Home Posts tagged #v4news karnataka (Page 230)

ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್‌ : ಓಣಂ ಹಬ್ಬ ಆಚರಣೆ

ಆಯುರ್ವೇದ ಚಿಕಿತ್ಸೆಯ ಮೂಲಕ ಮಂಗಳೂರಿನ ಜನತೆಯ ಮನೆ ಮಾತಾಗಿರುವ ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್‌ನಲ್ಲಿ ಕೇರಳದ ಜನಪ್ರೀಯ ಓಣಂ ಹಬ್ಬವನ್ನು ಆಚರಿಸಲಾಯಿತು. ನಗರದ ವೆಲೆಂಸ್ಸಿಯಾ ಮತ್ತು ಕದ್ರಿಯಲ್ಲಿ ಕಾರ್ಯಚರಿಸುತ್ತಿರುವ ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್ ಕಳೆದ ಹಲವು ವರ್ಷಗಳಿಂದ ಜನತಗೆ ನಗುಮುಗದ ಸೇವೆಯನ್ನು ನೀಡುತ್ತಾ ಜನತೆಯ ಮನೆಮತಾಗಿದೆ. ಇಂದು

ಮಂಗಳೂರು: ಹಳಿ ದಾಟುವಾಗ ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು

ಪ್ರತಿನಿತ್ಯ ಕುಡುಪ್ಪಾಡಿ ದೋಟದಿಂದ ಮಹಾಕಾಳಿಪಡ್ಪುವಿನಲ್ಲಿರುವ ಬೀಡಿ ಬ್ರ್ಯಾಂಚ್ ಗೆ ಬೀಡಿ ಕೊಂಡೊಯ್ಯುತ್ತಿದ್ದ  ಇಬ್ಬರು ಮಹಿಳೆಯರು ರೈಲಿಗೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ವಸಂತಿ (50), ಪ್ರೇಮಾ (48)ಮೃತಪಟ್ಟ ದುರ್ದೈವಿಗಳು.ರೈಲು ಬರುತ್ತಿದ್ದದು ಇವರ ಗಮನಕ್ಕೆ ಬಂದಿರಲಿಲ್ಲ ಎಂದು ತಿಳಿದು ಬಂದಿದೆ. ವಿಷಯ ತಿಳಿದು ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ : ಆನ್‍ಲೈನ್ ಅಣುಕು ಸಿಇಟಿ

ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ, ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಮುಕ್ಕ ಇವರ ವತಿಯಿಂದ ಅಣುಕು ಸಿಇಟಿ ಪರೀಕ್ಷೆಯನ್ನು ಆಗಸ್ಟ್ 22 ಮತ್ತು 23 ರಂದು ಏರ್ಪಡಿಸಲಾಗಿದೆ. ಸಿಇಟಿ ಪರೀಕ್ಷೆಯನ್ನು ಎದುರಿಸುವ ಮಾಹಿತಿಯನ್ನು ಕೊಡಲಾಗುವುದೆಂದು ಕಾಲೇಜಿನ ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪರೀಕ್ಷೆಗಳು

ಅಲೋಶಿಯಸ್ ಕಾಲೇಜಿನ ಡ್ಯಾನಿಯೆಲ್ಲಾ ಆನ್‌ ಎಲ್. ಚೆಯ್ನ್‌ರವರಿಗೆ ಪಿಹೆಚ್.ಡಿ. ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್‌ ಡ್ಯಾನಿಯೆಲ್ಲಾ ಆನ್‌ಎಲ್. ಚೆಯ್ನ್‌ರವರ ಸ್ಟಡೀಸ್‌ ಆನ್‌ದ ಬಯೋ ಡೈವರ್ಸಿಟಿ ಆಫ್ ಫುಡ್‌ ರಿಸೋರ್ಸಸ್‌ ಇನ್ ಮೇಘಾಲಯ ಎಂಬ ಮಹಾಪ್ರಬಂಧಕ್ಕೆ ಹೈದರಾಬಾದ್‌ನ ಓಸ್ಮಾನಿಯಾ ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.ಇವರು ಹೈದರಾಬಾದ್‌ನ ನ್ಯಾಶನಲ್‌ಇನ್ಸ್ಟಿಟ್ಯೂಟ್‌ ಆಫ್ ನ್ಯೂಟ್ರಿಶನ್‌ನ ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರಿಸರ್ಚ್‌

ಗೋವು ನಮ್ಮೆಲ್ಲರ ತಾಯಿ – ಗೋ ಸೇವೆಯೇ ನಮಗೆ ಕರ್ತವ್ಯ –  ದಯಾನಂದ ಜಿ. ಕತ್ತಲ್‌ಸಾರ್

ಮಂಗಳೂರು:  ಗೋವು ಜಗತ್ತಿನೆಲ್ಲರ ತಾಯಿ. ಆಕೆಯ ಸೇವೆಯನ್ನು ಮಾಡ ಬೇಕಾದುದು ನಮಗೆ ಕರ್ತವ್ಯ. ನಮ್ಮ ತಾಯಿಯ ನಂತರದ ಸ್ಥಾನ ಆಕೆಗೇ ಹೋಗುತ್ತದೆ. ಮೂರು ಮೂರ್ತಿಗಳು, ಮೂವತ್ತು ಮೂರು ಕೋಟಿ ದೇವತೆಗಳು ಅಷ್ಟ ಲಕ್ಷ್ಮೀಯರು, ರತಿ, ವಾಣಿ, ಗಿರಿಜೆಯರು ನೆಲೆಗೊಂಡಿದ್ದಾರೆ ಆಕೆಯ ಮೈ ಮೇಲೆ ಹಾಗಾಗಿ ಆಕೆ ಸರ್ವತ್ರ ಪೂಜ್ಯಳು. ಸರ್ವವಂದ್ಯಳೂ ಆಗಿದ್ದಾಳೆ. ಅಂತಹಾ ಗೋಮಾತೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾದ ಅಗತ್ಯ ಇಂದಿದೆ. ಗೋವಿನ ಮಹತ್ವ, ಗೋವಿನಿಂದಾಗುವ

ಮಂಗಳೂರಿನ ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯದಲ್ಲಿ ತಡೆ

ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವ ಕಾರಣದಿಂದ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದು, ಇದರ ಮಾಹಿತಿ ತಿಳಿಯದೇ ಮಂಗಳೂರು ಕಡೆಯಿಂದ ಆಗಮಿಸಿರುವ ನೂರಾರು ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ನೂರಾರು ಮಂದಿ ಲಾರಿ ಚಾಲಕ, ಕ್ಲೀನರ್‌ಗಳು

ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಾಲ ಮರುಪಾವತಿ ಮೊಬೈಲ್ ಆಪ್ ಗೆ ಸಿಎಂ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಾಲ ಮರುಪಾವತಿ ಮೊಬೈಲ್ ಆಪ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ನಿಗಮದ ಸಾಲ ಮರುಪಾವತಿ ಶೇ.90 ರಷ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿಗಮವನ್ನು ಫೈನಾನ್ಸ್ ಕಾರ್ಪೊರೇಷನ್ ಆಗಿ ಪರಿವರ್ತಿಸಲು ಸಲಹೆ ನೀಡಿದರು. ಆ ಮೂಲಕ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಾಗುವುದು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಬಡ

ಆಕ್ಸಿಜನ್ ಉತ್ಪಾದನಾ ಘಟಕ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ನಿಮಿಷಕ್ಕೆ ಐನೂರು ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಈಗಾಗಲೇ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಉದ್ಘಾಟನೆಗೆ ಪೆಟ್ರೋಲಿಯಂ ಸಚಿವರು ಬರುತ್ತಾರೆಂಬ ಮಾಹಿತಿ ಇದೆ. ಹೀಗಾಗಿ ಸ್ವಲ್ಪ ದಿನದ ಬಳಿಕ ಈ ಘಟಕವನ್ನು ಉದ್ಘಾಟನೆ ಮಾಡುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ

ಮೋದೀಜಿ ಮಂತ್ರಿ ಮಂಡಲಕ್ಕೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ಕೆಲಸ ಮಾಡುವೆ: ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನಾಶೀರ್ವಾದ ಯಾತ್ರೆ ಆರಂಭಿಸಿದ್ದೇವೆ. ನರೇಂದ್ರ ಮೋದೀಜಿಯವರ ಸರ್ಕಾರಕ್ಕೆ ಚಿಕ್ಕ ಕಪ್ಪು ಚುಕ್ಕೆಯೂ ಬಾರದಂತೆ ಅತ್ಯಂತ ಪಾರದರ್ಶಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ ಸಚಿವೆಯಾಗಿ ಆಯ್ಕೆಗೊಂಡ ಬಳಿಕ

ಬಿಜೆಪಿ ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದಿಲ್ಲ- ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಮಂಗಳೂರಿನ ಉರ್ವಸ್ಟೋರ್ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ಮಾಜಿ ಸಚಿವ ಬಿ.ರಮಾನಾಥ್ ರೈ ಸೇರಿದಂತೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ರು. ತದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಲ್ಲೂ, ಹೊಸ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಕೆಲವೊಂದು