Home Posts tagged V4News (Page 16)

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕ ಹೃದಯಾಘಾತಕ್ಕೆ ಬಲಿ

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕನೊಬ್ಬ ಹೃದಯಾಘಾತವಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.ಪುತ್ತೂರು ಬೆಟ್ಟಂಪ್ಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್. (25ವ) ಹೃದಯಾಘಾತಕ್ಕೆ ಬಲಿಯಾದ ಯುವಕ.ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬಿದಿರೆ: ಕ್ರಾಸ್‌ಕಂಟ್ರಿ – ಆಳ್ವಾಸ್ ಸತತ 21ನೇ ವರ್ಷಗಳಿಂದ ಚಾಂಪಿಯನ್

ಮೂಡುಬಿದಿರೆ: ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿ ಪಡೆದಿದೆ.ಪುರುಷರ ವಿಭಾಗದಲ್ಲಿ ಮೊದಲ 5 ಸ್ಥಾನಗಳನ್ನು ಆಳ್ವಾಸ್ ಕಾಲೇಜಿನ ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೋಹಿತ್ (ಪ್ರಥಮ), ಆದೇಶ್ ಕುಮಾರ್ (ದ್ವಿತೀಯ), ಶುಭಂ(ತೃತೀಯ), ರೋಹಿತ್(4ನೇ

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ಆರೋಪದಲ್ಲಿ ಮೂವರ ಬಂಧನ

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಎರುಂಬು ರಸ್ತೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ವಿಟ್ಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಿಟ್ಲದ ಮಂಗಳಪದವು ನಿವಾಸಿ ಸನತ್ ಕುಮಾರ್, (23) , ವಿಟ್ಲ ಕಸಬಾ ಗ್ರಾಮದ ರಾಝಿಕ್ (23)ಮತ್ತು ಮಂಗಳಪದವು ನಿವಾಸಿ ಚೇತನ್ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 6.27 ಗ್ರಾಂ ಗಾಂಜಾ, 3 ಮೊಬೈಲ್ ಗಳು ಸಣ್ಣ ಚೂರಿ, ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ

ಕನ್ನಡ ಜಾಗೃತಿ ಸಮಿತಿ ದ.ಕ. ಜಿಲ್ಲಾ ಸದಸ್ಯರಾಗಿ ರಾಜೇಶ್ ಕಡಲಕೆರೆ ಆಯ್ಕೆ

ಮೂಡುಬಿದಿರೆ : ಬ್ಲಾಕ್ ಕಾಂಗ್ರೆಸ್ ವಕ್ತಾರ, ರಂಗನಟ,ವಾಗ್ಮಿ ರಾಜೇಶ್ ಕಡಲಕೆರೆ ಅವರು ಕನ್ನಡ ಜಾಗೃತಿ ಸಮಿತಿ ದ.ಕ.ಜಿಲ್ಲಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಪ್ರತೀ ಜಿಲ್ಲಾ ಮಟ್ಟದಲ್ಲಿ ಈ ಸಮಿತಿಯನ್ನು ರಚಿಸಿದ್ದು ದ.ಕ.ಜಿಲ್ಲೆಯಿಂದ 5 ಮಂದಿ ಸದಸ್ಯರ ಪೈಕಿ ಮೂಡುಬಿದಿರೆಯಿಂದ ರಾಜೇಶ್ ಕಡಲಕೆರೆ ಅವರನ್ನು ನೇಮಕ ಮಾಡಲಾಗಿದೆ. ಹಲವಾರು ತುಳು,ಕೊಂಕಣಿ

ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ವಿಶೇಷ ವಿಜ್ಞಾನ ಉಪನ್ಯಾಸ

ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 11 ಗುರುವಾರದಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಸ್ಟ್ರೋ ಫಿಸಿಕ್ಸ್ (IIA) ಇಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ ಯಾಗಿರುವ ಕು. ಸವಿತಾ ಎಂ. ಎಸ್, ದೀಪ ಬೆಳಗಿಸಿ ಮತ್ತು ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಂಭ್ರಮದ ಓಣಂ ದಿನಾಚರಣೆ: ಉತ್ಸವಂ – 2025

ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಓಣಂ ದಿನವನ್ನು ಸೆಪ್ಟಂಬರ್ 03ನೇ ಬುಧವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಇದರ ಕಾರ್ಯದರ್ಶಿ ಅಕ್ಷಯ್ ಕೆ ಸಿ ಸಾಂಪ್ರದಾಯಿಕವಾಗಿ ದೀಪ ಬೆಳಗಿ ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ವಿಶೇಷವಾಗಿ ಕಾಲೇಜಿನ ಮುಂಭಾಗವನ್ನು ಮಾವಿನ ತೋರಣ ಹಾಗು ತೆಂಗಿನ ಸಿರಿಯಿಂದ ಅಲಂಕರಿಸಲಾಗಿತ್ತು. ಆಗಮಿಸಿದ

ಮಂಗಳೂರು:ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು:ಬ್ಯಾಗೇಜ್ ನೌಕರರ ಬಂಧನ ಮತ್ತು ಚಿನ್ನಭರಣ ಹಾಗೂ ನಗದು ವಶ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಆ.೩೦ರಂದು ಬೆಳಿಗ್ಗೆ ಬೆಂಗಳೂರಿನಿಂದAIR INDIA EXPRESS ವಿಮಾನದಲ್ಲಿ ಪ್ರಯಾಣ ಮಾಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣದ ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ನ್ನು ಪಡೆದು ಚೆಕ್ ಮಾಡಿದಾಗ56 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ 4,50,೦೦೦/-) ಕಳವು ಆಗಿದ್ದು, ಈ ಬಗ್ಗೆ ಪ್ರಯಾಣಿಕರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಅ.ಕ್ರ ೧೫೭/೨೦೨೫ ಕಲಂ ೩೦೩(೨)

ತತ್ರಪತಿಗಳೆಲ್ಲ ಛತ್ರಪತಿಗಳಾದ ಕೊಡೆಗಿಹುದು ಚರಿತೆ

ಮಳೆಗಾಲದಲ್ಲಿ ನನೆಯದಿರಲು ನಾನಾ ದಾರಿ ಇದೆ. ಕೊರಂಬು, ತತ್ರ ಇಳಿವಣಿಗೆಯಲ್ಲೂ ಕೊಡೆಯರಳಿ ಹೊಸ ಹೂಲೋಕ ತೆರೆದುಕೊಳ್ಳುತ್ತದೆ.ಮರ, ಲೋಹದ ಕೋಲಿನ ಸುತ್ತ ಮಡಚುವ ಮಾಡು ಇರುವುದೇ ಕೊಡೆ. ಅದು ಮಳೆ, ಬಿಸಿಲಿನಲ್ಲಿ ರಕ್ಷಣೆಗೆ. ಗೌರವ ಸೂಚಕವಾಗಿಯೂ ಅದು ಇತ್ತು. ಗ್ರೀಸ್ ಒಂಬ್ರಿಯೊ, ಲ್ಯಾಟಿನ್‌ನ ಉಂಬ್ರಾ ಆಗಿ ಅಂಬ್ರೆಲ್ಲಾ ಆಗಿದೆ. ಕ್ರಿ. ಶ1610 ರಲ್ಲಿ ಈ ನುಡಿ ಬಳಕೆಗೆ ಬಂದುದಾಗಿ ಆಕ್ಸ್ಫರ್ಡ್ ಪದನೆರಕೆ ಹೇಳುತ್ತದೆ.ಕ್ರಿ. ಪೂ2450 ರ ಈಜಿಪ್ತ್ ಗೋಡೆ ಚಿತ್ರದಲ್ಲಿ ಕೊಡೆ

ಅಮೆರಿಕದಲ್ಲೇ ಬೆಳೆದ ಹಣ್ಣು ಪಾವ್ ಪಾವ್

ಪಾವ್ ಪಾವ್ ಹಣ್ಣಿನ ರುಚಿ ಮಾವು ಮತ್ತು ಬಾಳೆಹಣ್ಣು ತಿಂದಂತೆ ಇರುತ್ತದಂತೆ. ಒಳಗೆ ಬೀಜಗಳು ಇರುತ್ತವೆ. ಹೊರಗೆ ನೋಡಲು ಬೆಣ್ಣೆ ಹಣ್ಣಿನಂತೆ ಕಾಣುವ ಇದು ಹಸಿರು ಮತ್ತು ಹಳದಿ ಬಣ್ಣದಲ್ಲಿ ಸಿಗುತ್ತದೆ.ಮಧ್ಯ ಅಮೆರಿಕ ಮತ್ತು ತೆಂಕಣ ಅಮೆರಿಕದಲ್ಲಿ ಇದು ಕಾಡು ಹಣ್ಣಾಗಿಯೇ ಹೆಚ್ಚು ಪ್ರಸಿದ್ಧ. ಯುಎಸ್‌ಎ, ಕೆನಡಾದಗಳ ತೋಟಗಳಲ್ಲಿ ನಡು ನಡುವೆ ಬೆಳೆಸುವ ಮರವಾಗಿದೆ. ಹಾಗಾಗಿ ಪಾವ್ ಪಾವ್ ಹಣ್ಣು ಬುಡಕಟ್ಟು ಜನರನ್ನು ದಾಟಿ ಪೇಟೆಯವರಿಗೂ ಅಲ್ಲಿ ಸಿಗುತ್ತದೆ.ಅಮೆರಿಂಡಿಯನ್

ಮೂಡುಬಿದಿರೆ ;ಪೋನ್ ಕರೆ ಮೂಲಕ ಮಹಿಳೆಗೆ ಕಿರುಕುಳ ತನ್ನದೇ ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ ಮೂಡುಬಿದಿರೆ ಇನ್ಸ್ ಪೆಕ್ಟರ್

ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೋವ೯ರ ಮೊಬೈಲ್ ನಂಬರ್ ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ. ಜಿ. ಅವರು ಕೇಸು ದಾಖಲಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಶಾಂತಪ್ಪ ಪ್ರಕರಣ ಆರೋಪಿ. ಈತ ಮೂಡುಬಿದಿರೆ ಠಾಣೆಯಲ್ಲಿ ಕಳೆದ ಕೆಲ ಸಮಯಗಳಿಂದ ಕರ್ತವ್ಯ ಪೊಲೀಸ್ ಸಿಬ್ಬಂದಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದ.ಕೆಲವು ದಿನಗಳ ಹಿಂದೆ ಈ ಭಾಗದ ಮಹಿಳೆಯೊಬ್ಬರು ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿ