ರೈಲ್ವೆ ಬೇಡಿಕೆಗಳ ಈಡೇರಿಕೆಗಾಗಿ ರೈಲ್ವೆ ಸಚಿವರಿಗೆ ನಳಿನ್ ಕುಮಾರ್ ಕಟೀಲ್ ಮನವಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಶ್ಣವ್ ರವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ವಿಷಯಗಳ ಕುರಿತು ಕ್ರಮಕೈಗೊಳ್ಳುವಂತೆ ಮನವಿ
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್‍ಪ್ರೀತ್ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಕದನದಲ್ಲಿ ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಜರ್ಮನಿ ಖಾತೆ ತೆರೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದುಕೊಂಡ ಕೋಟ ಶ್ರೀನಿವಾಸ ಪೂಜಾರಿಯವರ ಹುಟ್ಟೂರಾದ ಕೋಟದ ಮನೆಯಲ್ಲಿ ಕುಟುಂಬಿಕರು ಸರಳವಾಗಿ ಸಂಭ್ರಮಿಸಿದರು. ಶ್ರೀನಿವಾಸ ಪೂಜಾರಿಯವರ ಸಚಿವರಾಗುವ ಪ್ರಮಾಣವಚನಕ್ಕೆ ಬೆಂಗಳೂರಿಗೆ ತೆರಳಿದ್ದರೂ ಕೂಡ ಪತ್ನಿ ಶಾಂತಾ ಅವರು ಮನೆಯಲ್ಲಿ ತಮ್ಮ ದೈನಂದಿನ ಕೆಲಸದಲ್ಲಿಯೇ ಮಗ್ನರಾಗಿದ್ದರು. ಕಾರ್ಯಕರ್ತರ ಸದ್ದು ಗದ್ದಲವಿದಲ್ಲದೆ ಕೋಟ ಅವರ ಮನೆ ಸಂಪೂರ್ಣ ಶಾಂತವಾಗಿತ್ತು. ಸಚಿವರಾಗಿ ಪ್ರಮಾಣ ವಚನ
ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ29 ಶಾಸಕರು ಸೇರ್ಪಡೆಗೊಂಡಿದ್ದು, ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ.ಮಾಧುಸ್ವಾಮಿ, ಅರಗಜ್ಞಾನೇಂದ್ರ, ಡಾ. ಅಶ್ವಥ ನಾರಾಯಣ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಕೋಟಾ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೆಲ್ಟರ್ ವೇಟ್ (69ಕೆಜಿ)ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೋಲನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಬುಧವಾರ ಟೋಕಿಯೊ ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಬಾಕ್ಸರ್ ಲವ್ಲಿನಾ ಅವರು ತಮ್ಮ ಎದುರಾಳಿ ವಿಶ್ವಚಾಂಪಿಯನ್ ಟರ್ಕಿಯ ಬುಸೆನಾ ಸುರ್ಮೆನೆಲಿ ವಿರುದ್ಧ ಪರಾಜಯಗೊಳ್ಳುವ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದಂತಾಗಿದೆ. 69ಕೆಜಿ
ನಾವು ನಮ್ಮದಲ್ಲದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡರೆ ಆ ಭಾಷೆ ಬಗ್ಗೆ ಅರಿವು ಹೆಚ್ಚಾಗಿ ಸೌಹಾರ್ದತೆ ಸಾಧ್ಯವಾಗುತ್ತದೆ. ತಮಿಳು-ಕನ್ನಡದ ದೃಷ್ಟಿಯಿಂದ ಇದು ಅತೀ ಮುಖ್ಯ. ಇದರಿಂದ ರಾಜ್ಯಗಳ ನಡುವಿನ ಹಲವು ಸಮಸ್ಯೆಗಳು ಪರಿಹಾರ ಕಾಣಬಹುದು ಎಂದು ಖ್ಯಾತ ಭಾಷಾ ವಿದ್ವಾಂಸರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ತಮಿಳ್ ಸೆಲ್ವಿ ಹೇಳಿದ್ದಾರೆ. ತೆಂಕನಿಡಿಯೂರಿನ ಸರಕಾರಿಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಸಿಯೂಟ ನೌಕರರ ಸಮ್ಮೇಳನವು ಜರಗಿತು. ಸಮ್ಮೇಳನವನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾರವರು ಉದ್ಘಾಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ರಂಗಕ್ಕೆ ಆದ್ಯತೆ ನೀಡುತ್ತಿಲ್ಲ. ಖಾಸಗೀಕರಣವೇ ಸರ್ಕಾರದ ವೇದ ವಾಕ್ಯ ವಾಗಿದೆ. ಸರಕಾರದ ಕೋರೋನಾ ಲಾಕ್ ಡೌನ್ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಬಿಸಿಯೂಟ ತಯಾರಿಸಿ ಬಡಿಸುವ ಕಾರ್ಮಿಕರಿಗೆ ಬಾಕಿ
ಉಡುಪಿ: ಕೆಲವು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ, ಲೆಕ್ಕಪರಿಶೋಧಕನ ಶವವು, ಮನೆಯ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಅಗ್ನಿಶಾಮಕ ದಳದ ಸಹಾಯದಿಂದ ಕಳೇಬರವನ್ನು ಮೇಲೆತ್ತಲಾಗಿದೆ. ವ್ಯಕ್ತಿ ಮೃತಪಟ್ಟು ಒಂದು ವಾರ ಕಳೆದಿರಬಹುದೆಂದು ಹೇಳಲಾಗುತ್ತಿದೆ. ಕಳೇಬರವನ್ನು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿ ಇಲಾಖೆಗೆ ನೆರವಾದರು.
ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ-2021 ಎಂಬ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜಿಸಿದ್ದು, ವಿಶ್ವದ ಎಲ್ಲಾ ಬಿಲ್ಲವ ಪ್ರತಿಭೆಗಳು ಅರಳುವಂತೆ ಮಾಡಿದೆ ಬಿಲ್ಲವಾಸ್ ಕತ್ತಾರ್. ಕೋವಿಡ್‌ನ ಈ ವಿಷಮ ಸ್ಥಿತಿಯಲ್ಲಿ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯಲ್ಲಿ ಬಿಲ್ಲವಾಸ್ ಕತಾರ್‌ನವರು ಕಲ್ಪಿಸಿಕೊಟ್ಟಿದ್ದಾರೆ. ಅಂತರ ಕಾಪಾಡಿ, ಅಂತರ್ಮುಖಿಯಾಗಿ, ದುಗುಡ ದುಮ್ಮಾನಗಳ ಸರಪಳಿಯಲ್ಲಿ ಸಿಲುಕಿರುವ ಅದೆಷ್ಟೋ ಜನರಿಗೆ ತಮ್ಮ ಹಿಂದಿನ ಜೀವನ ಕನಸಿನ
ಮಂಗಳೂರು: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐಸ್‌ಕ್ರೀಂ ಟ್ರೀಟ್ ನೀಡುವುದಾಗಿ ಮಂಗಳೂರಿನ ಪಬ್ಬಾಸ್ ಐಡಿಯಲ್ ಐಸ್‌ಕ್ರೀಂ ಕೆಫೆ ಮೋದಿ ಅವರಿಗೆ ಟ್ವೀಟ್ ಮಾಡಿದೆ. ಪದಕ ಗೆದ್ದು ಬಂದರೆ ನಿಮ್ಮ ಜತೆ ಐಸ್‌ಕ್ರೀಂ ಸವಿಯುವುದಾಗಿ ಒಲಿಂಪಿಕ್ಸ್‌ಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧುಗೆ ಹೇಳಿ



















