Home Posts tagged #v4news karnataka (Page 222)

ಅಧಿಕಾರಿಗಳು ಲಂಚದ ಪ್ರವೃತ್ತಿಯಿಂದ‌ ಹೊರಬರಬೇಕು: ಸಂಸದ ಬಿವೈ ರಾಘವೇಂದ್ರ

ಕುಂದಾಪುರ:  ಬೈಂದೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದಾಖಲೆ ಮೊತ್ತದ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಇಲಾಖಾಧಿಕಾರಿಗಳ ಕೆಲಸದ ವೇಗ ನಿರೀಕ್ಷಿತ ಮಟ್ಟದಲ್ಲಿ ಇರದ ಕಾರಣ ಅನುಷ್ಠಾನ ಕುಂಠಿತವಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಹಣ ನೀಡದೆ ಕೆಲಸ ಆಗುವುದಿಲ್ಲ. ಅಧಿಕಾರಿಗಳು ಈ ಪ್ರವೃತ್ತಿಯಿಂದ ಹೊರಬರಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಆಕ್ರೋಶ

ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಸೆ.6 ರಂದು ಉಚಿತ ‘ಪೋಸ್ಟ್ ಕೋವಿಡ್ ಫಿಸಿಯೋಥೆರಪಿ’ ಶಿಬಿರ

ಕೋವಿಡ್ -19 ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸೆ.6 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೋಸ್ಟ್ ಕೋವಿಡ್ ಫಿಸಿಯೋಥೆರಪಿ ಕ್ಯಾಂಪ್ ನಡೆಯಲಿದೆ. ಕೋವಿಡ್ -19 ಸೋಂಕು ತಗುಲಿ ಚೇತರಿಸಿದವರಲ್ಲಿ ಶೇಕಡಾ 87% ವ್ಯಕ್ತಿಗಳಲ್ಲಿ ಆಯಾಸ, ಉಸಿರಾಟದ ತೊಂದರೆ, ಕೀಲು ನೋವು, ಎದೆ ನೋವು ಮತ್ತು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಉಳಿದಿರುವ ಲಕ್ಷಣಗಳನ್ನು ಹೊಂದಿದೆ. ಇದರಿಂದ ಸ್ನಾಯು ಕಾರ್ಯದಲ್ಲಿ ಸಮಸ್ಯೆ,

ಬಂಟ್ವಾಳ: ಮೇಗಿನ ಕುರಿಯಾಳದಲ್ಲಿ 13ನೇ ಶತಮಾನದ ಶಾಸನ‌ ಪತ್ತೆ

ಬಂಟ್ವಾಳ : ತಾಲೂಕಿನ ಮೇಗಿನ‌ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ‌ ನಿರ್ದೇಶಕ ಪ್ರೊ.ಎಸ್‌.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ)ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು

ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ : ಬೆಣ್ಣೆ ರಂಗಪೂಜೆ

ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ದಿನಾಂಕ 30-08-2021ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶ್ರೀಕೃಷ್ಣ ಅಷ್ಟೋತ್ತರ ಶತನಾಮಾವಳಿ, ನೆರವೇರಿ ಮಧ್ಯಾಹ್ನ 12-30 ಕ್ಕೆ ಅಲಂಕಾರ ಪೂಜೆ ರಾತ್ರಿ 07-30 ಕ್ಕೆ ಮಹಾಪೂಜೆ ನೆರವೇರಿ ಮಧ್ಯರಾತ್ರಿ 12: 30ರ ಚಂದ್ರೋದಯದ ಶ್ರೀಕೃಷ್ಣ ಜನ್ಮ ಸಮಯದಲ್ಲಿ 21 ಬಗೆಯ ಮಿಠಾಯಿ 21 ಬಗೆಯ ಹಣ್ಣು ಹಂಪಲು ಶ್ರೀಕೃಷ್ಣ ದೇವರಿಗೆ ಸಮರ್ಪಣೆ ಮಾಡಲಾಯಿತು. ಮಾರನೇ ದಿವಸ ಮೊಸರುಕುಡಿಕೆ ಯಂದು ಸಾಯಂಕಾಲ

CPIM ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

CPIM ಪಕ್ಷದ ಹಿರಿಯ ಸದಸ್ಯರೂ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿಗಳಾದ ಮೋನಪ್ಪ ಬಂಗೇರರವರು(78 ವರ್ಷ) ದೀರ್ಘಕಾಲದ ಅಸೌಖ್ಯದಿಂದಾಗಿ ಬಜಾಲ್ ಜಲ್ಲಿಗುಡ್ಡೆಯಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಮೋನಪ್ಪ ಬಂಗೇರರವರು ತಮ್ಮ ಯೌವನದಲ್ಲಿ ಹಂಚು ಕಾರ್ಮಿಕರಾಗಿ ಹಂಚು ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಾದ ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ

ಗಮನ ಸೆಳೆದ ಕೃಷ್ಣ ಜನ್ಮಾಷ್ಠಮಿಯ ಡಿಸೈನರ್ ವೇರ್

ಪ್ರತಿಯೊಂದು ವಿಶೇಷ ಹಬ್ಬದ ಸಂದರ್ಭದಲ್ಲಿ ಆಯಾ ಹಬ್ಬದ ಮಹತ್ವಕ್ಕೆ ಸಂಬಂಧಿಸಿದ ಫೆಸ್ಟಿವ್ ವೇರ್ ಮೂಲಕ ಫ್ಯಾಶನ್ ಪ್ರಿಯರನ್ನು ಆಕರ್ಷಿಸುತ್ತಿದೆ ಬೆಂಗಳೂರಿನ ಜಿಯಾನಿ ಡಿಸೈನರ್ಸ್ ಸಂಸ್ಥೆ.ಈ ಬಾರಿಯ ಶ್ರೀ ಕೃಷ್ಣಾಷ್ಟಮಿಗೆ ಯಶೋಧೆ ಕೃಷ್ಣ ಪರಿಕಲ್ಪನೆಯ ಧಿರಿಸಿನ ಫೋಟೋ ಶೂಟ್ ಮೂಲಕ ಜಿಯಾನಿ ಡಿಸೈನರ್ ಸಂಸ್ಥೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು . ಜನಪ್ರಿಯ ಮೊಡೇಲ್ ಪ್ರಿಯಾ ಕುಮಾರ್ ಅವರು ಯಶೋಧೆಯಾಗಿ ಆಕರ್ಷಕ ಫೆಸ್ಟಿವ್ ವೇರ್ ನಲ್ಲಿ ಮಿಂಚಿದರು. ಯಶೋಧೆ ಪುಟ್ಟ

ಉಡುಪಿಯಲ್ಲಿ ಪಾಸಿಟಿವಿಟಿ ದರ ಹೆಚ್ಚಳ ಹಿನ್ನೆಲೆ: ವೀಕೆಂಡ್ ಕರ್ಫ್ಯೂ ಜಾರಿ: ಸಚಿವ ಕೋಟಾ

ಕುಂದಾಪುರ: ಪಾಸಿಟಿವಿಟಿ ದರ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಉಡುಪಿ ಜಿಲ್ಲೆಯನ್ನು ಸೇರಿಸಲಾಗಿದೆ. ವಾರಾಂತ್ಯ ಕರ್ಫ್ಯೂನಿಂದ ಜನಸಾಮಾನ್ಯರಿಗೆ ತೊಂದರೆಗಳಾಗುವುದು ಸತ್ಯ. ಆದರೆ ಪಾಸಿಟಿವಿಟಿ ರೇಟ್ ಹೆಚ್ಚಳವಾಗದಂತೆ ಜಾಗೃತೆ ವಹಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪ್ರವಾಸಿ ಮಂದಿರದಲ್ಲಿ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿವೇಶನದ ಭೂ ಸರ್ವೆ ಯ ಕುರಿತು ಸಂಬಂಧಪಟ್ಟ

ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆಗೆ ಎಂ.ಎಸ್ ಮಹಮ್ಮದ್ ಖಂಡನೆ

ವಿಟ್ಲ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮದರಸದಲ್ಲಿ ತಾಲಿಬಾನಿಗಳನ್ನು, ಭಯೋತ್ಪಾದಕರನ್ನು ಸೃಷ್ಟಿ ಮಾಡ್ತಾರೆ ಎಂದು ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ ತಕ್ಷಣವೇ ಅವರು ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ಆಗ್ರಹಿಸಿದರು. ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಟಿ ರವಿ ಅಲ್ಲ ಅವರು ಕೋಟಿ ರವಿಯಾಗಿದ್ದು, ನಮ್ಮ ಮದರಸ ಇಸ್ಲಾಂ ಧರ್ಮದ ದೀನಿನಚೌಕಟ್ಟಿನ ಒಳಗೆ

ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ: ಸಣ್ಣಪುಟ್ಟ ಗಾಯದಿಂದ ಪಾರಾದ ಸವಾರರು

ಕಡಬ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ಬುಧವಾರದಂದು ಸಂಭವಿಸಿದೆ. ಕಳಾರದಿಂದ ಕಡಬ ಕಡಗೆ ಬರುತ್ತಿದ್ದ ಹೀರೋ ಮೆಸ್ಟ್ರೋ ವಾಹನ ಸವಾರ ಪೊಲೀಸ್ ವಾಹನವನ್ನು ಕಂಡು ಎಡಬದಿಗೆ ತಿರುಗಿಸಿದ್ದು, ಈ ಸಂದರ್ಭದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಸಣ್ಣಪುಟ್ಟ ಗಾಯಗೊಂಡ ವಾಹನ ಸವಾರರನ್ನು ತಕ್ಷಣವೇ ಪೊಲೀಸ್ ವಾಹನದಲ್ಲಿ ಕಡಬ

ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ : ಮುಖ್ಯಮಂತ್ರಿಗೆ ಮಡಿವಾಳ ಕ್ಷೇಮಾಭಿವೃದ‍್ಧಿ ಸಂಘ ಮನವಿ

ಬೆಂಗಳೂರು:  ರಾಜ್ಯದಲ್ಲಿ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿ ಒಂದೂವರೆ ವರ್ಷ ಕಳೆದಿದ್ದು, ಕೂಡಲೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ಸಂಘದ ರಾಜ್ಯಾಧ್ಯಕ್ಷ ಬಿ.ಆರ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ದೀಪಕ್ ವಿ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಡಿವಾಳ ಜನಾಂಗ ನಡೆಸಿದ ಬಹು ದಿನಗಳ ಹೋರಾಟದ ಫಲವಾಗಿ ನಿಗಮ