Home Posts tagged #v4stream (Page 284)

ಲಾಕ್ ಡೌನ್ : ಕೋಲ್ಕೊತ್ತಾದ ಕುಟುಂಬಕ್ಕೆ ಪ್ರಯಾಣಕ್ಕೆ ನೆರವಾದ ಟೀಂ ಬಿ ಹ್ಯೂಮನ್

ಲಾಕ್‌ಡೌನ್ ಸಮಯದಲ್ಲಿ ಕೊಲ್ಕತ್ತಾದಿಂದ ಬಂದು ನಗರದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದ ಮಿಶ್ರಾ ಮತ್ತು ಅವರ ಪತ್ನಿಗೆ ಇದೀಗ ಟೀಂ – ಬಿ ಹ್ಯೂಮನ್ ತಂಡವು ನೆರವಾಗಿದೆ. ಕೆಲಸ ನೀಮಿತ್ತ ಬಂದು, ಇಲ್ಲಿ ಯಾವುದೇ ಕೆಲಸ ಸಿಗದೇ, ಆಹಾರಕ್ಕೂ ಪರದಾಟ ನಡೆಸುತ್ತಿದ್ದ ಮಿಶ್ರಾರವರಿಗೆ ಕೊಲ್ಕತ್ತಾ ತೆರಳಲು ರೈಲು ಟಿಕೇಟ್ ಮತ್ತು ಪ್ರಯಾಣಕ್ಕೆ ಬೇಕಾದ ವೆಚ್ಚವನ್ನು

ವೃದ್ಧೆಯೊಬ್ಬರ ಕಣ್ಣಿನಲ್ಲಿತ್ತು ಜೀವಂತ ಹುಳ : ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಯಶಸ್ವಿ ಚಿಕಿತ್ಸೆ

ಪ್ರಖ್ಯಾತ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದ ವೈದ್ಯರು ವೃದ್ಧೆಯೊಬ್ಬರ ಕಣ್ಣಿನಿಂದ ಜೀವಂತ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ತೀವ್ರವಾದ ಕಣ್ಣು ನೋವಿನಿಂದ ಬಳಲುತ್ತಿದ್ದ 74 ವರ್ಷದ ವೃದ್ಧೆಯ ಕಣ್ಣಿನಿಂದ ವೈದ್ಯರಾದ ಡಾ. ಕೃಷ್ಣ ಪ್ರಸಾದ್ ಅವರ ತಂಡ ತುರ್ತು ಚಿಕಿತ್ಸೆ ನಡೆಸಿ ಈ ಹುಳ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಕಣ್ಣು ನೋವಿನಿಂದ ಬಳಲುತ್ತಿದ್ದ ವೃದ್ಧೆ, ಜೂ 1 ರಂದು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದ್ದರು.

100% placement for MCA students of Srinivas University

Mangaluru, June 9th: Placements for the 2020 batch of Master of Computer Applications at Srinivas University, Pandeshwar, Mangalore, a booming success with over 30 companies’ opportunities given to students for recruitment and internship.  Prof.Subramanya Bhat, Dean of CCIS said that despite the challenges faced due to Covid-19, we could able to conduct several placements

Srinivas University had organized Online Quiz Competition

Mangaluru: Department of BBA Honors/Logistics and Supply Chain /Hospital Administration/Public Administration /CMA of College of Management and Commerce, Srinivas University had organized Online Quiz Competition on Environment topic for their students on Monday 7th June 2021. II year BBA Logistics & Supply Chain student Mr. Joel James, II year BBA Honors students Mr.

ಆರೋಪಿಗಳ ದಸ್ತಗಿರಿಗೆ ಸಹಕರಿಸಿದ ಗೃಹರಕ್ಷಕ ಸಿಬ್ಬಂದಿಗೆ ’ಪ್ರಶಂಸನಾ ಪತ್ರ’

ಉಪ್ಪಿನಂಗಡಿ : ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಸಹಕರಿಸಿದ ಗೃಹರಕ್ಷಕ ಸಿಬ್ಬಂದಿ ಕುಸುಮಾ ಭಟ್ ಅವರಿಗೆ ಡಿವೈಎಸ್‌ಪಿ ಡಾ.ಗಾನಾ ಪಿ ಕುಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಬಾಟಲಿಯಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಸಹಕರಿಸಿದ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಜೂನ್ ೬ ರಂದು ಬಂಟ್ವಾಳ ತಾಲೂಕಿನ

ಕುಳಾಯಿಯಲ್ಲಿ ಟ್ರಾನ್ಸ್‍ಪೋರ್ಟ್ ಕಚೇರಿಗೆ ಆಕಸ್ಮಿಕ ಬೆಂಕಿ

ಕುಳಾಯಿಯ ಹೊನ್ನಕಟ್ಟೆಯ ಕಟ್ಟಡವೊಂದರ ಮೊದಲ ಅಂತಸ್ತಿನಲ್ಲಿದ್ದ ಟ್ರಾನ್ಸ್‍ಪೋರ್ಟ್ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕದ್ರಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? : ಎನ್‍ಎಸ್‍ಯುಐನ ಮನೀಷ್ ಜಿ ರಾಜ್

ಕೊರೋನಾದಿಂದ ದೇಶದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? ಎಂದು ಎನ್‍ಎಸ್‍ಯುಐ ಜನರಲ್ ಸೆಕ್ರೆಟರಿ ಮನೀಷ್ ಜಿ ರಾಜ್ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಶಿಕ್ಷಣ ಸಚಿವರು ಇತ್ತೀಚಿಗೆ ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿದ್ದಾರೆ. ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಒಂದು ಪ್ಲಾನಿಂಗ್ಸ್ ಇಲ್ಲ. ಪರೀಕ್ಷೆ ರದ್ದು

ಕೋವಿಡ್ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ: ಶಾಹುಲ್ ಹಮೀದ್

ಕೊರೋನಾ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ರಾಜ್ಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,2020-21 ಸಾಲಿನಲ್ಲಿ ಕಡಿತ ಗೊಳಿಸಿ 152 ಕೋಟಿ ಮೀಸಲಿಡಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪರಿತಾಪಿಸುವಂತಾಗಿದೆ.

ಬಿ.ಸಿ. ರೋಡ್: ಇಂಧನ ಸಾಗಾಟದ ಟ್ಯಾಂಕರ್ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ

ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಮುಂಭಾಗದಲ್ಲಿ ನಡೆದ ಘಟನೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಸಾಗಿಸಿಕೊಂಡು ಹೋಗುವ ಟ್ಯಾಂಕರ್‌ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಲಾಗಿದ್ದು, ಸಮೀಪದಲ್ಲೇ ಇದ್ದ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಕೂಡಲೇ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಬೈಕಂಪಾಡಿಯಿಂದ ಬೆಂಗಳೂರಿಗೆ

ಮೊಬೈಲ್ ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಬಿಟ್ಟ ಬಾಲಕಿ

ಕೊಣಾಜೆ : ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಪ್ರಶ್ನಿಸಿದಕ್ಕೆ ಬಾಲಕಿಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿಯಲ್ಲಿ ನಡೆದಿದೆ.ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ