ಕರ್ನಾಟಕ ರಾಜ್ಯವ್ಯಾಪಿ ಮನೆ, ಮನೆ, ಸರ್ಕಾರಿ ಕಛೇರಿ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲು ಏಳು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ ಪಿ ಐ(ಎಂ)ಮತ್ತು ಸಿ ಪಿ ಐ ಪಕ್ಷಗಳು ಜಂಟಿಯಾಗಿ ನೀಡಿದ ಕರೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳ ಸದಸ್ಯರು ಮನೆ ಮನೆಗಳಲ್ಲಿ ಪ್ರದರ್ಶನ ನಡೆಸಿ ಸರ್ಕಾರಗಳ                         
        
              ಕೋವಿಡ್ ಸಂದರ್ಭದಲ್ಲಿ ಬಜರಂಗಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ಸೇವಾ ಭಾರತಿ ಅಶ್ರಯದಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿವೆ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಿಂದೂ ಸಂಘಟನೆಗಳ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕರೂ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ. ಪುತ್ತೂರಿನಲ್ಲಿ                         
        
              ವಾರದ ಸಂತೆಗೆ ಉಡುಪಿ ಜಿಲ್ಲಾಡಳಿತದ ನಿರ್ಬಂಧ ವಿದ್ದರೂ ಯಾವುದೇ ಅಡೆತಡೆ ಇಲ್ಲದೆ ಪಡುಬಿದ್ರಿ ವಾರದ ಸಂತೆ ನಡೆಯುವ ಮೂಲಕ ಸೀಲ್ ಡೌನ್ ಪಟ್ಟಿಯಲ್ಲಿರುವ ಈ ಗ್ರಾಮದ ಜನ ಆತಂಕ ವ್ಯಕ್ತ ಪಡಿಸಿದ್ದಾರೆ. ಮುಖ್ಯ ಮಾರುಕಟ್ಟೆಯ ರಸ್ತೆಯ ಎರಡೂ ಭಾಗಗಳಲ್ಲೂ ಹೆಸರಿಗಾಗಿಯೋ ಎಂಬಂತ್ತೆ ಬ್ಯಾರೀಕೆಡ್ ಅಳವಡಿಸಿದ್ದಾರೆ. ನಾಳೆಯಿಂದ ಐದು ದಿನಗಳ ಕಾಲ ಪಡುಬಿದ್ರಿ ಸೀಲ್ ಡೌನ್ ಎಂಬ ಕಾರಣಕ್ಕೋ ಏನೋ.. ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಮುಂಜಾನೆಯಿಂದ ಹತ್ತು                         
        
              ಮಂಗಳೂರು: ಕೋವಿಡ್‌ನ ಈ ಸಂಕಷ್ಠದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಿಎಚ್‌ಒ ಎದುರು ಪ್ರತಿಭಟನೆ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ನಿರ್ಮಾಣ ಮಾಡುವುದನ್ನು ಬಿಟ್ಟು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕೆಂದು ಮಂಗಳೂರು ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಾಕಷ್ಟು                         
        
              ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ 99 ವರ್ಷದ ವೃದ್ಧರೊಬ್ಬರು ಲಸಿಕೆಯನ್ನು ಪಡೆದಿದ್ದಾರೆ. ಉಳ್ಳಾಲದ ಸಂಕೋಳಿಗೆ ನಿವಾಸಿಯಾಗಿರುವ ಯು. ವಸಂತಿ ಅವರು ಲಸಿಕೆಯನ್ನು ಪಡೆದುಕೊಂಡವರು. ಲಸಿಕೆ ಪಡೆಯಲು ಭಯ ಪಡುತ್ತಿರುವ ಯುವಕ-ಯುವತಿಯರಿಗೆ ಈ ವೃದ್ಧೆಯೊಬ್ಬರು ಮಾದರಿಯಾಗಿದ್ದಾರೆ.                        
        
















