ಉಳ್ಳಾಲ : ನೇತ್ರಾವತಿ ನದಿತಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಉಳ್ಳಾಲ: ನೇತ್ರಾವತಿ ನದಿತಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಹಾಸನ ಬೇಳೂರು ನಿವಾಸಿ ಮೊಹಮ್ಮದ್ ಝಾಕಿರ್ (50) ಎಂದು ಉಳ್ಳಾಲ ಠಾಣೆಗೆ ಆಗಮಿಸಿದ ಮನೆಮಂದಿ ತಿಳಿಸಿದ್ದಾರೆ. ಕೆಲ ತಿಂಗಳುಗಳಿಂದ ಅಸೌಖ್ಯಕ್ಕೀಡಾಗಿದ್ದ ಝಾಕೀರ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿದ್ದರು. ಎರಡು ದಿನಗಳ ಹಿಂದೆಯೂ ಊರುಬಿಟ್ಟು ಔಷಧಿಗೆಂದು ಬಂದಿದ್ದವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಮಂದಿ ಎಲ್ಲೆಡೆ ಎರಡು ದಿನಗಳ ಕಾಲ ವಿಚಾರಿಸಿದ್ದರು. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮೃತದೇಹದ ಫೋಟೊ ಕಂಡ ಮನೆಮಂದಿ ಉಳ್ಳಾಲ ಠಾಣೆಗೆ ಇಂದು ಆಗಮಿಸಿ, ಮೃತದೇಹದದ ಗುರುತು ಪತ್ತೆಹಚ್ಚಿದ್ದಾರೆ. ಮೃತರು ಅಸೌಖ್ಯದಿಂದ ಮಾನಸಿಕವಾಗಿ ನೊಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.