ಮಂಗಳೂರಿನ ಪ್ರಸಿದ್ಧ ಗುರುದೇವ್ ಆಂಡ್ ಜಿ.ಡಿ. ಗ್ರೂಪ್‌ನ ಜಾಹೀರಾತು ಸಂಸ್ಥೆಯ ನೂತನ ಶಾಖೆಯು ಉಡುಪಿಯ ತೆಂಕಪೇಟೆಯಲ್ಲಿರುವ ಹೆಡ್‌ಪೋಸ್ಟ್ ಆಫೀಸಿನ ಮುಂಭಾಗದಲ್ಲಿರುವ ಶ್ರೀರಾಮ್ ಆರ್ಕೇಡ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತ್ತು. ನೂತನ ಶಾಖೆಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕರಾದರಘುಪತಿ ಭಟ್, ಇವರು ನೇರವೇರಿಸಿದರು. ದೀಪ ಪ್ರಜ್ವಲನ
ಪತ್ರಿಕೋದ್ಯಮ ಕ್ಷೇತ್ರದಲ್ಲಿ 33 ವರ್ಷ ಸೇವೆ ಸಲ್ಲಿಸಿರುವ ಜಗನ್ನಾಥ ಶೆಟ್ಟಿ ಬಾಳ ಅವರು ರಾಜ್ಯ ಸರ್ಕಾರ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಕಳೆದ 16 ವರ್ಷಗಳಿಂದ ಜಯಕಿರಣ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಿನಿಮಾ ಕ್ಷೇತ್ರದ ವರದಿಯನ್ನು ಮಾಡುವ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಅವರಿಗೆ 2017ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, 2008 ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಒಲಿಯುವ ಸಾಧ್ಯತೆ ಇದೆ. ಚೀನಾದ ಝಿಹುಯಿ ಅವರು ಚಿನ್ನದ ಪದಕ ಗೆದ್ದಿರುತ್ತಾರೆ. ಇದೀಗ ಹಿಂಪಡೆದ ಸಂಘಟಕರು ಚೀನಾದ ಝಿಹುಯಿ ಅವರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದ್ದು, ಒಂದು ವೇಳೆ ಝಿಹುಯಿ ಅವರು ಉದ್ದೀಪನ ಔಷಧಿ ಸೇವಿಸಿರುವುದು ಸಾಬೀತಾದಲ್ಲಿ ಅವರು ಪದಕವನ್ನು ಕಳೆದುಕೊಳ್ಳುವರು. ಇಂತಹ ಸಂದರ್ಭದಲ್ಲಿ ಎರಡನೇ ಸ್ಥಾನದಲ್ಲಿರುವ ಮೀರಾಬಾಯಿ ಚಾನು ಅವರನ್ನು
ಮಂಗಳೂರು: ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಮಾಜಿ ಸಚಿವ ಆಂಜನೇಯ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು.ಬಿಜೆಪಿ ಸರ್ಕಾರ ವಾಮಮಾರ್ಗದಿಂದ ಬಂದದ್ದು. ಜನಾದೇಶದಿಂದ ಬಂದದ್ದು ಅಲ್ಲ. ಶಾಸಕರನ್ನು ಖರೀದಿ ಮಾಡ್ಕೊಂಡು ಸರ್ಕಾರ ರಚನೆ ಮಾಡಿತ್ತು.ಪ್ರಜಾಸತ್ತಾತ್ಮಕವಾಗಿ ರೂಪುಗೊಂಡ ಸರ್ಕಾರ ಕೂಡಾ ಅಲ್ಲ. ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರನ್ನು ಖರೀದಿ ಮಾಡಿ ಜನಸ್ನೇಹಿ ಸರ್ಕಾರ ಅಂದ್ರು. ಇದು ಜನಸ್ನೇಹಿ ಅಲ್ಲ, ಜನವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಹೆಚ್.
ಪುತ್ತೂರು: ಕಾರ್ಗಿಲ್ ಯುದ್ಧದ ಬಳಿಕ ರಾಷ್ಟ್ರ ಭಕ್ತಿಯ ಅನಾವರಣಗೊಂಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಗಳಿಸಿದ ವಿಜಯವು ಎಲ್ಲಾ ದೇಶವಾಸಿಗಳಿಗೆ ಪ್ರೇರಣೆಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದ ಸೈನಿಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ
ಕುಂದಾಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 20 ಲಕ್ಷ ಆಹಾರ ಕಿಟ್ ಗಳನ್ನು ಖರೀದಿಸಿ ಎಲ್ಲರಿಗೂ ನೀಡದೇ ಬಹುತೇಕ ಅನರ್ಹ ಕಟ್ಟಡ ಕಾರ್ಮಿಕರಿಗೆ ಬೈಂದೂರು ಶಾಸಕರು ವಿತರಿಸುತ್ತಿರುವುದನ್ನು ಖಂಡಿಸಿ ಇಂದು ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಶಾಸಕರು ಹಂಚುತ್ತಿರುವ ಆಹಾರ ಕಿಟ್ ಗಳನ್ನು ಗ್ರಾಮಪಂಚಾಯತ್ ನ ವ್ಯಾಪ್ತಿಯಲ್ಲಿರುವ ಎಲ್ಲಾ ನೋಂದಾಯಿತ ಕಾರ್ಮಿಕರಿಗೂ ನೀಡದೇ ತಾರತಮ್ಯ ಮಾಡಲಾಗುತ್ತಿದೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು 2 ವರ್ಷದ ಸಂದರ್ಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದರು. ಅಲ್ಲದೇ ರಾಜಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಇದೀಗ ಬಿಎಸ್ ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೆ ನೀಡಿದಂತ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಮೂಲಕ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ
ಕಾರಿಗೆ ಕಂಟೇನರ್ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಣಿಯೂರು ಕ್ರಾಸ್ ಬಳಿ ಸಂಭವಿಸಿದೆ. ಉಡುಪಿ ಕಡೆಯಿಂದ ಬಂದ ಕಾರು ಉಚ್ಚಿಲ ಹೆದ್ದಾರಿ ಕ್ರಾಸ್ ಬಳಿ ಯುಟರ್ನ್ ಮಾಡುವ ವೇಳೆ ಹಿಂಬದಿಯಿಂದ ಬಂದ ಕಂಟೇನರ್ ಡಿಕ್ಕಿಯಾಗಿದೆ. ಘಟನೆಯಿಂದ ಕಾರಿನ ಹಿಂಭಾಗ ಜಖಂಗೊಂಡಿದೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾವಲುಗಾರನ ತಲೆಗೆ ಹೊಡೆದು ಗೋಣಿಯೊಯೊಳಗೆ ಕಟ್ಟಿ ಹಾಕಿ ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರಿಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಭಾರಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ಲಕ್ಷಾಂತರ ರೂ. ನಗದನ್ನು ಕೊಂಡೊಯ್ದಿದ್ದಾರೆ. ಕಳೆದ ರಾತ್ರಿ ಎರಡು ಗಂಟೆಯ ಸುಮಾರಿಗೆ ಎರಡು ಕಾರಿನಲ್ಲಿ ಆಗಮಿಸಿದ ಎಂಟು ಮಂದಿಯ ತಂಡ ಈ ಕೃತ್ಯ ನಡೆಸಿದೆ. ಕಾವಲುಗಾರ ಕಡಂಬಾರ್ ನಿವಾಸಿ ಅಬ್ದುಲ್ಲ ದರೋಡೆಕೋರರ ಹಲ್ಲೆಯಿಂದ ಗಾಯಗೊಂಡು
ಕೊನೆಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿಂದು ಏರ್ಪಡಿಸಿದ್ದ ಸಮಾರಂಭದಲ್ಲಿ ವಿದಾಯ ಭಾಷಣ ಮಾಡಿದ ಅವರು, ತಮ್ಮ ರಾಜಕೀಯ ಏಳು ಬೀಳುಗಳನ್ನು ಹೇಳುವಾಗ ಭಾವುಕರಾದರು. ಇಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. 75 ವರ್ಷದ ಬಳಿಕ ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟ


















