ಕಡಬ: ಕಡಬ ಪಟ್ಟಣ ಪಂಚಾಯತ್ ನಡೆದ ಪ್ರಥಮ ಚುನಾವಣೆಯಲ್ಲಿ ಶೇ 79.83 ಮತದಾನವಾಗಿದ್ದು, ಯಾವುದೇ ಗೊಂದಲವಿಲ್ಲದೆ ಬೆಳಿಗ್ಗೆ 7 ರಿಂದ ಸಂಜೆ ಐದರ ತನಕ ಶಾಂತಿಯುತ ಮತದಾನವಾಗಿದೆ,32 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದ್ದು, ಒಟ್ಟು ಹದಿಮೂರು ವಾರ್ಡ್ಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ಕಣಕಕ್ಕಿಳಿಸಿದ್ದು,
ತನ್ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆಗಸ್ಟ್ 17, 2025 ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು.ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ
ಪಡುಬಿದ್ರಿ:ಮೊಹಮ್ಮದನ್ ಹೆಲ್ಸಿಂಗ್ ಹ್ಯಾಂಡ್ ದೀನ್ ಸ್ಟ್ರೀಟ್, ಪಡುಬಿದ್ರಿ ಇವರ ವತಿಯಿಂದ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆನ್ಲೈನ್ (Online) ವೀಡಿಯೊ ಭಾಷಣ ಸ್ಪರ್ಧೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಸುಜ್ಲಾನ್ ಕಾಲೊನಿ ಸಭಾಂಗಣದಲ್ಲಿ 17 ರ ಭಾನುವಾರದಂದು ಸಂಜೆ ಜರುಗಿತು. ಮೊಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ ನಿಯಾಜ್ ಸ್ವಾಗತಿಸಿ ಮಾತನಾಡಿ, “ಮೊಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಬದ್ಧವಾಗಿದೆ.
ಪಡುಬಿದ್ರಿ:ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಪಡುಬಿದ್ರಿಯಲ್ಲಿ ಭವ್ಯವಾಗಿ ಹಮ್ಮಿಕೊಳ್ಳಲಾಯಿತು. ಈ ಸಮಾವೇಶಕ್ಕೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ನೇತೃತ್ವ ವಹಿಸಿದ್ದರು. ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವಿಫ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ತತ್ವ ಮತ್ತು ಮೌಲ್ಯಗಳನ್ನು ಜನರೊಳಗೆ ತಲುಪಿಸುವ ಅಗತ್ಯವನ್ನು
ಪಡುಬಿದ್ರೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 47/2024 ಮತ್ತು ಬೈಂದೂರು ಠಾಣಾ ಅಪರಾಧ ಕ್ರಮಾಂಕ 240/2024ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಆಪಾದಿತರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಕೊಡಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ವೈ.ಟಿ ರಾಘವೇಂದ್ರ ವಿಶೇಷ ಸರಕಾರಿ ಅಭಿಯೋಜಕರು, ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಫಾಸ್ಟ್ ಟ್ರ್ಯಾಕ್ -(ಪೋಕ್ಸ್), ಉಡುಪಿ ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಐ.ಪಿ.ಎಸ್ ಹರಿರಾಮ್ ಶಂಕರ್ ಅವರು ಜಿಲ್ಲಾ
ಪಡುಬಿದ್ರಿ :ಕಾಪು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜನೆಯಲ್ಲಿ ಹೆಜಮಾಡಿ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2025 – 26 ಭಾನುವಾರದಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಎಸ್ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶವಿದೆ. ಯುವ ಸಮೂಹ ಕ್ರೀಡೆಯಲ್ಲಿ
ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಹಿನ್ನೆಲೆ ರವಿವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ದೇವರ ದರ್ಶನ ಪಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರು, ಬಿಜೆಪಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜೋಡ್ ಘಾಟಿ ಎಂಬ ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ
ಮೂಡುಬಿದಿರೆ: ಹಿರಿಯ ಆಯರ್ವೇದ , ಅಲೋಪತಿ ವೈದ್ಯ ಡಾ. ಎಂ. ರಾಮ ಭಟ್ ( 92) ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ಅರಮನೆ ರಸ್ತೆಯ ತಮ್ಮ ಮಹಾಲಸಾ ನಿವಾಸದಲ್ಲಿ ಅ17 ರಂದು ನಿಧನ ಹೊಂದಿದರು. ಅವರು ಸಹೋದರ, ಸಹೋದರಿಯರು, ಪುತ್ರ ಹೋಮಿಯೋ ಪತಿ ವೈದ್ಯ ಡಾ. ಗಂಗಾಧರ ಭಟ್ , ಇಬ್ಬರು ಪುತ್ರಿಯರು, ಸೊಸೆ ಡಾ. ವಿನಯಾ ಜಿ. ಭಟ್ ಸಹಿತ ಬಂಧುವರ್ಗವನ್ನು ಅಗಲಿದ್ದಾರೆ.1956ರಲ್ಲಿ ಎಲ್.ಎ. ಎಂ. ಎಸ್ ಪದವೀಧರ ವೈದ್ಯರಾಗಿ ಬೆರಳೆಣಿಕೆಯ ವೈದ್ಯರಿದ್ದ ಕಾಲದಲ್ಲಿ 1958 ರಿಂದ […]
ಹಳೆಯಂಗಡಿ:79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ಓಂಕಾರೇಶ್ವರೀ ಮಂದಿರ(ರಿ) ಹಾಗೂ ಮುಲ್ಕಿಹೋಬಳಿ 9 ಮಾಗಣೆಯ ಮುಂಡಾಲ ಸಮಾಜ ಸೇವಾ ಟ್ರಸ್ಟ್(ರಿ) ವತಿಯಿಂದ ಜಂಟಿಯಾಗಿ ನಡೆಸಲಾಯಿತು. ಅಧ್ಯಕ್ಷರಾದ ಶ್ರೀ ಟಿ .ಸದಾಶಿವ ಕುಂದರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. 9 ಮಾಗಣೆ ಮುಂಡಾಲ ಸಮಾಜದ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಶಂಕರ ಮಾಸ್ಟರ್ ಗೋಳಿಜೋರ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ನೂರಾರು ವರ್ಷಗಳಿಂದ ದೇಶದ



























