ಶಿರ್ತಾಡಿ : ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮತಯಾಚನೆ
ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗುರುವಾರದಂದು ಶಿರ್ತಾಡಿ ಜಿ.ಪಂ.ಕ್ಷೇತ್ರದ ಬೆಳುವಾಯಿ, ದರೆಗುಡ್ಡೆ ಮತ್ತು ಅಳಿಯೂರು ಪೇಟೆಗಳಲ್ಲಿ ಮತಯಾಚಿಸಿದರು.
ಮಂಡಲ ಅಧ್ಯಕ್ಷರಾದ ಸುನೀಲ್ ಆಳ್ವ, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರಾದ ಸುಕೇಶ್ ಶೆಟ್ಟಿ, ಅಶ್ವತ್ಥ್ ಪಣಪಿಲ, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.