ಮಂಗಳೂರು: ದೇಶದಾದ್ಯಂತ ಇಲ್ಲಿಯ ತನಕ 2 ಲಸಿಕೆ ಪಡೆದವರು ಕೇವಲ 7.78 ಕೋಟಿ ಜನ ಹಾಗೂ ಮೊದಲ ಲಸಿಕೆ ಪಡೆದವರು 14 ಕೋಟಿ (ಶೇ.10) ಜನರು ಮಾತ್ರ ಇಲ್ಲಿಯ ತನಕ ಕೇವಲ ಶೇ.15 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದು, ಈಗಾಗಲೇ 3ನೇ ಕೋವಿಡ್ ಅಲೆ ಪ್ರರಂಭವಾಗಿದ್ದು, ಲಸಿಕೆ ಪ್ರಾರಂಭವಾಗಿ 7 ತಿಂಗಳು ಕಳೆದರೂ ಸರ್ಕಾರ 3ನೇ ಅಲೆ ತಡೆಯಲು ಮುಂಜಾಗೃತ ಕ್ರಮ ಕೈಗೊಳ್ಳಲು
ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು ಕಾಣುವ ಅದೆಷ್ಟೋ ಜನರನ್ನು ನಾವು ಕಾಣಬಹುದು. ಇಂತಹ ಸಾಧನೆ ಮಾಡಬೇಕಾದರೆ ಕಲೆ ಎಂಬುದು ತುಂಬಾನೇ ಮುಖ್ಯ. ನಾನು ನಟ- ನಟಿಯಾಗಬೇಕು ಎನ್ನುವ ಕನಸು ಕಾಣುವ ಪ್ರತಿಯೊಬ್ಬರಲ್ಲಿಯೂ ಕಲೆ ಎಂಬುದು ಇದ್ದೆ ಇರುತ್ತದೆ. ಅಂತವರಲ್ಲಿ “ಸುಶ್ಮಿತಾ ರಾಮ್‍ಕಳ” ಒಬ್ಬರು. ರಾಮಕೃಷ್ಣ. ಪಿ ಹಾಗೂ ಕಲಾವತಿಯವರ ಪ್ರೀತಿಯ
ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ತರುತ್ತೇವೆ ಎನ್ನುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿವಾದಿತ ಹೇಳಿಕೆ ನೀಡಿದ್ದಾರೆ. ಕೊಯಮತ್ತೂರಿನಿಂದ ಚೆನ್ನೈವರೆಗೆ ನಡೆದ ರೋಡ್ ಶೋನಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. “ಮಾಧ್ಯಮವು ನಮ್ಮ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಚಿಂತೆಗಳನ್ನು ಮರೆತುಬಿಡಿ. ಮುಂದಿನ ಆರು ತಿಂಗಳಲ್ಲಿ ನಾವು ಮಾಧ್ಯಮದ ಮೇಲೆ ನಿಯಂತ್ರಣ ಮತ್ತು ಅವುಗಳನ್ನು ನಮ್ಮ ಅಡಿಯಲ್ಲಿ
ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಕುಲಶೇಖರದ ಬಳಿಯ ಕೊಂಗೂರಿನಲ್ಲಿ ಗುಡ್ಡ ಕುಸಿತವಾಗಿದ್ದು, ರೈಲ್ವೆಯ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಕುಲಶೇಖರದ ಬಳಿಯಲ್ಲಿ ರೈಲ್ವೆ ಇಲಾಖೆ ರೈಲ್ವೆಹಳಿ ಪಕ್ಕದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಆದ್ರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು, ನಿರ್ಮಾಣಗೊಂಡಿದ್ದ ತಡೆಗೋಡೆ ಕಾಮಗಾರಿ ಕುಸಿದು ಬಿದ್ದಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20 ರಂದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ತಾಣದಲ್ಲಿ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕೊರೊನಾವೈರಸ್ ಸೋಂಕು ಕಾರಣದಿಂದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಪ್ರಥಮ ಪಿಯುಸಿ ಅಂಕ ಆಧರಿಸಿ ದ್ವಿತೀಯ ಪಿಯುಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದರು.ಈ ಕುರಿತು ಹೇಳಿಕೆ ನೀಡಿರುವ ಪದವಿ
ಪುತ್ತೂರು: ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜು.16ರಂದು ಇರ್ದೆ ಗ್ರಾಮದ ಉಪ್ಪಳಿಗೆ ಎಂಬಲ್ಲಿ ಧನಂಜಯರವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಮನೆ ಅಂಗಳದ ಬದಿಯಲ್ಲಿ ನಿರ್ಮಿಸಲಾದ ತಡಗೋಡೆಯು ಮುಂಜಾನೆಯ ವೇಳೆಗೆ ಹೂವಿನ ಗಾರ್ಡನ್ ಸಹಿತ ಕುಸಿದು ಬಿದ್ದಿದೆ. ಅಂಗಳದಲ್ಲಿ ಬಿರುಕು ಬಿಟ್ಟಿದ್ದು ಮತ್ತಷ್ಟು ಕುಸಿಯುವ ಅಪಾಯದಲ್ಲಿದೆ. ಘಟನೆಯಿಂದಾಗಿ ಲಕ್ಷಾಂತರ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕೆಲವು ದಿನಗಳ ಹಿಂದೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಆರೋಪಿ ಆಲ್ಬರ್ಟ್ ಫೆರ್ನಾಂಡಿಸ್ ಮೂಲತಃ ಬಜ್ಪೆ ನಿವಾಸಿ ಇವರು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು ಈತನ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು . ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು .ಇದೀಗ ಈ ವ್ಯಕ್ತಿ ತಾನು ಮಾಡಿದ ತಪ್ಪು ಅರಿವಾಗಿ ಕಟೀಲಮ್ಮನ ಕ್ಷೇತ್ರಕ್ಕೆ ಬಂದು ತಾನು ಮಾಡಿದ ತಪ್ಪೆಂದು ಕಣ್ಣೀರಿಟ್ಟು
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ 9 ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಆಧರಿಸಿ ಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಶೋಧ ಕಾರ್ಯದಲ್ಲಿ ಚಿನ್ನ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ದಿಢೀರನೇ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಇಂದು
ಮಂಗಳೂರು : ಉರ್ವ ಪೊಲೀಸ್ ಠಾಣೆಗೆ ಬಂದ ಮೂವರು ಅಲ್ಲಿನ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಪ್ರಕರಣದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ನಲ್ಲಿ ನಿರ್ವಹಣೆ ಶುಲ್ಕ ಕೊಡುವುದು ಹಾಗೂ ನೀರಿನ ಸಂಪರ್ಕ ಒದಗಿಸುವ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಮೇ ತಿಂಗಳಲ್ಲಿ ಎರಡು ಪ್ರತ್ಯೇಕ ಪ್ರಕರಣ
ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ,

















