ಮಳೆನೀರಿಗೆ ಬಿದ್ದ ಮೃತರ ಮನೆಗೆ ಸಹಾಯಕ ಆಯುಕ್ತ ಭೇಟಿ
ಉಳ್ಳಾಲ: ಪ್ರಾಕೃತಿಕ ವಿಕೋಪದಡಿ ಜು. 04 ರಂದು ಮೃತಪಟ್ಟ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ನಿವಾಸಿ ಸುರೇಶ್ ಗಟ್ಟಿ ಮನೆಗೆ ಸಹಾಯಕ ಆಯುಕ್ತರಾದ ರಾಜು.ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಪತ್ನಿಗೆ ವೃದ್ಧಾಪ್ಯ ವೇತನ ಹಾಗೂ ಹೆಚ್ಚುವರಿ ರೂ. 20,000 ಅನುದಾನವನ್ನು ಸರಕಾರದ ವತಿಯಿಂದ ಒದಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು ಈ ಸಂದರ್ಭ ಕಂದಾಯ ನಿರೀಕ್ಷಕ ಮಂಜುನಾಥ್ , ಸೋಮೇಶ್ವರ ಪುರಸಭೆ ಗ್ರಾಮಕರಣಿಕೆ ಲಾವಣ್ಯ, , ಮೃತರ ಸಂಬಂಧಿ ಸುರೇಶ್ ಗಟ್ಟಿ, ಪತ್ನಿ ಶಾಂಭ ಪುತ್ರಿಯರಾದ ಪ್ರತೀಕ್ಷಾ, ದೀಕ್ಷಾ ಉಪಸ್ಥಿತರಿದ್ದರು.


















