ಉಡುಪಿ ಪ್ರಕರಣದ ತನಿಖೆ ಆದ ನಂತರ ಕೋರ್ಟಿಗೆ ವರದಿ ಕೊಡುತ್ತೇವೆ || ಮನೀಶ್ ಕರ್ಬೀಕರ್
ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಉಡುಪಿಗೆ ಆಗಮಿಸಿ ಉಡುಪಿ ಬನ್ನಂಜೆ ಸರಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಸಿಐಡಿ ಅಧಿಕಾರಿಗಳು, ಜಿಲ್ಲಾ ಪೆÇಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಎಡಿಜಿಪಿ ಅವರು ಅಧಿಕಾರಿಗಳಿಂದ ತನಿಖೆಯ ವಿವರಗಳನ್ನು ಪಡೆದುಕೊಂಡು ಸಲಹೆ, ಸೂಚನೆಗಳನ್ನು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ತನಿಖೆ ಪ್ರಗತಿಯಲ್ಲಿದ್ದು, ಎಫ್‍ಎಸ್‍ಎಲ್ ವರದಿಗೆ ಕಾಯುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.