ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವು : ಕಾಪು ಸಮೀಪದ ಮಡುಂಬು ಎಂಬಲ್ಲಿ ಘಟನೆ

ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಕಾಪು ಸಮೀಪದ ಮಡುಂಬು ಎಂಬಲ್ಲಿ ನಡೆದಿದೆ. ಶರ್ಮಿಳಾ ಶೆಟ್ಟಿ(22) ಮೃತ ಪಟ್ಟ ಯುವತಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಈಕೆ ಇಂದು ಮುಂಜಾನೆ ತನ್ನ ಊರಿಗೆ ಬಂದಿದ್ದಳು. ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕರ ನೆರವಿನಲ್ಲಿ ಶವವನ್ನು ಬಾವಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಬಿಟ್ಟು ಕೊಟ್ಟಿದ್ದು ಪ್ರಕರಣ ಕಾಪು ಠಾಣೆಯಲ್ಲಿ ದಾಖಲಾಗಿದೆ