ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯು ಕಡಬ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಡಬ ಠಾಣಾ ಉಪನಿರೀಕ್ಷಕ ರುಕ್ಮನಾಯ್ಕ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ಭಾಗವಹಿಸಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈ
ಬಿಲ್ಲವ ಸಮಾಜದ ಕಣ್ಮಣಿ ಬಹುಭಾಷಾ ನಟ ಲೆಜೆಂಡ್ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ-2021ಕ್ಕೆ ಭಾಜನರಾದ ಸುಮನ್ ತಲ್ವಾರ್ ಅವರನ್ನು ಇಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ್. ಜಿ ಅಮೀನ್, ಜೊತೆ ಕಾರ್ಯದರ್ಶಿ ಹರೀಶ್.ಜಿ.ಸಾಲ್ಯಾನ್, ಅಂದೇರಿ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಹರೀಶ್ ಶಾಂತಿ, ನಿಲೇಶ್ ಪೂಜಾರಿ ಪಲಿಮಾರ್ ಉಪಸ್ಥಿತರಿದ್ದರು.
ಬಂಟ್ವಾಳ: ತೈಲ, ಗ್ಯಾಸ್ ಹಾಗೂ ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೈಕಲ್ ಜಾಥ ಹಾಗೂ ಪ್ರತಿಭಟನಾ ಮೆರವಣಿಗೆ ಬಂಟ್ವಾಳದಲ್ಲಿ ನಡೆಯಿತು. ಮಾಜಿ ಸಚಿವ ರಮಾನಾಥ ರೈ ಅವರು ಬಂಟ್ವಾಳ ಬಡ್ಡಕಟ್ಟೆಯಲ್ಲಿ ಹನುಮಾನ್ ದೇವಸ್ಥಾನದ ಬಳಿ ಚಾಲನೆ ನೀಡಿದರು. ಬಳಿಕ ಬಿ.ಸಿ.ರೋಡಿನ ಮೇಲ್ಸೆತುವೆಯ ಕೆಳಭಾಗದಲ್ಲಿ ಸಂಪನ್ನಗೊಂಡ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಭಾವನಾತ್ಮಕ ವಿಚಾರ ಎತ್ತಿ
ಕರಾವಳಿಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಮತ್ತು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ ಎಂದು ಇಂಟಕ್ ನ ರಾಜ್ಯ ಕಾರ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ ಆಗ್ರಹಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕರಾವಳಿಯಲ್ಲಿ ಕೈಗಾರಿಕಾ ಪ್ರಾಂಗಣ ನಿರ್ಮಿಸಲು ಭೂಸ್ವಾಧೀನ, ಕೈಗಾರಿಕೆ ನಿರ್ಮಾಣದ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇದುವರೆಗೆ ಎಚ್‌ಪಿಸಿಎಲ್,
ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರಾ’ದ ಅಂಗವಾಗಿ ದ.ಕ. ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಮಂಗಳೂರಿನ ಟೀಂ ಬಿ-ಹ್ಯೂಮನ್ ಸಂಸ್ಥೆ ಆಯೋಜಿಸಿದೆ. ಜುಲೈ 14ರಂದು ಬೆಳಿಗ್ಗೆ 10.00ಕ್ಕೆ ಝೂಮ್ (ಮೀಟಿಂಗ್ ಐಡಿ: 85029107730 ಪಾಸ್ಕೋಡ್: 687283) ಮೂಲಕ
ಉಳ್ಳಾಲವನ್ನು ‘ಪಾಕಿಸ್ಥಾನ’ಕ್ಕೆ ಹೋಲಿಸಿ ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದ ಘಟನೆ ಸಲ್ಪ ಸಮಯದ ಹಿಂದೆ ನಡೆದಿತ್ತು. ಇದೀಗ ಇದೇ ಉಳ್ಳಾಲದಲ್ಲಿ ಭಾನುವಾರ ನಡೆದ ಸೌಹಾರ್ದ ಮದುವೆ ಉಳ್ಳಾಲದ ಮೂಲಕ ಮತ್ತೊಮ್ಮೆ ಸಾಮರಸ್ಯದ ಸಂದೇಶ ರವಾನಿಸಿದೆ. ದಿವಂಗತ ಕೇಶವ ಕರ್ಕೇರಾ ಅವರ ಪತ್ನಿ ಗೀತಾ ಅವರು ತನ್ನ ಮಗಳು ಕವನ ಅವರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಮೊದಲು ಈ ಕುಟುಂಬ ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದರು. ಕೇಶವ
ನಗರದ ಕೊಟ್ಟಾರ ಮಾಲೆಮಾರ್‍ನಲ್ಲಿ ರಸ್ತೆ ದಾಟಲು ಕಾಯುತ್ತಿದ್ದ ಶ್ವಾನವನ್ನು ಬಾಲಕನೊಬ್ಬ ರಸ್ತೆ ದಾಟಿಸಿ, ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ. ದೃಶ್ಯವನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅಪುಲ್ ಆಳ್ವ ಸೆರೆ ಹಿಡಿದಿದ್ದು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಿದೆ. ಕೊಟ್ಟಾರ-ಮಾಲೆಮಾರ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಾಯಿಯೊಂದು ರಸ್ತೆ ದಾಟಲು ಕಾಯುತ್ತಿತ್ತು. ನಿರಂತರವಾಗಿ
ಕಾರ್ಕಳ: ರಾಜ್ಯ ವ್ಯಾಪ್ತಿ ಸುದ್ದಿಯಾಗಿರುವ ದೇಶದ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟನ್ನು ಹಾಕಿ ಸಂಕಷ್ಟಕ್ಕೆ ಸಿಲುಕಿರುವ ರಾಧಾಕೃಷ್ಣ ನಾಯಕ್ ಹಿರ್ಗಾನ ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್‍ಗಳನ್ನು ಹಾಕಿದ್ದಾರೆ ಈ ಬಗ್ಗೆ ನಾನೇ ಸ್ವಂತ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸಾಯಿಸೈಬರ್ ಠಾಣೆಯಲ್ಲಿ ದೂರು ದಾಖಲಿಸಿ
ಕಡಬ:ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ. ಈ ರಸ್ತೆಯ ಮೂಲಕ ತೆರಳುವವರು ಜಾಗ್ರತೆಯಿಂದ ಸಂಚರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.
ಉಡುಪಿಯ ಕರಾವಳಿ ಬೈಪಾಸ್ ಬಳಿ ಶಿವರಾಜ್ ಎನ್ನುವ ಎರಡುವರೆ ವರುಷದ ಮಗುವೊಂದನ್ನ ಅಪಹರಣ ಮಾಡಲಾಗಿತ್ತು.ಕಾರವಳಿ ಬೈಪಾಸ್ ಬಳಿಯ ಭಾರತಿ ಮತ್ತು ಅರುಣ್ ಎನ್ನುವವರ ಮಗುವನ್ನು ಪರಿಚಯದ ವ್ಯಕ್ತಿಯೇ ಅಪಹರಿಸಿದ್ದ. ಮಗುವಿಗೆ ಚಾಹಾ ಕುಡಿಸ್ತೇನೆ ಎಂದು ಕರೆದುಕೊಂಡು ಹೋಗಿದ್ದ ಬಾಗಲಕೋಟೆ ಮೂಲದ ಪರುಶರಾಮ ಎನ್ನುವ ವ್ಯಕ್ತಿ ವಾಪಸ್ಸು ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡ ನಗರ ಠಾಣಾ ಪೊಲೀಸರು ಕಾರ್ಯ


















