ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ. ಆರ್. ಲೋಬೊ, ಪಾಲಿಕೆಯ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಇಂದು ನಗರದ ಸ್ವಚ್ಛತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಬಹಳಷ್ಟು ಅನುಭವ ಇರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಾಕಮನಂದಜಿ ಹಾಗೂ ಶ್ರೀ ಏಕಗಮ್ಯನಂದ ಸ್ವಾಮೀಜಿ ಯವರನ್ನು ಭೇಟಿ ಮಾಡಿ ಅವರೊಡನೆ
ಮಂಜೇಶ್ವರ : ಕೇರಳ ಕೋ- ಆಪರೇಟಿವ್ ಎಂಪ್ಲೋಯೀಸ್ ಕೌನ್ಸಿಲ್ ಮಂಜೆಶ್ವರ ಯೂನಿಟ್ ಇವರ ವತಿಯಿಂದ ಕೊಡುಗೆಯಾಗಿ ಸುಮಾರು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ಮಂಜೇಶ್ವರ ಒಳಪೇಟೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ಹೈಟೆಕ್ ಸೂಪರ್ ಸ್ಪೆಷಾಲಿಟಿ ಬಸ್ಸು ತಂಗುದಾಣ ಸೋಮವಾರದಂದು ಸಂಜೆ ಲೋಕಾರ್ಪಣೆಗೊಂಡಿತು. ಜನನಿಬಿಡ ಪ್ರದೇಶವಾದ ಮಂಜೇಶ್ವರ ಒಳಪೇಟೆಯಲ್ಲಿ ಮೂಲಭೂತ ಸೌಕರ್ಯಗಳಲ್ಲೊಂದಾದ ಹೈಟೆಕ್ ಮಾದರಿಯ ಶೌಚಾಲಯಗಳನ್ನೊಳಗೊಂಡ ಬಸ್ಸು ತಂಗುದಾಣ ಲೋಕಾರ್ಪಣೆಗೊಂಡಿರುವುದು
ಮಂಗಳೂರು: ವಿಮಾನ ನಿಲ್ದಾಣ ವ್ಯಾಪ್ತಿಯ ಅದ್ಯಪಾಡಿ ಸುತ್ತಮುತ್ತಲಿನ ಪರಿಸರದಲ್ಲಿ ಸಿಐಎಸ್‌ಎಫ್ ಏರ್ ಪೋರ್ಟ್ ಘಟಕದ ವತಿಯಿಂದ, ಬಜ್ಪೆ ಪೊಲೀಸ್ ಠಾಣಾ ಸಹಯೋಗದೊಂದಿಗೆ ’ಸುರಕ್ಷತಾ ಜಾಗೃತಿ’ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸ್ಥಳೀಯ ನಾಗರಿಕರಲ್ಲಿ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭ ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಕೃಷ್ಣ ಪ್ರಕಾಶ್, ಬಜ್ಪೆ
ಜಿಲ್ಲೆಯ ಹಲವು ದಶಕಗಳ ವಿಮಾನ ನಿಲ್ದಾಣ ಪ್ರಾರಂಭದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಶೀಘ್ರವೇ ಕಾಮಗಾರಿ ಚಾಲನೆ ಯಾಗಲಿದೆ. ನಾಳೆಯಿಂದಲೇ ಮಾರ್ಕಿಂಗ್ ಕಾರ್ಯ ಪ್ರಾರಂಬಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಇದೊಂದು ಮಹತ್ವಾಕಾಂಕ್ಷಿ
ಆಸ್ಕರ್ ಫೆರ್ನಾಂಡೀಸ್ ಅವರು ನನಗೆ ಶಾಸಕನಾಗಲು ಅವಕಾಶ ಮಾಡಿಕೊಟ್ಟಿದ್ದು, ನನ್ನೊಂದಿಗೆ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಬೈಂದೂರು ಕ್ಷೇತ್ರವನ್ನು ಮಾದರಿಯನ್ನಾಗಿಸುವಲ್ಲಿ ಆಸ್ಕರ್ ಅವರ ಶ್ರಮವೂ ಅಪಾರವಾದುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ
ಪುತ್ತೂರು : ಕಳೆದ 20 ವರ್ಷಗಳಿಂದ ಅತೀ ಕಡಿಮೆ ಸಂಬಳದಲ್ಲಿ ಕನಿಷ್ಟ ವೇತನವೂ ಸಿಗದೆ ಶಾಲಾ ಮಕ್ಕಳಿಗೆ ಪ್ರೀತಿಯಿಂದ ಅಡುಗೆ ತಯಾರಿಸಿ ಬಡಿಸುತ್ತಿರುವ ಬಿಸಿಯೂಟ ನೌಕರರ ಬಗ್ಗೆ ಸರಕಾರದ ನಿರ್ಲಕ್ಷ ಕೂಡ ಸರಕಾರದ ಮಹಿಳಾ ದೌರ್ಜನ್ಯ ಆಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡರಾದ ಬಿ.ಎಂ.ಭಟ್ ಹೇಳಿದರು. ಅವರು ಸೆ.20 ರಂದು ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಸಮಾವೇಶವನ್ನುದ್ದೇಶಿಸಿ ಮಾತಾಡಿ ಕೆಲವು ಅಸಂಘಟಿತ ಕಾರ್ಮಿಕರಿಗೆ ಕೊರೋನಾ ಪ್ಯಾಕೇಜು ನೀಡಿದ ಸರಕಾರ
ಪಕೋಡಾ ಮಾರಿಯೂ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬಹುದು ಎಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆ, ವ್ಯಂಗ್ಯ ಪ್ರದರ್ಶನಗಳು ಕಂಡು ಬಂದಿತ್ತು. ಅದೇ ರೀತಿ ಪ್ರಧಾನಿಯ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವುದನ್ನು ತೋರಿಸಿಕೊಟ್ಟ ಹಲವು ವಿಚಾರಗಳೂ ದೇಶದ ಜನರ ಗಮನಕ್ಕೂ ಬಂದಿತ್ತು. ಈ ನಡುವೆ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಭಿಯಾಗಿ ಬದುಕು ಸಾಗಿಸುತ್ತಿರುವ ಸಾವಿರಾರು ಯುವಪಡೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ
ಮಂಗಳೂರು :ನೆರೆಮನೆಯವರ ಅಥವಾ ಇತರರ ಕಷ್ಟಗಳನ್ನು ನೋಡಿ ಏನಾದರೂ ಸಹಾಯ ಮಾಡಲು ಪ್ರಯತ್ನಿಸಬೇಕು. ನೋಡಿಯೂ ನೋಡದಂತೆ ನನಗೇಕೆ ಬೇಕು ಬೇಡದ ಕೆಲಸವೆಂದು ಸುಮ್ಮನಿರಬಾರದು. ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಸ್ವೀಕರಿಸಿ ಸಾಧ್ಯವಾದ ಸಹಾಯವನ್ನು ಮಾಡಲು ಪ್ರಯತ್ನಿಸಬೇಕು.ಅದುವೇ ಬದುಕಿನ ಸಾರ್ಥಕತೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು. ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ಸಮೀಪದ ಯರ್ಮಾಜೆ
ಮಂಗಳೂರಿನ ಜೈಲ್ ರೋಡ್ ಬಳಿಯ ಇರುವ ಡಯಟ್ ಸಂಸ್ಥೆಯ ಒಳಗೆ ನುಗ್ಗಿದ ದುಷ್ಕರ್ಮಿಯೋರ್ವ ಮೂವರು ಮಹಿಳೆಯರಿಗೆ ತಲ್ವಾರ್ ನಿಂದ ಹಲ್ಲೆ ನಡೆಸಿ ಘಟನೆ ನಡೆದಿದೆ. ಹಲ್ಲೆಗೊಳಗಾದವರನ್ನು ರೀನ, ಗುಣವತಿ, ನಿರ್ಮಲ ಎಂದು ಗುರುತಿಸಲಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹಾಗೂ ಹಿರಿಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್
ಉಳ್ಳಾಲ : ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ. ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಕಾರು ಆತನ ಮೇಲೆ ಹರಿದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ


















