ಬಂಟ್ವಾಳ: ಉಡುಪಿ ಜಿಲ್ಲೆಯ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ ನಿಂದ ಕೇರಳದ ಕಾಸರಗೋಡಿಗೆ ವಿದ್ಯುತ್ ವಿತರಣಾ ಲೈನ್ ಮತ್ತು ಟವರ್ ನಿರ್ಮಾಣದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಭೂಮಿ ಕಳೆದುಕೊಳ್ಳಲಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಹಾಗೂ ಪರಿಹಾರದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನ
ಕೊಚ್ಚಿನ್: ಐಪಿಎಲ್ ಮಾದರಿಯಂತೆ ವಾಲಿಬಾಲ್‌ನಲ್ಲೂ ಹೊಸ ಲೀಗ್ ಆರಂಭವಾಗಿದ್ದು, ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಇಂದು ಕೊಚ್ಚಿನ್ ನಲ್ಲಿ ನಡೆದಿದೆ. ಮಂಗಳೂರಿನ ಆಟಗಾರ ಅಶ್ವಲ್ ರೈ ಅವರು ದಾಖಲೆಯ ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡದ ಪಾಲಾಗಿದ್ದಾರೆ. ಅಶ್ವಲ್ ರೈ ಅವರನ್ನು 15 ಲಕ್ಷ ರೂ. ಬೆಲೆಗೆ ಕೋಲ್ಕತ್ತಾ ತಂಡ ಖರೀದಿಸಿತು. ಇವರಂತೆ ಕಾರ್ತಿಕ್ ಎ ಮತ್ತು ಜೆರೋಮ್ ವಿನಿತ್ ಅವರನ್ನು ಪ್ರೈಮ್ ವಾಲಿಬಾಲ್ ಹರಾಜಿನಲ್ಲಿ ಕ್ರಮವಾಗಿ ಕೊಚ್ಚಿ ಬ್ಲೂ
ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾನ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರನ್ನು ದಕ್ಷಿಣಕನ್ನಡ ಜಿಲ್ಲೆಯ ಶಾಸಕರ ನಿಯೋಗದಿಂದ ಭೇಟಿ ಮಾಡಿ ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ಅಲ್ಲಲ್ಲಿ ನಡೆಯತ್ತಿದ್ದು, ಉಪ್ಪಿನಂಗಡಿಯಲ್ಲಿ ಮಂಗಳವಾರ ನಡೆದ ಘಟನೆಯನ್ನು ಪ್ರಸ್ತಾಪಿಸಲಾಯಿತು. ಪೋಲೀಸರ ಮೇಲೆ ಹಲ್ಲೆ, ಠಾಣೆಗೆ ಪ್ರವೇಶಿಸಿ ಸಿಬ್ಬಂದಿಗಳ ಮೇಲೆ ದುರ್ವರ್ತನೆ ತೋರಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು
ಮಂಗಳೂರಿನ ರೊಸಾರಿಯೋ ಶಾಲಾ-ಕಾಲೇಜು ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂನ್ನು ತೆರೆಯಲಾಯಿತು. ಬಳಿಕ ಮತಪತ್ರಗಳ ವಿಂಗಡನೆ ಮಾಡಲಾಯಿತು. 10:45ರ ಸುಮಾರಿಗೆ ಮತ ವಿಂಗಡನೆ ಕಾರ್ಯ ಪೂರ್ಣಗೊಂಡಿದ್ದು, ಕೆಲಹೊತ್ತಿನಲ್ಲಿ ಮತ ಎಣಿಕೆಗೆ ಚಾಲನೆ ಸಿಗಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ದ್ವಿ ಸದಸ್ಯತ್ವ ಸ್ಥಾನಕ್ಕೆ ಡಿ.10ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ
ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯವು ಭರದಿಂದ ಸಾಗುತ್ತಿದ್ದು, ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಮಾಜಿ ಸಚಿವ ಎಚ್.ಡಿ ರೇವಣ್ಣರ ಪುತ್ರ ಡಾ.ಸೂರಜ್ ರೇವಣ್ಣ, 2247 ಮತಗಳನ್ನು ಪಡೆದುಕೊಂಡಿದ್ದು, ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಡಿಕೇರಿ: 20 ಕ್ಷೇತ್ರಗಳ 25 ಸ್ಥಾನಗಳಿಗೆ ಡಿ.10ರಂದು ನಡೆದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಕೊಡಗು ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಪ್ರತಸ್ಪರ್ಧಿ ಮಂಥರ್ ಗೌಡ ಅವರ ವಿರುದ್ಧ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಇನ್ನು ನಗರದ ರೋಜಾರಿಯೋ ಶಾಲಾ-ಕಾಲೇಜು ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕಾ ಕಾರ್ಯ ಆರಂಭವಾಗಿದೆ. ಬೆಳಿಗ್ಗೆ 7.50ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು ಸುಮಾರು 8 ಗಂಟೆಯಿಂದ ಮತಗಳ ಎಣಿಕಾ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆ
ಪುತ್ತೂರು: ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ. ಈ ಮಹಾಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಜೀವನದಲ್ಲಿ ಭಗವಂತ ಕೊಟ್ಟ ಅವಕಾಶದಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಡಿ.21ರಿಂದ 28 ರವರೆಗೆ ನಡೆಯಲಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ
ಹೊಸ ತಳಿಯ ಒಮಿಕ್ರಾನ್ ಸೋಂಕಿನ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟಲು ಶೀಘ್ರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು. ಅವರು ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ವೈರಾಣುಗಳು ರೂಪಾಂತರಿಯಾಗಿ ಬದಲಾಗುತ್ತಾ ಇರುತ್ತದೆ. ಅದಕ್ಕೆ ಮುನ್ನೆಚ್ಚರಿಕೆಯಾಗಿ ರಾಜ್ಯ ಸರ್ಕಾರ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಬೇಕು. ಜನರನ್ನು ಗೊಂದಲ ಸೃಷ್ಠಿಸುವ ಬದಲು
ಪುತ್ತೂರು: ದೈವ ಸೇವಾಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಮಾಡುತ್ತಿದ್ದ ಬನ್ನೂರು ನಿವಾಸಿ ಭರತ್ ಭಂಡಾರಿ ಅನಾರೋಗ್ಯದಿಂದ ನ.29ರ ನಸುಕಿನ ಜಾವ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿಯವರ ಪುತ್ರ ಭರತ್ ಭಂಡಾರಿ ಅವರು ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಅವರು ಜಾಂಡೀಸ್ ಖಾಯಿಲೆಗೆ ತುತ್ತಾಗಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ತಂದೆ




















