Home Posts tagged #v4stream (Page 294)

ಬೆಳ್ತಂಗಡಿಯಲ್ಲಿ ಕೋವಿಡ್ ಸೋಂಕು ಇಳಿಮುಖ-ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿಯಲ್ಲಿ ಕೊರೊನಾ ಜಾಗೃತಿ ಬಗ್ಗೆ ಅಧಿಕಾರಿ ವರ್ಗದ ಸಭೆಯನ್ನು ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಈಗಾಗಲೇ ಬೆಳ್ತಂಗಡಿಯಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು 4 ಗ್ರಾಮಗಳು ಕೊರೊನಾ ಮುಕ್ತವಾಗಿದೆ. ಇನ್ನೂ ಹೆಚ್ಚಿನ ಕ್ರಮ ವಹಿಸಲು ಸಲುವಾಗಿ ಎಲ್ಲಾ ಇಲಾಖೆಗಳ ಸಭೆ ಕರೆದು

50 ಲಕ್ಷ ಅಭಿವೃದ್ಧಿ ಕಾಮಗಾರಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಪರಿಶೀಲನೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲು ದಕ್ಷಿಣ 15 ನೇ ವಾರ್ಡಿನ ಗಾಂಧಿನಗರ 2 ನೇ ಅಡ್ಡರಸ್ತೆ ಅಗಲಿಕರಣ ಮತ್ತು ಚರಂಡಿ ರಚನೆಯ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು  ನಡೆಸಿದರು. ಶಾಸಕ ಡಾ.ಭರತ್ ಶೆಟ್ಟಿಯವರ ವಿಶೇಷ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಬಿರುಸಿನಿಂದ ಸಾಗಿದೆ. ಶಾಸಕರೊಂದಿಗೆ ಉಪಮೇಯರ್

ಮಂಗಳೂರು ಯುವ ವಕೀಲರಿಗೆ ಆದ್ಯತೆ ಮೇರೆಗೆ ಲಸಿಕೆ ಕಾರ್ಯಕ್ರಮ

ಮಂಗಳೂರು ವಕೀಲರ ಸಂಘದ ವತಿಯಿಂದ ನಗರದ ಯುವ ವಕೀಲರಿಗೆ ಕೋವಿಡ್ ಮುಂಚೂಣಿ ಯೋಧರು ಎಂಬ ನೆಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನ್ಯಾಯಾಲಯ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀ ಮುರಳೀಧರ ಪೈ ಅವರ ಮುತುವರ್ಜಿಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸುಮಾರು 200 ಯುವ ವಕೀಲರಿಗೆ ಲಸಿಕೆ ನೀಡಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಉಪಾಧ್ಯಕ್ಷರಾದ

ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಸಿಪಿಐ(ಎಂ) ಮತ್ತು ಸಿಪಿಐನಿಂದ ಪ್ರತಿಭಟನೆ

ಕರ್ನಾಟಕ ರಾಜ್ಯವ್ಯಾಪಿ ಮನೆ, ಮನೆ, ಸರ್ಕಾರಿ ಕಛೇರಿ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲು ಏಳು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ ಪಿ ಐ(ಎಂ)ಮತ್ತು ಸಿ ಪಿ ಐ ಪಕ್ಷಗಳು ಜಂಟಿಯಾಗಿ ನೀಡಿದ ಕರೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳ ಸದಸ್ಯರು ಮನೆ ಮನೆಗಳಲ್ಲಿ ಪ್ರದರ್ಶನ ನಡೆಸಿ ಸರ್ಕಾರಗಳ ನೀತಿಗಳನ್ನು ಬದಲಾಯಿಸಲು ಒತ್ತಾಯಿಸಿದರು.   ಸಿಪಿಐ(ಎಂ)ನ ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾಯಕರ ತೇಜೋವಧೆ : ಸೂಕ್ತ ಕ್ರಮ ಕೈ ಗೊಳ್ಳುವಂತೆ ಮನವಿ

ಕೋವಿಡ್ ಸಂದರ್ಭದಲ್ಲಿ ಬಜರಂಗಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ಸೇವಾ ಭಾರತಿ ಅಶ್ರಯದಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿವೆ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಿಂದೂ ಸಂಘಟನೆಗಳ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕರೂ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ. ಪುತ್ತೂರಿನಲ್ಲಿ

ಸೀಲ್‍ಡೌನ್ ಪಟ್ಟಿಯಲ್ಲಿರುವ ಗ್ರಾಮದಲ್ಲಿ ವಾರದ ಸಂತೆ

ವಾರದ ಸಂತೆಗೆ ಉಡುಪಿ ಜಿಲ್ಲಾಡಳಿತದ ನಿರ್ಬಂಧ ವಿದ್ದರೂ ಯಾವುದೇ ಅಡೆತಡೆ ಇಲ್ಲದೆ ಪಡುಬಿದ್ರಿ ವಾರದ ಸಂತೆ ನಡೆಯುವ ಮೂಲಕ ಸೀಲ್ ಡೌನ್ ಪಟ್ಟಿಯಲ್ಲಿರುವ ಈ ಗ್ರಾಮದ ಜನ ಆತಂಕ ವ್ಯಕ್ತ ಪಡಿಸಿದ್ದಾರೆ. ಮುಖ್ಯ ಮಾರುಕಟ್ಟೆಯ ರಸ್ತೆಯ ಎರಡೂ ಭಾಗಗಳಲ್ಲೂ ಹೆಸರಿಗಾಗಿಯೋ ಎಂಬಂತ್ತೆ ಬ್ಯಾರೀಕೆಡ್ ಅಳವಡಿಸಿದ್ದಾರೆ. ನಾಳೆಯಿಂದ ಐದು ದಿನಗಳ ಕಾಲ ಪಡುಬಿದ್ರಿ ಸೀಲ್ ಡೌನ್ ಎಂಬ ಕಾರಣಕ್ಕೋ ಏನೋ.. ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಮುಂಜಾನೆಯಿಂದ ಹತ್ತು

ಕೋವಿಡ್ ಸಂಕಷ್ಟದಲ್ಲಿ ಕಾಂಗ್ರೆಸ್ ರಾಜಕಾರಣ: ಸುಧೀರ್ ಶೆಟ್ಟಿ ಕಣ್ಣೂರ್ ಅರೋಪ

ಮಂಗಳೂರು: ಕೋವಿಡ್‌ನ ಈ ಸಂಕಷ್ಠದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಿಎಚ್‌ಒ ಎದುರು ಪ್ರತಿಭಟನೆ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ನಿರ್ಮಾಣ ಮಾಡುವುದನ್ನು ಬಿಟ್ಟು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕೆಂದು ಮಂಗಳೂರು ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಾಕಷ್ಟು

ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದ 99 ವರ್ಷದ ವೃದ್ಧೆ

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ 99 ವರ್ಷದ ವೃದ್ಧರೊಬ್ಬರು ಲಸಿಕೆಯನ್ನು ಪಡೆದಿದ್ದಾರೆ. ಉಳ್ಳಾಲದ ಸಂಕೋಳಿಗೆ ನಿವಾಸಿಯಾಗಿರುವ ಯು. ವಸಂತಿ ಅವರು ಲಸಿಕೆಯನ್ನು ಪಡೆದುಕೊಂಡವರು. ಲಸಿಕೆ ಪಡೆಯಲು ಭಯ ಪಡುತ್ತಿರುವ ಯುವಕ-ಯುವತಿಯರಿಗೆ ಈ ವೃದ್ಧೆಯೊಬ್ಬರು ಮಾದರಿಯಾಗಿದ್ದಾರೆ.