌಕಿಯಲ್ಲಿ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭ

ಹೊಂಡಾ ಮೋಟಾರ್‍ಸ್‌ನವರ ಅತ್ಯುನ್ನತ ಶ್ರೇಣಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭಗೊಂಡಿತು. ನಗರದ ಕೊಟ್ಟಾರ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ದ್ವಿಚಕ್ರ ವಾಹನ ಪ್ರೀಯರ ನೆಚ್ಚಿನ ಶೋರೋಂ ಆಗಿರುವ ಹೊಂಡಾ ಮೊಟಾರ್‍ಸ್‌ನವರ ಹೊಂಡಾ ಬಿಗ್ ವಿಂಗ್ ನಗರದ ಕೊಟ್ಟಾರ್ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ಹೊಂಡಾ ಬಿಗ್ ವಿಂಗ್ ಮಳಿಗೆಯನ್ನು ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸಚಿನ್