ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿ
ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಯಿಲದ ಅತೂರ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಕಡಬದ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನ ಮೈಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದರು.
ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ ನಡೆದುಕೊಂಡು ಮದರಂಗಿ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಗೂಡ್ಸ್ ಟೆಂಪೋವೊಂದು ಇವರಿಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


















