ಮಂಗಳೂರು ಉತ್ತರ ವಲಯದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹೋಲಿ ಫ್ಯಾಮಿಲಿ ಪ್ರೌಢಶಾಲೆ ಸುರತ್ಕಲ್ಲಿನಲ್ಲಿ ನಿನ್ನೆ ಬುಧವಾರದಂದು ನಡೆದ ಮಂಗಳೂರು ಉತ್ತರ ವಲಯದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಟೀಲು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಮೃದ್ಧಿ ಎ.ಎಸ್.(9ನೇ ತರಗತಿ)36 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ,
ವೀಕ್ಷಾ ಜೆ. ಕಟೀಲ್‌ (9th std) -60 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ,
ಪೂರ್ವಿ ಪಿ. ಶೆಟ್ಟಿ (10th std) 54 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ,
ಸಾತ್ತ್ವಿಕಾ (8th std) 38 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಮೃದ್ಧಿ ಈಗಾಗಲೇ ಮೂರು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಒಂದು ಬಾರಿ ರಾಷ್ಟ್ರಮಟ್ಟದಲ್ಲೂ ಭಾಗವಹಿಸಿದ ಕರಾಟೆ ಪಟು.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀ ದುರ್ಗಾಪರಮೇಶ್ವರಿ ಕಟೀಲು ಫ್ರೌಡ ಶಾಲೆಯ ವಿದ್ಯಾರ್ಥಿಗಳು ಕರಾಟೆ ಶಿಕ್ಷಕ ಮೋರ್ಗನ್ ವಿಲಿಯಮ್ಸ್ ಕಿನ್ನಿಗೋಳಿ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ‌.

ವಿಜೇತರಿಗೆ ಆಡಳಿತ ಮಂಡಳಿ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.