Home Posts tagged #v4newskarnataka (Page 199)

ಜನದಟ್ಟಣೆ ನಿಯಂತ್ರಿಸಲು ಗಿಲ್ಬರ್ಟ್ ಡಿಸೋಜಾರವರ ಸರಳ ಸೂತ್ರ….!

ಜನದಟ್ಟಣೆ ನಿಯಂತ್ರಣ ಹಾಗೂ ಕೊರೋನಾ ಹರಡುವಿಕೆಯನ್ನು ತಡೆಯುವಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದ್ದು, ಅದನ್ನು ಸರಳ ಸೂತ್ರ ಅನುಸರಿಸುವ ಮೂಲಕ ಪಾಲಿಸಬಹುದು ಎಂಬ ಸರಳ ಸೂತ್ರವೊಂದನ್ನು ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ನೇತೃತ್ವದ ತಂಡ ಪ್ರಸ್ತಾಪಿಸಿದೆ. ಕಳೆದ ವರ್ಷ ಹಂಪನಕಟ್ಟೆ, ಕಂಕನಾಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ

ಉಡುಪಿಯಲ್ಲಿ ನಾಗರಿಕ ಸಮಿತಿಯಿಂದ ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ ; ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಕಾನೂನಿನ ಪ್ರಕ್ರಿಯೆಗಳು ನಡೆದ ಬಳಿಕ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ, ಸಮಕ್ಷಮದಲ್ಲಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ, ಅಪರಿಚಿತ ಮಹಿಳೆಯ ಶವ, ಮತ್ತು ನಗರದ ಸಾರ್ವಜನಿಕ ಸ್ಥಳದಲ್ಲಿ ಮೃತಪಟ್ಟಿರುವ ಅಪರಿಚಿತ

ಪತ್ರಿಕಾ ದಿನಾಚರಣೆ : ಮ್ಯೋಗ್ಲಿಂಗ್ ಸ್ಮರಣೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಕನ್ನಡ ಪತ್ರಿಕೋದ್ಯಮದ ಮೂಲಪುರುಷ “ಮಂಗಳೂರ ಸಮಾಚಾರ “ಪತ್ರಿಕೆಯ ಸಂಸ್ಥಾಪಕ ಸಂಪಾದಕ ಹೆರ್ಮನ್ ಫ್ರೆಡ್ರಿಕ್ ಮ್ಯೋಗ್ಲಿಂಗ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆ ಹಾಗೂ ಮ್ಯೋಗ್ಲಿಂಗ್ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭ

ಕೊರೊನಾ ಹಿನ್ನಲೆ ಲಾಕ್‌ಡೌನ್ ನಂತರ ಬರೋಬ್ಬರಿ 68 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊರೊನಾ ಪ್ರಕರಣ ಇಳಿಕೆಯ ಹಿನ್ನೆಲೆ ರಾಜ್ಯ ಸರ್ಕಾರ ಜೂನ್.22ರ ನಂತರ ಷರತ್ತು ಬದ್ಧವಾಗಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು. ಆದರೆ ತಾಂತ್ರಿಕ ಕಾರಣ ಹಾಗೂ ತೆರಿಗೆ ವಿನಾಯಿತಿ, ಬಸ್ ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಖಾಸಗಿ ಬಸ್ ಮಾಲಕರು ಸರ್ಕಾರದ ಜೊತೆ ಮಾತುಕತೆ ನಂತರ ಇಂದಿನಿಂದ ತಮ್ಮ ಸಂಚಾರ ಆರಂಭಿಸಿಲು

ಶ್ರೀನಿವಾಸ್ ವಿವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ & ಟೂರಿಸಂ:- ಆನ್‌ಲೈನ್ ಮೂಲಕ ಅಡುಗೆ ಸ್ಪರ್ಧೆ ಆಯೋಜನೆ

ಶ್ರೀನಿವಾಸ್ ಯೂನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ & ಟೂರಿಸಂ ಇದರ ಮೂಲಕ ಆನ್‌ಲೈನ್ ಅಡುಗೆ ಸ್ಪರ್ಧೆ “ಉಪಹಾರ ಮತ್ತು ಅದರ ಸಂಬಂಧಿತ ಭಕ್ಷ್ಯಗಳ ಪಟ್ಟಿ”ಯ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದಾರೆ. ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನ ಶ್ರೀನಿವಾಸ ಯೂನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಟೂರಿಸಂನ ವತಿಯಿಂದ ಭವಿಷ್ಯದ ಬಾಣಸಿಗರಾಗಲು ಬಯಸುವ ದ್ವಿತೀಯ ಪಿಯುಸಿ ಹಾಗೂ

ಪುತ್ತೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

ಪುತ್ತೂರು: ನಾಡಪ್ರಭು ಕೆಂಪೇಗೌಡರ ಹೆಸರಿನ ಜೊತೆಗೆ ಅವರ ಸಾಧನೆಗೂ ಬಹಳ ಮಹತ್ವವಿದ್ದು, ಅವರ ದೂರದೃಷ್ಟಿ, ಜನಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿದ ಕೆಂಪೇ ಗೌಡರು ಕರ್ನಾಟಕವನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದ್ದಾರೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಹೇಳಿದರು.ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ

ಪುತ್ತೂರು ನಗರಸಭೆ ಕಚೇರಿ ಕಟ್ಟಡ, ಮಳೆ ನೀರು ಕೊಯ್ಲು ಅಳವಡಿಕೆಗೆ ಶಿಲನ್ಯಾಸ

ಪುತ್ತೂರು: ಕುಡಿಯುವ ನೀರು ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ದಿನದ ೨೪ ಗಂಟೆಗಳ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಭಿಗಳಾಲು ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ ನಡೆಯಲಿರುವ ನೂತನ ಕಚೇರಿ ಕಟ್ಟಡ ಮತ್ತು ಮಳೆ ನೀರು ಕೊಯ್ಲು ಅಳವಡಿಕೆಯ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ

ಶ್ರೀನಿವಾಸ ಹೊಟೇಲ್ ಕಟ್ಟಡದ ಕುಸಿತದ ವದಂತಿ: ಗಾಳಿ ಸುದ್ದಿ ಎಬ್ಬಿಸಿತ್ತು ವಾಟ್ಸಪ್ ಬಿರುಗಾಳಿ

ಮಂಗಳೂರಿನ ಹಂಪನಕಟ್ಟೆಯ ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ. ಕಟ್ಟಡ ಕುಸಿಯುವ ಭೀತಿಯಿಂದಾಗಿ ಆ ಭಾಗದಲ್ಲಿ ಪೊಲೀಸರು ರಸ್ತೆ ಸಂಚಾರವನ್ನು ಕಡಿತಗೊಳಿಸಿದ್ದಾರೆ ಎಂಬ ವದಂತಿ ಹರಡಿದೆ. ಈ ಬಗ್ಗೆ ಶ್ರೀನಿವಾಸ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟಿನ ನಿರಂಜನ್ ರಾವ್ ಬಳಿ ಮಾಹಿತಿ ಕೇಳಿದಾಗ, ವಾಟ್ಸಪ್ ನಲ್ಲಿ ಏನೇನೋ ಬರುತ್ತಿರುವುದು ಗಮನಕ್ಕೆ ಬಂದಿದೆ. ಕಟ್ಟಡದ ಕೆಲವು ಕಡೆ ನವೀಕರಣದ ಕಾಮಗಾರಿ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸಕ್ಕೆ

ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ : ಜಗದೀಶ್ ಶೇಣವ

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 26ರ ಸಂಜೆ 4ರಂದು ವೆಬೆಕ್ಸ್ ಮೂಲಕ ವಿಚಾರಗೋಷ್ಠಿಯನ್ನು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ್ ಶೇಣವ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಹತ್ಯೆ