Home Page 7

ಹೆಚ್‌ಡಿಕೆ ಒಂದು ವಾರ ಶಾಖೆಗೆ ಬಂದು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲಿ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೊದಲು ಒಂದು ವಾರ ಶಾಖೆಗೆ ಬಂದು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ನೀಡಿದ ಹೇಳಿಕೆಗೆ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರೀಯೆ ನೀಡಿದರು. ಕಾಮಲೆ ರೋಗಿಗೆ

ಅ. 8ರಂದು ಸುಜ್ಞಾನ ದೀಪಿಕೆ’ ಧಾರ್ಮಿಕ ಶಿಕ್ಷಣ ಯೋಜನೆ ಉದ್ಘಾಟನೆ

ಪುತ್ತೂರು: ದೇವಾಲಯವೊಂದರಲ್ಲಿ ವಿನೂತನ ಪ್ರಯೋಗವಾಗಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣವನ್ನು ಮತ್ತು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಸುಜ್ಞಾನ ದೀಪಿಕೆ’ ಧಾರ್ಮಿಕ ಶಿಕ್ಷಣ ಯೋಜನೆಯು ಅ. 8ರಂದು ಬೆಳಗ್ಗೆ 1೦ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ದೇವಾಲಯದ

ಕಾರ್ಕಳ ಆನೆಕೆರೆ ಮುಖ್ಯ ರಸ್ತೆಯ ಸಮಸ್ಯೆ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ವಿನೂತನ ಪ್ರತಿಭಟನೆ

ಕಾರ್ಕಳ ಮೂರು ಮಾರ್ಗದಿಂದ ಆನೆಕೆರೆ ಮುಖ್ಯ ಮಾರ್ಗದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿರುವ ರಸ್ತೆಯಾಗಿದೆ. ತಿಂಗಳುಗಳ ಹಿಂದೆ ಈ ರಸ್ತೆಯನ್ನು ಅಗೆದು ಒಳಚರಂಡಿಯ ಪೈಪ್ ಹಾಕಲಾಗಿತ್ತು. ಈ ಕಾಮಗಾರಿ ನಡೆದ ನಂತರ ಈ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡದೆ ಹಾಗೆಯೇ ಬಿಡಲಾಯಿತು. ಒಂದೆರಡು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ

ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ಹಾಗೂ ಯುವ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ ಇಂಧನ ಸಚಿವ ವಿ.ಸುನೀಲ್ ಕುಮಾರ್ ಉಪಸ್ಥಿಯಲ್ಲಿ ಸಾಂಗವಾಗಿ ನೆರವೇರಿತು. ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಆಜಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ ಮಾಜಿ ಸೈನಿಕ ಶ್ರೀ ಗಣಪತಿ ಗೌಡ ಯೆಳ್ ಜಿತ್ ಇವರಿಗೆ ಯುವ ಮೋರ್ಚಾದ ವತಿಯಿಂದ

ದಾನಿಗಳ ನೆರವನ್ನು ಎದುರು ನೋಡುತ್ತಿದೆ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬ

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ದಾನಿಗಳ ನೆರವನ್ನು ಎದುರು ನೋಡುತ್ತಿದೆ. ಈ ಮನೆಯಲ್ಲಿ ವಾಸವಿರುವ ಮೂರು ಮಂದಿಯನ್ನು ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಮುಂದೇನು ಎನ್ನುವ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸೇಸಮ್ಮ

ಅಕ್ಟೋಬರ್ 10 ರಂದು ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ

ಕಲ್ಕೂರ ಪ್ರತಿಷ್ಟಾನವು ವರ್ಷಂಪ್ರತಿಯಂತೆ ಅಕ್ಟೋಬರ್ 1೦ರಂದು ಕಡಲತೀರದ ಭಾರ್ಗವರೆಂದೇ ಪ್ರಸಿದ್ಧರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಕೊಡಿಯಾಲ್ ಗುತ್ತುವಿನ ಪತ್ತುಮುಡಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ವರ್ಷದ ಕಾರಂತ ಪ್ರಶಸ್ತಿಯನ್ನು ಖ್ಯಾತ ವಾರಪತ್ರಿಕೆ ತರಂಗದ ವ್ಯವಸ್ಥಾಪಕ

ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಪ್ರತಿಭಟನೆ ಮಾಡದಂತೆ ನೋಟಿಸ್ ಬೇಸರ ತಂದಿದೆ : ಯೋಗೀಶ್ ಶೆಟ್ಟಿ ಜೆಪ್ಪು

ದಕ್ಷಿಣ ಕನ್ನಡ ಜಿಲ್ಲೆಯ ತುಳು ಅಧಿಕೃತ ಭಾಷೆ ಪೊರಂಬಾಟ್ ಸಮಿತಿ ವತಿಯಿಂದ ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವು. ಆದರೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರಿಂದ ಪ್ರತಿಭಟನೆಯನ್ನು ರದ್ದುಮಾಡಬೇಕಿತ್ತು. ರಾಜಕೀಯ ಕಾರ್ಯಕ್ರಮ, ರಾಜಕೀಯ ಪ್ರತಿಭಟನೆಗೆ ಅವಕಾಶ ಕೊಡುತ್ತಾರೆ. ಆದರೆ ನಮ್ಮ ತುಳುವರ ಶಾಂತಿಯುತ ಪ್ರತಿಭಟನೆಗೆ ಯಾಕೆ ಅವಕಾಶ

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 7 ರಿಂದ ಅಕ್ಟೋಬರ್ 16ರ ವರೆಗೆ ನಡೆಯಲಿದೆ. ನವರಾತ್ರಿಯ ಸಂದರ್ಭ ಪ್ರತಿದಿನ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು.  ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ

ನ್ಯಾಯಾಲಯಕ್ಕೆ ತಲೆಬಾಗಿ ಆಗಮಿಸಿದ್ದೇನೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಾನು ಇಂಧನ ಸಚಿವನಾಗಿದ್ದ ಸಂದರ್ಭ ವ್ಯಕ್ತಿಯೋರ್ವ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ಅಧಿಕಾರಿಗಳು ದೂರು ದಾಖಲಿಸಿದ್ದರು. ಆತ ಅಧಿಕಾರಿಗಳನ್ನೂ ನಿಂದನೆ ಮಾಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದ್ದು, ಹೀಗಾಗಿ ನ್ಯಾಯಾಲಯಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.

ಗೋ ಹತ್ಯೆ, ಗೋ ಕಳ್ಳತನದಲ್ಲಿ ಭಾಗಿಯಾದ ಆರೋಪ : ಉಡುಪಿ ಎಸ್ಪಿ ವಿಷ್ಣುವರ್ಧನ್ ಎಚ್ಚರಿಕೆ

ಠಾಣೆಯಲ್ಲಿ ಇದುವರೆಗೆ ಗೋ ಕಳ್ಳತನ, ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಗಳನ್ನು ಹಾಗೂ ದನದ ದಲ್ಲಾಳಿ ಮಾಡುವವರನ್ನು ಮತ್ತು ದನಸಾಗಾಟ ಮಾಡುವ ವಾಹನಚಾಲಕರ ಪರೇಡ್ ನಡೆಸಿದರು. ಇವರುಗಳು ಮುಂದಕ್ಕೆ ಯಾವುದೇ ಗೋ ಕಳ್ಳತನ ಗೋ ಹತ್ಯೆ ಪ್ರಕರಣದಲ್ಲಿ ಬಾಗಿಯಾದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣು ವರ್ದನ್ ರವರು