Home Posts tagged V4News (Page 33)

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ : ಶಾಲೆಗೆ ನೂತನ ವಾಹನ ಹಸ್ತಾಂತರ

ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಂಟಕಲ್ಲು ಇದರ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಇಂದು ಶತಮಾನೋತ್ಸವದ ಮನವಿ ಪತ್ರ ಬಿಡುಗಡೆ ಹಾಗೂ ಶಾಲೆಗೆ ನೂತನ ವಾಹನ ಹಸ್ತಾಂತರ ಮತ್ತು ಬೆಂಚು-ಡೆಸ್ಕುಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ವೇದಿಕೆ ಅನಾವರಣ, ಶತಮಾನೋತ್ಸವ ಸಮಿತಿ ಕಛೇರಿ ಉದ್ಘಾಟನೆ, ಶಾಲಾ

ಕಸಬಾ ಬೆಂಗ್ರೆಯಲ್ಲಿ ಸಿಪಿಐಎಮ್‌ನಿಂದ ರಾಜಕೀಯ ಸಮಾವೇಶ

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ,ಬೆಲೆ ಏರಿಕೆ, ನಿರುದ್ಯೋಗ- ರೈತರ ಭೂಸ್ವಾಧೀನ ನೀತಿಯ ವಿರುದ್ಧ CPIMದಕ್ಷಿಣ ‌ಕನ್ನಡ ಜಿಲ್ಲೆಯಾದ್ಯಂತ 2025 ಆಗಸ್ಟ್ 3 ರಿಂದ 11ರ ವರೆಗೆ ನಡೆಯುವ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಇವತ್ತು ಮಂಗಳೂರಿನ CPIM ದಕ್ಷಿಣ ಭಾಗದ ಕಸಬಾ ಬೆಂಗ್ರೆ ಪ್ರದೇಶದ ಫುಟ್ಬಾಲ್ ಮೈದಾನದ ಸಮೀಪ ಪಿ‌.ಜಿ.ಪಾಯಿಂಟ್ ಬಳಿ ರಾಜಕೀಯ ಸಮಾವೇಶ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು CPIM ಬೆಂಗ್ರೆ ಮುಖಂಡರಾದ ನೌಶಾದ್

ಭಾರತಕ್ಕೆ ಡಿಜಿಟಲ್ ಸ್ವಾತಂತ್ರ್ಯ ಮತ್ತು ಯುವ ಶಕ್ತಿ ಅಗತ್ಯ: ಅಜಯ್ ಶೆಟ್ಟಿ

ನವ ದಿಲ್ಲಿ: ಟರುಣ್ ಚೂಘ್, ಕಪಿಲ್ ಮಿಶ್ರಾ, ದೇವೇಂದ್ರ ಪಾಲ್ ವತ್ಸ್ ಮತ್ತು ಪವರ್ ಮಿತ್ರ ಸಂಸ್ಥೆಯ ಸ್ಥಾಪಕ ವಿಕೇಶ್ ಶರ್ಮಾ ಹೀಗೆ ಹಲವು ಗಣ್ಯರ ಉಪಸ್ಥಿತಿಯಲ್ಲಿ, ಅಜಯ್ ಅವರು ಭಾರತವನ್ನು ಡಿಜಿಟಲ್ ಹಾಗೂ ಆಧ್ಯಾತ್ಮಿಕ ಶಕ್ತಿಯಾಗಿ ರೂಪಿಸಬೇಕೆಂಬ ದೃಷ್ಟಿಕೋನವನ್ನು ಹಂಚಿಕೊಂಡರು.ವಿಷ್ಣು ಪುರಾಣದ ಉಲ್ಲೇಖದೊಂದಿಗೆ, “ಭಾರತವು ವಿಶ್ವದ ಅತ್ಯಂತ ಪುರಾತನ ನಾಗರಿಕತೆ” ಎಂಬುದನ್ನು ನೆನಪಿಸಿ, ನಾವು ಮತ್ತೆ ವಿಶ್ವಗುರು ಆಗುವ ಸ್ಥಿತಿಗೆ ಬಂದಿರುವೆವು

ತುಳು ಭಾಷೆಗೆ ಶೀಘ್ರ ಅಧಿಕೃತ ಸ್ಥಾನಮಾನ ಲಭಿಸಲಿ : ಚಂದ್ರಕಲಾ ನಂದಾವರ

ಮಂಗಳೂರು: ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಹಳೆಯ ಭಾಷೆಯಾಗಿದ್ದರೂ ರಾಜ್ಯದ ಅಧಿಕೃತ ಸ್ಥಾನಮಾನ ಇನ್ನೂ ದೊರಕದಿರುವುದು ವಿಷಾದನೀಯ, ಶೀಘ್ರವಾಗಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಲಭಿಸಲಿ ಎಂದು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ ಅವರು ಹೇಳಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಸಹಯೋಗದಲ್ಲಿ ಶನಿವಾರ ಉರ್ವ ತುಳು ಭವನದಲ್ಲಿ ಆಯೋಜಿಸಿದ

ಬೆಳ್ಮಣ್ :ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿAಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಆಗಸ್ಟ್ 9, 2025 ರಂದು ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು ಬೆಳ್ಮನ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಕುಂದಾಪುರ: ಕಾಂತಾರ ಖ್ಯಾತಿಯ “ಸ್ಟಾರ್ ಕಂಬಳ ಕೋಣ” ಇನ್ನು ಬರೀ ನೆನಪು

ಕುಂದಾಪುರ: ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕೋಣ ಇನ್ನು ನೆನಪು ಮಾತ್ರ.ಕಾಂತಾರ ಸಿನೆಮಾದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ ‘ಅಪ್ಪು’ ಸಾವನ್ನಪ್ಪಿದೆ. ಇದರೊಂದಿಗೆ ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ. ಕರಾವಳಿಯಲ್ಲಿ ಕಂಬಳ ಕೋಣಗಳನ್ನು ಮನೆಯ ಸದಸ್ಯರಂತೆಯೇ ಕಾಣಲಾಗುತ್ತದೆ.ಅದಕ್ಕೆ ಬೇಕಾದ ಆಹಾರ ಆಶ್ರಯ ಆರೈಕೆ…ಹೀಗೆ

ಮೂಡುಬಿದಿರೆ:ಕೃಷಿಯಿಂದ ಬೆಂಝ್ ಕಾರಿನವರೆಗೆ – ಪರಿಶ್ರಮವೇ ಯಶಸ್ಸಿನ ಬೀಗ: ರಾಜೇಶ್ ನಾಯ್ಕ್

ಮೂಡುಬಿದಿರೆ: ಇಂದಿನ ಯುಗದಲ್ಲಿ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡುವುದು ಕೇವಲ ಪರಂಪರೆಯ ನಿರ್ವಹಣೆಯಲ್ಲ, ಅದೊಂದು ಜಾಣ ಆಯ್ಕೆ ಎಂದು ಸಾವಯವ ಕೃಷಿಕ ಹಾಗೂ ಶಾಸಕ ರಾಜೇಶ್ ನಾಯ್ಕ್ ನುಡಿದರು.ಅವರು ಆಳ್ವಾಸ್ ಮ್ಯಾನೆಜ್ಮೆಂಟ್ ವಿಭಾಗದ ಟ್ರೆöÊಬ್ಲೇಜ್ ವೇದಿಕೆ ಶುಕ್ರವಾರ, ಕುವೆಂಪು ಹಾಲ್‌ನಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ- ‘ನೆಲದಿಂದ ನೆಲೆವರೆಗೆ: ಕೃಷಿ ಉದ್ಯಮಿಯ ಯಶೋಗಾಥೆ’ ಕರ‍್ಯಕ್ರಮದಲ್ಲಿ ಮಾತನಾಡಿದರು.ಕೃಷಿಯಲ್ಲಿ ವರ್ಷದಲ್ಲಿ ಕೇವಲ ಎರಡು ತಿಂಗಳು

ತೆಂಕಮಿಜಾರು ಗ್ರಾ. ಪಂ. ಸದಸ್ಯ ಜೆ.ಕೆ.ಹಸನಬ್ಬ ನಿಧನ

ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ಜೆ.ಕೆ.ಹಸನಬ್ಬ ( 56) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ತೆಂಕಮಿಜಾರು ಗ್ರಾಮ ಪಂಚಾಯತ್ ಗೆ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.ಪರೋಪಕಾರ, ಪಂಚಾತಿಕೆಯಲ್ಲಿ ಮುಂಚೂಣಿಯಲ್ಲಿದ್ದ ಹಸನಬ್ಬ ಅವರು ತೋಡಾರು,ಮೂಡುಬಿದಿರೆ ಪರಿಸರದಲ್ಲಿ ಜನಪ್ರಿಯರಾಗಿದ್ದರು.ಮಾಜಿ ಸಚಿವ ದಿ.ಅಮರನಾಥ ಶೆಟ್ಟರ ಜೆ.ಡಿ.ಎಸ್.ನಲ್ಲೇ

ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ:’ಬ್ಯಾಕ್ ಟು ಊರು’ ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ: ಸಂಸದ ಕ್ಯಾ. ಚೌಟ

ನವದೆಹಲಿ: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ

ಅಲೋಶಿಯಸ್ ವಿವಿಯ ನಿವೇದಿತ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಶಾಸ್ತ್ರ ಶಾಲೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಿವೇದಿತರವರು ಮಂಡಿಸಿದ “Impact of Large-scale Retailing on Consumers and Small Traders: A Study with Reference to Dakshina Kannada District” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ. ಇವರು ಯುನಿವರ್ಸಿಟಿ ಕಾಲೇಜು