Home Posts tagged #v4news karnataka (Page 247)

ಕಾರ್ಕಳದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ಆಹಾರ ಕಿಟ್ ವಿತರಣೆ

ಕಾರ್ಕಳ: ಮಲಬಾರ್ ಗೋಲ್ಡ್ ವತಿಯಿಂದ ಕಾರ್ಕಳದ ಶಾಸಕರ ಭವನದಲ್ಲಿ ತಾಲೂಕಿನ ಅರ್ಹ ಬಡ ವರ್ಗದವರಿಗೆ ರೇಷನ್ ಕಿಟ್  ಗಳನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿತರಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ಮ್ಯಾನೇಜರ್ ರಾಘವೇಂದ್ರ ನಾಯಕ್ ಅಜೆಕಾರ್ ಅವರು ಬಡ ಜನತೆಗೆ ಇರುವ ಮಲಬಾರ್ ಗೋಲ್ಡ್ ನ ಸಾಮಾಜಿಕ ಸೌಲಭ್ಯಗಳ ಬಗ್ಗೆ ವಿವರಣೆಗಳನ್ನು ನೀಡಿದರು.ಕಾರ್ಕಳ ನಗರ

ರಾಜೀನಾಮೆ ಸುಳಿವು ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕೊನೆಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ರಾಜೀನಾಮೆಯ ಸುಳಿವು ನೀಡಿದ್ದಾರೆ. ಕೇಂದ್ರದ ವರಿಷ್ಠರು ನೀಡುವ ಆದೇಶವನ್ನು ಚಾಚು ತಪ್ಪದೆ ಪಾಲಿಸುತ್ತೇನೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದಾರೆ. ಇಡೀ

ಮಂಗಳೂರು: ಭಜನಾ ಮಂದಿರಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಕಳವು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮಂಗಳೂರು: ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಭಜನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ಆಗಮಿಸಿರುವ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ‌. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ

ಕರಾವಳಿಯಾದ್ಯಂತ ಬಕ್ರೀದ್ ಹಬ್ಬ ಸಂಭ್ರಮ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಂದು ಕರಾವಳಿಯಾದ್ಯಂತ ಅಚರಿಸಲಾಗುತ್ತಿದೆ. ದಕ್ಷಿಣ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ 6:30ಕ್ಕೆ ಕೆಲವು ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಆರಂಭಗೊಂಡಿದೆ. ಕಳೆದ ಬಾರಿಯೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಕೆಲವೊಂದು ನಿರ್ಬಂಧ ಹೇರಿದ್ದರಿಂದ ಹಬ್ಬದ

‘ಪಾಡ್‍ಕಾಸ್ಟ್’ – ಮಾಹಿತಿ ತಂತ್ರಜ್ಞಾನದ ಹೊಸ ಆಯಾಮ

ಪಾಡ್‍ಕಾಸ್ಟ್ ಮಾಧ್ಯಮ ವೇದಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ ಎಂದು ಹಿರಿಯ ಪತ್ರಕರ್ತ ಶರತ್ ಹೆಗ್ಡೆ ಕಡ್ತಲ ಹೇಳಿದರು. ಇಲ್ಲಿನ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಧ್ವನಿ ಮಾಧ್ಯಮ – ಅಂಗೈಯಲ್ಲಿ ಅವಕಾಶ’ ಮತ್ತು ‘ಅರವಿನ ಅರಮನೆ ಪಾಡ್‍ಕಾಸ್ಟ್ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ

ಪರ್ತಗಳಿ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮಿಗಳು ಅಸ್ತಂಗತ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (76) ಇಂದು ಇಹಲೋಕ ತ್ಯಜಿಸಿ ವಿಷ್ಣುಪಾದ ಸೇರಿದ್ದಾರೆ. 1945ರಲ್ಲಿ ಗಂಗೊಳ್ಳಿಯಲ್ಲಿ ಜನಸಿದ ಶ್ರೀಗಳ ಪೂರ್ವಾಶ್ರಮ ಹೆಸರು ರಾಘವೇಂದ್ರ. ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ1967ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಸನ್ಯಾಸ ಸ್ವೀಕರಿಸಿ 54 ವರ್ಷ ಸುಧೀರ್ಘವಾಗಿ ಮಠವನ್ನು, ಮಠದ ಆಡಳಿತದಲ್ಲಿರುವ ದೇವಾಲಯಗಳನ್ನು , ಮಠದ ಲಕ್ಷಾಂತರ ಶಿಷ್ಯರನ್ನು ಧಾರ್ಮಿಕವಾಗಿ

ಬಿಜೆಪಿ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್: ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದೆನ್ನಲಾದ ಆಡಿಯೋ ಸಂಬಂಧ ಕರ್ನಾಟಕ ಕಾಂಗ್ರೆಸ್ ಪಕ್ಷ, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಎಂದು ಲೇವಡಿ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ

ಉರ್ವ ಮಾರುಕಟ್ಟೆ ಸಂಕೀರ್ಣ : ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ಉರ್ವ ಮಾರುಕಟ್ಟೆ ಸಂಕೀರ್ಣಕ್ಕೆ ಇಂದು ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆಯ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದಅಕ್ಷಯ್ ಶ್ರೀಧರ್ , ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಗಣೇಶ್ ಕುಲಾಲ್, ಸಂಧ್ಯಾ ಮೋಹನ್ ಆಚಾರ್, ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ನಾಮನಿರ್ದೇಶಿತ

ಮಾವಿನ ಎಲೆ 290..! 64% ಡಿಸ್ಕೌಂಟ್ ಆಗಿ 109..!

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಬೇಡಿಕೆ ಇರುತ್ತದೆ. ಆದರೆ ಈಗ ಕಾಲ ಬದಲಾಗಿ ಮಾವಿನ ಎಲೆಗೂ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದು ಆಚ್ಚರಿಯ ಸಂಗತಿಯಾದರೂ ನಂಬಲೇಬೇಕು ಹೌದು ಕಾಲಕ್ಕೆ ತಕ್ಕಂತೆ ಕೋಲ.! ಈಗ ಬದಲಾಗಿದೆ ಆನ್‍ಲೈನ್ ಶಾಪಿಂಗ್ ಆ್ಯಪ್ ಒಂದಾದ ಅಮೇಜಾನ್‍ನಲ್ಲಿ 21 ಮಾವಿನ ಎಲೆಗೆ 290 ರೂಪಾಯಿಯಾಗಿದ್ದು 64% ಡಿಸ್ಕೌಂಟ್ ಆಗಿ 109 ರೂಪಾಯಿಯಾಗಿದೆ. ಮೊನ್ನೆ ಹಲಸಿನ ಬೀಜಕ್ಕೆ ಇಂದು ಮಾವಿನ ಎಲೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು.

ಪತ್ರಕರ್ತ ಡಾ.ಸಂದೀಪ್ ವಾಗ್ಲೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಸೌಹಾರ್ದತೆ ಮತ್ತು ಮಾನವೀಯ ಮೌಲ್ಯವನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಕನ್ನಡ ಪ್ರಭ ದಿನಪತ್ರಿಕೆಯ ವರದಿಗಾರ ಡಾ.ಸಂದೀಪ್ ವಾಗ್ಲೆ ಆಯ್ಕೆಯಾಗಿದ್ದಾರೆ.ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 2020, ನವಂಬರ್ 25ರಂದು ಪ್ರಕಟಗೊಂಡ ಸಂದೀಪ್ ವಾಗ್ಲೆ ಅವರ ವರದಿ‘ ಕೋಮು ಸೌಹಾರ್ದ ತೆಗೆ ಸಾಕ್ಷಿ-ಸೇತುವಾದ ಯಕ್ಷಗಾನ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.