ಉಡುಪಿ ; ನಾಲ್ವರ ಕೊಲೆ ಪ್ರಕರಣ, ಆರೋಪಿ ಪ್ರವೀಣ್ ಬಂಧನ

ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಳಗಾವಿಯಲ್ಲಿ ಪೆÇಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನು ಎಂದು ತಿಳಿದುಬಂದಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನಲಾಗಿದೆ.
ಪ್ರವೀಣ್ ಅರುಣ್ ಚೌಗಲೆ ರಾಯಭಾಗದ ಕುಡಚಿಗೆ ಬಂದು ಮೊಬೈಲ್ ಆನ್ ಮಾಡಿದಾಗ ಕಾರ್ಯಾಚರಣೆ ನಡೆಸಿದ ಉಡುಪಿಯ ಪೆÇಲೀಸರ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಉಡುಪಿಗೆ ಕರೆ ತರಲಾಗುತ್ತಿದೆ.
ಆರೋಪಿ ಈ ಹಿಂದೆ ಅISಈ ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಬಳಿಕ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಮಾಹಿತಿಗಳ ಪ್ರಕಾರ, ಘಟನೆಯ ಬಳಿಕ ಲಭ್ಯವಿದ್ದ ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿದ್ದ ಪೆÇಲೀಸರು ಆರೋಪಿಯ ನಡಿಗೆ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ. ಬಳಿಕ ಆರೋಪಿ, ಅರುಣ್ ಚೌಗಲೆ ಬೆನ್ನುಬಿದ್ದ ಪೆÇಲೀಸರು, ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.
ಆರೋಪಿ ಪ್ರವೀಣ್ ಅರುಣ್ ಚೌಗುಲೆ ಎಂಬಾತನನ್ನು ಇಂದು ಮಧ್ಯಾಹ್ನದ ವೇಳೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ನ್ಯಾಯಾಲಯದ ಬಳಿ ಹೆಚ್ಚಿನ ಪೆÇಲೀಸ್ ಭದ್ರತೆಗೆ ಸಿದ್ಧತೆ ನಡೆಸಲಾಗಿದೆ.
25 ಎಎಸೈ, 5 ಪಿಎಸೈ, 3 ಇನ್ಸ್ಪೆಕ್ಟರ್, 150 ಕಾನ್ಸಸ್ಟೇಬಲ್ , 6 ಡಿಎಆರ್ ತುಕಡಿ, 3 ಕೆಎಸ್ ಆರ್ ಪಿಯನ್ನು ನೇಮಕ ಮಾಡಲಾಗಿದ್ದು, ಉಡುಪಿ ಡಿವೈಎಸ್ ಪಿ ದಿನಕರ ನೇತೃತ್ವದಲ್ಲಿ ಬೀಗು ಪೊಲೀಸ್ ಬಂದೋಬಸ್ತ್ ವದಗಿಸಲಾಗಿದೆ.
