Home Posts tagged V4News (Page 690)

ತಲ್ಲೂರು ಕೊರೋನಾ ಮುಕ್ತ ಗ್ರಾಮವಾಗಬೇಕು:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಮಹಾಮಾರಿ ಕೊರೋನಾ ಹೊಡೆದುರುಳಿಸಲು ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಗಟ್ಟಿಯಾಗಿ ನಿಂತಿದೆ. ಕಾರ್ಯಪಡೆಯವರು ಮನೆಮನೆಗೆ ಭೇಟಿ ನೀಡಿ, ಸಭೆ ನಡೆಸಿ ಶ್ರಮ ಹಾಕಿದ್ದರಿಂದಾಗಿ ನಿಮ್ಮ ವ್ಯಾಪ್ತಿಯಲ್ಲಿ 80ರಷ್ಟಿದ್ದ ಪಾಸಿಟಿವ್ ಪ್ರಕರಣ ಈಗ 8ಕ್ಕೆ ಬಂದು ತಲುಪಿದೆ. ಈ ಸಂಖ್ಯೆ ಶೂನ್ಯಕ್ಕಿಳಿದು ತಲ್ಲೂರು ಗ್ರಾಮಪಂಚಾಯತ್ ಶೀಘ್ರವೇ ಕೊರೋನಾ ಮುಕ್ತವಾಗಬೇಕು ಎಂದು

ಲಸಿಕೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ:ಎಲ್ಲವೂ ಪಾರದರ್ಶಕವಾಗಿದೆ: ಸಚಿವ ಕೋಟ ಸ್ಪಷ್ಟನೆ

ಕುಂದಾಪುರ: ಸರ್ಕಾರ ಹೊರಡಿಸಿರುವ ನಿಯಮಗಳ ಪ್ರಕಾರವಾಗಿಯೇ ಲಸಿಕೆ ಹಂಚಿಕೆಯಾಗುತ್ತಿದೆ. ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವಾಗ ಕೆಲವರಿಗೆ ಬಿಜೆಪಿಯವರು ಲಸಿಕೆ ಕೊಡುತ್ತಿದ್ದಾರೆ ಎಂದು ಅನಿಸಿರಬಹುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಲಸಿಕೆ ಹಂಚಿಕೆ ಪಾರದರ್ಶಕವಾಗಿಯೇ ನಡೆಯುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು. ಮಂಗಳವಾರ ತಲ್ಲೂರು ಗ್ರಾ.ಪಂ ನಲ್ಲಿ ನಡೆದ ಕೋವಿಡ್ ಟಾಸ್ಕ್‌ಫೋರ್ಸ್ ಸಭೆಯ

ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಆರೋಪಿಗಳು ದೋಷಿ ಎಂದು ತೀರ್ಪು

ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ತೀರ್ಪು ಇಂದು ಪ್ರಕಟಗೊಂಡಿದ್ದು, ಮೂವರು ಪ್ರಮುಖ ಆರೋಪಿಗಳು ದೋಷಿಗಳೆಂದು ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ನೀಡಿದ್ದಾರೆ. ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ರಾಜೇಶ್ವರಿ ಶೆಟ್ಟಿ, ರಾಜೇಶ್ವರಿ ಶೆಟ್ಟಿ ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಆರೋಪಿಗಳಾಗಿದ್ದರು. ಆರೋಪಿಗಳು ದೋಷಿ ಎಂದು ನ್ಯಾಯಾಲಯ

ತೊಕ್ಕೊಟ್ಟುವಿನಲ್ಲಿ ಪೊಲೀಸರಿಂದ ಬಿಗಿ ತಪಾಸಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ತೊಕ್ಕೊಟ್ಟುವಿನಲ್ಲಿ ಉಳ್ಳಾಲ ಪೊಲೀಸರಿಂದ ಬಿಗು ತಪಾಸಣೆ ಕೈಗೊಂಡಿದ್ದಾರೆ. ಉಳ್ಳಾಲ ಪಿಎಸ್‌ಐ ರೇವಣ್ಣ ಸಿದ್ದಯ್ಯ ಅವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಹಲವು ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.  

ಆಲೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳುಗಾರಿಕೆ : ಸೂಕ್ತ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

ಆಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ಅತಿ ಹೆಚ್ಚಾಗಿ ಅಕ್ರಮ ಮರಳುಗಾರಿಕೆ ಹೆಚ್ಚಾಯಿತು. ತಾಲೂಕಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ್ ಹೇಳಿದರು. ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ಹಿಂದೆ ಮರಳುಗಾರಿಕೆ ನಡೆಸುತ್ತಿದ್ದ ರಸ್ತೆಗಳು ಸರ್ಕಾರದಿಂದ ಅನುಮತಿ ಪಡೆದು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೆ ಇತ್ತೀಚೆಗೆ ಅಕ್ರಮ ಮರಳುಗಾರಿಕೆ

ಸೌಕೂರು ಏತ ನೀರಾವರಿ ಯೋಜನೆ ಮೂಲ ನಕ್ಷೆ ಬದಲಾದರೆ ಪರಿಶೀಲನೆ : ಬಿ.ವೈ ರಾಘವೇಂದ್ರ ಹೇಳಿಕೆ

ಕುಂದಾಪುರ: ಆಕಸ್ಮಾತ್ ಸೌಕೂರು ಏತ ನೀರಾವರಿ ಯೋಜನೆಯ ಮೂಲನಕ್ಷೆ ಬದಲಾವಣೆಯಾಗಿದೆ ಎಂದಾದರೆ ಈ ಬಗ್ಗೆ ಪರಿಶೀಲನೆ ಮಾಡೋಣ. ಕುಡಿಯಲು ಹಾಗೂ ಕೃಷಿಗೆ ನೀರು ನೀಡಲು ಸೌಕೂರು ಹಾಗೂ ಸಿದ್ದಾಪುರ ಎರಡು ಯೋಜನೆಗಳು ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು. ಇಲ್ಲಿನ ಹೆಮ್ಮಾಡಿಯ ಜ್ಯೂವೆಲ್ ಪಾರ್ಕ್ನ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಆರೋಪಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ

ನವೆಂಬರ್ ವರೆಗೂ ಉಚಿತ ಪಡಿತರ ವಿತರಣೆ – ಪ್ರಧಾನಿ ಮೋದಿ ಘೋಷಣೆ

ಕಳೆದ ಬಾರಿ ಕೊರೋನಾ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತವಾಗಿ ಆಹಾರಧಾನ್ಯ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ದೇಶದ 80 ಕೋಟಿ ಜನರಿಗೆ ನವಂಬರ್ ವರೆಗೂ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುವುದು ಎಂದು ಭಾಷಣದಲ್ಲಿ ಪ್ರಧಾನಿ ಮೋದಿ

ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಕೊಟ್ಟ ದೂರಿನ ಶೀಘ್ರ ತನಿಕೆಗೆ ಸಿಪಿಐ ಒತ್ತಾಯ

ಮಂಗಳೂರಿನ ಪ್ರಖ್ಯಾತ ವೈದ್ಯ ಡಾ| ಬಿ ಶ್ರೀನಿವಾಸ ಕಕ್ಕಿಲ್ಲಾಯರು ಮತ್ತು ಜಿಮ್ಮೀಸ್ ಮಾರ್ಕೇಟಿನ ಸಿಬ್ಬಂದಿ ಮಧ್ಯೆ ನಡೆಯಿತೆನ್ನಲಾದ ಮಾತುಕತೆಗಳ ರಹಸ್ಯ ಸಿಸಿ ಟಿವಿ ದೃಶ್ಯವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಜಿಮ್ಮೀಸ್ ಸುಪರ್ ಮಾರ್ಕೇಟ್ ಮಾಲಕರ ವಿರುದ್ಧ ಹಾಗೂ ಜಿಮ್ಮೀಸ್ ಮಾಲಕ ಮತ್ತು ಪೈ ಎಂಬವರು ಡಾ| ಕಕ್ಕಿಲ್ಲಾಯರನ್ನು, ಕಮ್ಯುನಿಷ್ಟ್ ಪಕ್ಷವನ್ನು, ಡಾಕ್ಟರರ ತಂದೆ ಬಿ ವಿ ಕಕ್ಕಿಲ್ಲಾಯರನ್ನು ದೂಷಿಸುತ್ತಾ ಫೋನು ಮಾತುಕತೆ

ಎಸೆದರೆ ಚಿಗುರುವ ಮಾಸ್ಕ್..!

ಕೊರೊನಾ ಸೋಂಕಿನ ನಿಯಂತ್ರಣದ ಸಲುವಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾಸ್ಕ್ ಗಳು ಬಂದಿವೆ. ಮಂಗಳೂರು ಸಮೀಪದ ಗ್ರಾಮಾಂತರ ಪ್ರದೇಶದ ಯುವಕನೊಬ್ಬ ಪರಿಸರ ಸ್ನೇಹಿ ಮಾಸ್ಕ್ ನಿರ್ಮಿಸಿ ದೇಶದಾದ್ಯಂತ ಗಮನ ಸೆಳೆದಿದ್ದಾನೆ. ಈ ವಿನೂತನ ಮಾಸ್ಕ್ ನಲ್ಲಿ ಸಸ್ಯದ ಬೀಜಗಳನ್ನು ಅಳವಡಿಸಲಾಗಿದ್ದು, ಮಾಸ್ಕ್ ಬಳಸಿ ಬಿಸಾಡಿದಾಗ ಮಾಸ್ಕಿನಲ್ಲಿ ಅಳವಡಿಸಲಾದ ತರಕಾರಿ ಬೀಜಗಳು ಗಿಡವಾಗಿ ಬೆಳೆಯುತ್ತವೆ. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಕೆಗೆ ಶಿಫಾರಸು ಮಾಡಲಾಗಿದೆ.