ಮಂಗಳೂರು: ದಿನಾಂಕ :28/09/2025 ರ ಭಾನುವಾರದಂದು ಸೌಹಾರ್ದ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ, ಮೈಸೂರು ಪ್ರಾಂತ್ಯದ ವತಿಯಿಂದ ಸಮಾಲೋಚನಾ ಸಭೆಯನ್ನು ಹೋಟೆಲ್ ಶ್ರೀನಿವಾಸ ಹಂಪನಕಟ್ಟೆ ಮಂಗಳೂರು ಇಲ್ಲಿ ಆಯೋಜಿಸಲಾಯಿತು. ಸಭೆಯ ಉದ್ಘಾಟನೆಯನ್ನು ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಜಿ. ನಂಜನಗೌಡ ಇವರು ನೆರವೇರಿಸಿದರು, ಈ ಸಂದರ್ಭದಲ್ಲಿ ಸಭೆಯಲ್ಲಿ
ಚೆನ್ನೈ: ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 16 ಮಹಿಳೆಯರು, 8 ಮಕ್ಕಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿರುವ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಕರೂರಿನಲ್ಲಿ ಶನಿವಾರ(ಸೆ.27) ಬೃಹತ್ ರ್‍ಯಾಲಿ ಆಯೋಜಿಸಿದ್ದರು. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕಾಲ್ತುಳಿತ
ಪಾಂಡೇಶ್ವರ ಮಹಿಳಾ ಠಾಣೆಯ ASI ರಾಜೇಶ್ ಹೆಗ್ಢೆಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದ ಅವರು ಉರ್ವಸ್ಟೋರ್ ಬಳಿ ಮನೆಮಾಡಿ ನೆಲೆಸಿದ್ದರು,1993 ಬ್ಯಾಚ್ ನಲ್ಲಿ ಪೋಲಿಸ್ ಇಲಾಖೆಗೆ ಸೆರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಮೊದಲ ಕರ್ತವ್ಯ ವನ್ನು ನೆರೆವೆರಿಸಿದ್ದರು. ಜನಸ್ನೇಹಿ ಪೋಲಿಸರಾಗಿದ್ದ ಅವರು 32 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು,ಅವರು ಮಡದಿ ,ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಳಿದ್ದಾರೆ.
ಕಾಪು: ಶ್ರೀ ಹೊಸಮಾರಿಗುಡಿಯ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದಸೇವಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹತ್ತು ಜನರನ್ನು ವ್ಯವಸ್ಥಾಪನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿಯವರು ಅಮ್ಮನ ಆಲಯದಲ್ಲಿ ಸುಧೀರ್ಘ ಸಮಯದಿಂದ ,ಪೌರೋಹಿತ್ಯದಿಂದ ಮೊದಲ್ಗೊಂಡು ಸ್ವಚ್ಛತೆಯ ತನಕದ ಸೇವೆಯಲ್ಲಿ ತೊಡಗಿ, ಮಾರಿಗುಡಿಯನ್ನು ದೇಶದ ಪ್ರಧಾನ ಶ್ರದ್ಧಾ ಕೇಂದ್ರವನ್ನಾಗಿ ರೂಪಿಸುವಲ್ಲಿ
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ: ನೆನಪು” ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಅವರು
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಹಾಗೂ ಪೊಲೀಸ್ ಇಲಾಖೆ, ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ ಮಾತನಾಡಿ ‘ನಮ್ಮ ದೇಶ ಅತ್ಯಂತ ಹೆಚ್ಚು
ಮಳೆಯಿಂದಾಗಿ ಕೆಟ್ಟು ಹೋಗಿರುವ ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ಕೂಡ ಅನುದಾನ ನೀಡದ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಶಾಸಕಿ ಕುಮಾರಿ ಭಾಗಿರತಿ ಮುರುಳ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ ರಾಕೇಶ್ ರೈ ಕೆಡಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ವಿನಯ್ ಕುಮಾರ್
ಹೆಜಮಾಡಿ: ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮತ್ತು ಘಾಟ್ಗೆ ಕರ್ಕೇರ ಪವರ್ ಇಂಡಸ್ಟ್ರೀಸ್ ಜಂಟಿ ಆಶ್ರಯದಲ್ಲಿಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಅವರ ಸಹಯೋಗದಲ್ಲಿ ರಕ್ತದಾನ ಶಿಬಿರದಿನಾಂಕ 05.10.2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ 1.00ರ ವರೆಗೆ ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿ. ಪ್ರಧಾನ ಕಛೇರಿ, ಕರ್ಕೇರ ಟವರ್ಸ್ ಕಣ್ಣಂಗಾರ್ ಬೈಪಾಸ್, ಹೆಜಮಾಡಿ ಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ
ಬೆಂಗಳೂರು : ಲಯನ್ಸ್ ಕ್ಲಬ್ ಆಫ್ ಬೆಂಗ್ಳೂರ್ ಗ್ರೇಟರ್ ಬನ್ನೇರುಘಟ್ಟ ಡಿಸ್ಟ್ರಿಕ್ಟ್ 317E ಮಹಿಳಾ ಸದಸ್ಯರು ನವರಾತ್ರಿ ಹಬ್ಬವನ್ನು ಬಹಳ ವಿಶಿಷ್ಟ ಮತ್ತು ಅರ್ಥಪೂರ್ಣವಾದ ರೀತಿಯಲ್ಲಿ ಆಚರಿಸಿದರು. ದೇವಿಯ ಒಂಬತ್ತು ಅವತಾರಗಳನ್ನು ಪ್ರತಿನಿಧಿಸುವ ಬಣ್ಣಗಳ ಮೂಲಕ ಲಯನ್ಸ್ ಸದಸ್ಯರು ನವರಾತ್ರಿ ಸಂಭ್ರಮವನ್ನು ಆಚರಿಸಿದರು. ನಿರ್ಮಲ ಶ್ವೇತದಿಂದ ನಾಜೂಕಾದ ಗುಲಾಬಿ ಬಣ್ಣದವರೆಗೆ, ಪ್ರತಿಯೊಂದು ಛಾಯೆಯು ಶಕ್ತಿ, ದಯೆ, ಧೈರ್ಯ ಮತ್ತು ಜ್ಞಾನವನ್ನು ಪ್ರತಿಬಿಂಬಿಸಿತು .ಈ
ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಶಾಲೆಯ ಕ್ರೀಡಾ ಸ್ಪರ್ಧೆಯ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಂಗಲ್ಪಾಡಿ ಜಿಎಲ್‌ಪಿ ಶಾಲೆಯ ವಿದ್ಯಾರ್ಥಿ ಹಸನ್ ರಝಾ (10) ಸಾವನ್ನಪ್ಪಿದ ದುರ್ದೈವಿ . ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಶಾಲೆಯ ಕ್ರೀಡಾ ಸ್ಪರ್ಧೆ ನಡೆಯುವಾಗ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.



























