ಉಡುಪಿ:ಅಂತರ ರಾಜ್ಯ ಕಳ್ಳನ ಬಂಧನ

ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಮತ್ತು ಬೈಂದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಮೂಕಾಂಬಿಕಾ ಸಹಕಾರಿ ಸೇವಾ ಸಂಘ ಸೊಸೈಟಿ ದರೋಡೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣಾ ಪೊಲೀಸರು ದ.ಕ ಜಿಲ್ಲೆಯ ಪುತ್ತೂರು ಬನ್ನೂರಿನ ನೌಶಾದ್ (ಹಾಲಿ ವಾಸ ಮಡಿಕೇರಿ ಜಿಲ್ಲೆಯ ಕುಶಾಲನಗರ) ಎಂಬಾತನನ್ನು ಬಂಧಿಸಿದ್ದು ಆತನಿಂದ ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೂಪಾಯಿ 80,000/- ಮೌಲ್ಯದ ಒಂದು ಪವನ್ ಚಿನ್ನವನ್ನು ಹಾಗು ರೂಪಾಯಿ 32,000/- ನಗದನ್ನು ವಶಪಡಿಸಿಕೊಂಡಿರುತ್ತಾರೆ.

ಈತನು ಕುಖ್ಯಾತ ಅಂತರಜಿಲ್ಲಾ ಕಳ್ಳ ಬಂಟ್ವಾಳ ಗೂಡಿನಬಳಿ ರಫೀಕ್ ಎಂಬಾತನ ಸಹಚರನಾಗಿದ್ದು ಆತನೊಂದಿಗೆ ಸೇರಿ ಇತ್ತೀಚೆಗೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರು ಎಂಬಲ್ಲಿ ಶ್ರೀ ಮೂಕಾಂಬಿಕ ವ್ಯವಸಾಯ ಸಹಕಾರಿ ಸೇವಾ ಸಂಘ ಸೊಸೈಟಿಯ ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದ ಬಳಿಕ ರಫೀಕ್ ಹಾಗು ಇತರರೊಂದಿಗೆ ಸೇರಿಕೊಂಡು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ದರೋಡೆ ಪ್ರಕರಣ, ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಅಂಗಡಿಯಲ್ಲಿ ತಾಮ್ರದ ತಂತಿ ಕಳವು ಪ್ರಕರಣ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃಷಿ ಸಹಕಾರಿ ಸೇವಾ ಸಂಘ ದರೋಡೆ ಪ್ರಯತ್ನ ಪ್ರಕರಣ ನಲ್ಲಿ ಭಾಗಿಯಾಗಿದ್ದು ಸದರಿ ಪೊಲೀಸ್ ಠಾಣೆಯ ಪೊಲೀಸರು ಇವರ ತಲಾಶಿಯಲ್ಲಿ ಇರುತ್ತಾರೆ.

ಈತನ ಮೇಲೆ ಮೇಲ್ಕಾಣಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇದಕ್ಕೂ ಹಿಂದೆ ದ.ಕ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು ಅಲ್ಲಿ ದಸ್ತಗಿರಿ ವಾರಂಟ್ ಇರುತ್ತದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದ್ದು ಅಲ್ಲಿ ದಸ್ತಗಿರಿ ವಾರಂಟು ಇರುತ್ತದೆ ಅಲ್ಲದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಶ್ರೀ ಹರಿರಾಮ್ ಶಂಕರ IPS ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಂವಧ IPS ಮತ್ತು ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸಕ್ತಿವೇಲು( ಕಾ.ಸು) ಅನಿಲ್ ಕುಮಾರ್(ತನಿಖೆ), ಶಿರ್ವ ಪೊಲೀಸ್ ಠಾಣಾ ಎಸ್ ಐ ಮಂಜುನಾಥ ಮರಬಧ ಮತ್ತು ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಸಂದೇಶ್ ಕುಮಾರ್, ಕಾಪು ವೃತ್ತ ಕಚೇರಿಯ ಸಿಬ್ಬಂದಿ ಜೀವನ್ ಕುಮಾರ್, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿ ಬಸವನಗೌಡ, ಅಜೆಕಾರು ಪೋಲಿಸ್ ಠಾಣಾ ಸಿಬ್ಬಂದಿಯವರಾದ ಹೆಡ್ ಕಾನ್ಸ್ಟೇಬಲ್ ಸತೀಶ್ ಮತ್ತು ಪ್ರದೀಪ್ ಶೆಟ್ಟಿ, ಕಾರ್ಕಳ ಎ ಎಸ್ ಪಿ ಕಚೇರಿಯ ಸಿಬ್ಬಂದಿ ಪಿಸಿ ಶಿವಾನಂದ ಪೂಜಾರಿ ರವರು ಕಳ್ಳತನದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನೌಶಾದ್ ನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಈ ದಿನ ಮಾನ್ಯ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.

Related Posts

Leave a Reply

Your email address will not be published.