🛑ನೆಲ್ಯಾಡಿ: ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ, ಲಾರಿ ಸಮೇತ ಸೊತ್ತು ವಶ

ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎನ್.ಎಚ್. 75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಶಿಯಾ ಉರುವಲು ಸಾಗಾಟ ಮಾಡುತ್ತಿದ್ದ ಕೆಎ21 ಬಿ 3478 ಸಂಖ್ಯೆಯ ಲಾರಿಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಕೊಕ್ಕಡ ಸಾಹುಲ್ ಹಮೀದ್ ಪರಾರಿಯಾಗಿದ್ದಾನೆ. ರೆಖ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತದಲಗಿ, ಬೀಟ್ ಫಾರೆಸ್ಟರ್‌ಗಳಾದ ನಿಂಗಪ್ಪ ಅವರಿ, ಸುನೀಲ್ ನಾಯ್ಕ್ ಕಾರ್ಯಾಚರಣೆಯಲ್ಲಿದ್ದರು.

Uppinangadi Forest Officers ride

ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 50, 62 ಮತ್ತು 71 ಎ ಮತ್ತು ಕರ್ನಾಟಕ ಫಾರೆಸ್ಟ್ ನ ನಿಯಮ 144, 165 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Related Posts

Leave a Reply

Your email address will not be published.