Home Posts tagged #v4stream (Page 96)

ಬಂಟ್ವಾಳ: ಬಸ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ

ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರ ಬೆಳ್ತಂಗಡಿ ನಿವಾಸಿ ಮಹಮ್ಮದ್ ಸುಹೈಲ್ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಟ್ವಾಳ ಕೆಳಗಿನ ಪೇಟೆಗೆ ಬಂದು ಬೆಳ್ತಂಗಡಿ ಗೆ ತೆರಳುವ ವೇಳೆ

ಪುತ್ತೂರು : 21ನೇ ಕನ್ನಡ ಸಾಹಿತ್ಯ ಸಮ್ಮೇಳನ

ಪುತ್ತೂರು : ಕನ್ನಡ ಭಾಷೆ ನಿಜವಾದ ಅರ್ಥದಲ್ಲಿ ಉಳಿದಿದೆ, ಉಳಿಯುತ್ತಿದೆ, ಬೆಳೆಯುತ್ತಿದೆ ಎಂದಾದರೆ, ಅದು ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ ಮತ್ತು ತಾಲೂಕುಗಳಲ್ಲಿ ಮಾತ್ರ. ಕನ್ನಡ ಸಾಹಿತ್ಯ ಪರಿಷತ್ಗೆ ಭದ್ರ ಅಡಿಪಾಯ ಹಾಕಿರುವುದು ಹಳ್ಳಿಗಳು, ಹೋಬಳಿಗಳು ಮತ್ತು ತಾಲೂಕುಗಳು. ಹಾಗಾಗಿ ನಾನು ತಾಲೂಕು ಮಟ್ಟ ಮಾತ್ರವಲ್ಲದೆ, ಹೋಬಳಿ, ಗ್ರಾಮ ಮಟ್ಟಕ್ಕೂ ಹೋಗುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಕನ್ನಡ ಸಾಹಿತ್ಯ

ಮಂಜೇಶ್ವರ :ವಿದ್ಯಾರ್ಥಿಗಳ ರ್‍ಯಾಗಿಂಗ್ ವೀಡಿಯೋ ವೈರಲ್

ಮಂಜೇಶ್ವರ: ಪ್ಲಸ್ ಒನ್ ವಿದ್ಯಾರ್ಥಿಯನ್ನು ಪ್ಲಸ್ ಟು ವಿದ್ಯಾರ್ಥಿಗಳು ರ್‍ಯಾಗಿಂಗ್ ವಿಚಾರದ ವೀಡಿಯೊದಿದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾದ ಬೆನ್ನಲ್ಲೇ ಕೇರಳದ ಶಿಕ್ಷಣ ಸಚಿವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಆದಷ್ಟು ಬೇಗನೆ ತನಿಖಾ ವರದಿ ನೀಡಲು ನಿರ್ದೇಶಿಸಲಾಗಿದೆ. ಕುಂಬಳೆ ಸಮೀಪದ ಅಂಗಡಿ ಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆ ಬಿಟ್ಟ ಬಳಿಕ ನಡೆದುಕೊಂಡು ಹೋಗುತಿದ್ದ 16ರ ಹರೆಯದ ಪ್ಲಸ್ ಒನ್

ಗಂಗೊಳ್ಳಿ ಜೆಟ್ಟಿ ಕುಸಿತ ಪ್ರಕರಣ – ಕಳಪೆ ಕಾಮಗಾರಿ ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು : ಎಸ್. ಅಂಗಾರ

ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣ ಇಡೀ ಸರಕಾರ ಮತ್ತು ನಮಗೆ ಮಾಡಿದ ಅವಮಾನವಾಗಿದ್ದು, ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ  ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಎಸ್. ಅಂಗಾರ ಹೇಳಿದರು. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು

ಉಡುಪಿ: ಅ.1ರಂದು ವಿಶ್ವ ಹೃದಯ ದಿನದ ಪ್ರಯುಕ್ತ ಬೃಹತ್ ಜಾಥಾ

ಉಡುಪಿಯ ಆದರ್ಶ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಅಕ್ಟೋಬರ್ 1, 2022 ರ ಶನಿವಾರದಂದು ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 12:00 ರವರೆಗೆ ಬೃಹತ್ ಜಾಥಾವನ್ನು ಆಯೋಜಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭವು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದ್ದು, ಈ ಜಾಥಾವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಇಂಧನ ಸಚಿವರಾದ ವಿ

ಶ್ರದ್ದಾ ಭಕ್ತಿ ಪೂರ್ವಕ ನಡೆದ ಸಾಮೂಹಿಕ ಕುಂಕುಮಾರ್ಚನೆ

ಮಂಗಳೂರು ನಗರದ ರಥಬೀದಿಯಲ್ಲಿ 100 ನೇ ವರ್ಷಾಚರಣೆ ಸಂಭ್ರಮ ಆಚರಿಸುತ್ತಿರುವ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಸಹಸ್ರ ಚಂಡಿಕಾ ಮಹಾ ಯಾಗ ಅಂಗವಾಗಿ ಸಾಮೂಹಿಕ ಕುಂಕುಮಾರ್ಚನೆ ಆಯೋಜಿಸಲಾಗಿದ್ದು ನೂರಾರು ಮಾತೃವರ್ಗ ಶ್ರದ್ದಾ ಭಕ್ತಿ ಪೂರ್ವಕ ಸಾಮೂಹಿಕ ಕುಂಕುಮಾರ್ಚನೆ ಯಲ್ಲಿ ಪಾಲ್ಗೊಂಡರು .

ತುಳು ಭಾಷೆ ತುಳಿದು ಕನ್ನಡ ಹೇರಿಕೆ ಆರೋಪಿಸಿ ಪ್ರತಿಭಟನೆ

ಮಂಗಳೂರು: ತುಳುನಾಡಿನಲ್ಲಿ ತುಳು ಭಾಷೆಯನ್ನು ತುಳಿದು ಕನ್ನಡ ಹೇರಿಕೆ ಮಾಡಲಾಗ್ತಿದೆ ಎಂದು ಆರೋಪಿಸಿ ಮಂಗಳೂರು ನಗರದ ಕ್ಲಾಕ್‌ ಟವರ್ ಬಳಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ಇಂದು ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಚುನಾವಣಾ

ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶ ಜೆಟ್ಟಿ ಭಾಗ ಕುಸಿತ

ಆರಂಭದಿಂದಲೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದ ಕುಂದಾಪುರದ ಗಂಗೊಳ್ಳಿ ಬಂದರು ಪ್ರದೇಶ ಇದೀಗ ಮತ್ತೆ ಸುದ್ದಿಯಲ್ಲಿದೆ. ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಸ್ಥಳೀಯ ಮೀನುಗಾರರು ಆತಂಕಕ್ಕೀಡಾಗಿದ್ದಾರೆ. ಸಂಜೆ 5.30 ರ ಹೊತ್ತಿಗೆ ಘಟನೆ ನಡೆದಿದ್ದು, ನಿರಂತರವಾಗಿ

ಶ್ರೀ ಮಂಗಳಾದೇವಿ ದೇವಸ್ಥಾನ : ದಸರಾ ಕವಿ ಸಂಭ್ರಮ ಸಾಧಕರಿಗೆ ಸನ್ಮಾನ

ದಸರಾ ಸಂಭ್ರಮಾಚರಣೆಯ ಅಂಗವಾಗಿ ಆಸಕ್ತಿ ಮಂಗಳೂರು, ಕಲಾಸಕ್ತರ ಬಳಗ ಹಾಗೂ ಚುಟುಕು ಸಾಹಿತ್ಯ ಪರಿಷತ್ ಅವರು ಆಯೋಜನೆ ಮಾಡಿದಂತಹ ಕವಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಆಕಾಶ್ ಬೈಜೂಸ್ ಸಂಸ್ಥೆಯಿಂದ ಎನ್‍ಇಇಟಿ, ಜೆಇಇ ಕೋಚಿಂಗ್

ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಸಬಲೀಕರಣಗೊಳ್ಳಬೇಕು ಎಂಬ ಕಾರಣಕ್ಕೆ ಆಕಾಶ್ ಬೈಜೂಸ್ ಎಲ್ಲರಿಗೂ ಶಿಕ್ಷಣವನ್ನು ಪ್ರಾರಂಭಿಸಿದೆ. ಎಎನ್‍ಟಿಎಚ್‍ಇ 2022ರ ಭಾಗವಾಗಿ ಸುಮಾರು 2,000 ಹಿಂದುಳಿದ ವಿದ್ಯಾರ್ಥಿನಿಯರಿಗೆ ಉಚಿತ ಎನ್‍ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದ್ದು, ಅದಕ್ಕಾಗಿಯೇ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಿದೆ ಎಂದು ಆಕಾಶ್ ಬೈಜೂಸ್