ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿನೂತನ ತಂತ್ರಜ್ಞಾನವನ್ನು ಮಂಗಳೂರಿನ ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಈ ಮೂಲಕ ವಾರಗಟ್ಟಲೆ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಹೋಗುವ ಮೀನುಗಾರರು ಇನ್ನು ಮುಂದೆ ತಮ್ಮ ನಿತ್ಯ ಬಳಕೆಯ ಅವಶ್ಯಕತೆಗೆ ಬೇಕಾದ ನೀರನ್ನು ಕೊಂಡೊಯ್ಯುವ ಪ್ರಮೇಯವೇ ಇಲ್ಲ. ಆಳ ಸಮುದ್ರ ಮೀನುಗಾರಿಕೆ ನಡೆಸುವ
ಕಡಬ ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಶ್ರೀ ಗೋಕರ್ಣನಾತೆಶ್ವರ ದೇವಸ್ಥಾನದ ಪ್ರವೇಶ ದ್ವಾರಾದ ಹತ್ತಿರ ಇರುವ ಶಿವಗಿರಿ ಅಪಾರ್ಟ್ಮೆಂಟ್ ಪ್ಲಾಟ್ ನಂಬರ್ 305ರಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಉಪ ಕುಲಸಚಿವರು ಆಗಿರುವ ಡಾ. ಪ್ರಭಾಕರ್ ನೀರ್ ಮಾರ್ಗ ಅವರ ಅಮೃತ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜು ಕುದ್ರೋಳಿ ಇದರ ಪ್ರಾಂಶುಪಾಲರು ಡಾ ವಸಂತ ಕುಮಾರ್, ಗೋಕರ್ಣೇಶ್ವರ ಕಾಲೇಜಿನ
ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಎಲ್ಲಾ ವಿಭಾಗದ ಜನತೆಗೆ ವಿನಾಃ ಕಾರಣ ತೊಂದರೆ ನೀಡುವ ವಾರಾಂತ್ಯದ ಕರ್ಫ್ಯೂವನ್ನು ಕೂಡಲೇ ರದ್ದುಮಾಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಡಳಿತವನ್ನು ಒತ್ತಾಯಿಸಿದೆ. CPIM ಹಿರಿಯ ನಾಯಕರಾದ ಕಾಂ.ಕೆ ಆರ್ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಿಪಿಐ(ಎಂ)ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಅವೈಜ್ಞಾನಿಕ ಕರ್ಫೂನಿಂದಾಗಿ ಕೋರೋನ ನಿಯಂತ್ರಣ
ಮಂಗಳೂರು ಕ್ಯಾಮ್ ಫಿಲ್ಮ್ ಅರ್ಪಿಸುವ ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ಈಗ ನಸೀಬ್ ಏರೆಗುಂಡ ಏರೆಗಿಜ್ಜಿ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ. ಈ ತುಳು ಸಿನಿಮಾ ಸೆಪ್ಟಂಬರ್ 8ರಂದು ವಿ4 ಸ್ಟ್ರೀಮ್ ಬಿಡುಗಡೆಗೊಳ್ಳಲಿದೆ. ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ
ದ. ಕ , ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯ ರಿಗೂ ಕೆಲ ವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆ ಯಾಗಿದ್ದು ಅವೈಜ್ಞಾನಿಕ ಮತ್ತು ತಾರ ತಮ್ಯ ಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು. ಪ್ರತೀ ಅಂಗಡಿಯವರು
ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನಾದಿಂದ ಮೃತಪಡಲ್ಲ, ಬಡತನದಿಂದ ಮೃತಪಡುವ ಸಾಧ್ಯತೆ ಇದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ರು. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚೇದಿನ್ ತರುವುದಾಗಿ ಹೇಳಿ ಕಾಂಗ್ರೆಸ್‌ನ ದೋಷಗಳನ್ನು ಹೇಳಿ ಭಾವನಾತ್ಮಕವಾಗಿ ಜನರನ್ನು ಸೆಳೆದು ಮತಗಳಿಸಿ ಉನ್ನತ ಅಧಿಕಾರಕ್ಕೇರಿದ್ದರೂ ಜನರ
ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಡಿ ರಾಜ್ಯದಲ್ಲಿ 8೦೦೦ ಕೋಟಿ ರೂ. ಸಂಗ್ರಹವಿದೆ. ಅದರಡಿ ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ವಿತರಣೆಗೆ ಬಂದ ಆಹಾರ ಪೊಟ್ಟಣ ಅಲ್ಲಿನ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಕಡೆಗಳಲ್ಲಿ ಇಂತಹ ಆಹಾರ ಪೊಟ್ಟಣಗಳನ್ನು ಬಿಜೆಪಿ ಪಕ್ಷದ ಮನೆಗಳಲ್ಲಿ
ಬಿಜೆಪಿಯ ಜನಪ್ರತಿನಿಧಿಗಳು ಸರಕಾರದಿಂದ ಜನಸಾಮಾನ್ಯರಿಗೆ ಸಿಗಬೇಕಾದ ಹಕ್ಕನ್ನೂ ರಾಜಕೀಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಕಾಂಗ್ರೆಸ್ ಕಾರ್ಪೊರೇಟರ್‌ಗಳು, ಗ್ರಾ.ಪಂ. ಸದಸ್ಯರಿರುವ ಪ್ರದೇಶಗಳಲ್ಲಿ ಲಸಿಕೆ ಶಿಬಿರ ಆಯೋಜನೆ ಮಾಡಿ ಬಳಿಕ ಅದನ್ನು ರದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪ ಮಾಡಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಹಂಚಿಕೆ,
ಇಂದು ದೇಶದಾದ್ಯಂತ ಕೋವಿಡ್‍ನಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಕೆಲವೊಂದು ಕಸುಬುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಇಂದು ಹೀನಾಯವಾಗಿದೆ ಅದಕ್ಕೆ ಉದಾಹರಣೆ ಎಂಬಂತೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಅದರ ಅಂಗವಾಗಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರು ಇಂದು ಕೋವಿಡ್‍ನಿಂದಾಗಿ ಹೀನಾಯ ಬದುಕನ್ನು ಬದುಕುತ್ತಿದ್ದಾರೆ. ಪ್ರತಿವರ್ಷವು ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶ


















