ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸ್‍ಗೆ ಮತ ಕೊಟ್ಟಿದ್ದಾರೆ: ಖಾದರ್

ಸತ್ಯ- ಅಸತ್ಯ, ಪ್ರಚಾರ-ಅಪಪ್ರಚಾರದ ಬಗ್ಗೆ ರಾಜ್ಯದಲ್ಲಿ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ಜನರು ಬೆಲೆಯೇರಿಕೆ, ದ್ವೇಷ ಭಾವನೆಯಿಂದ ಕಂಗೆಟ್ಟು ನಿರಾಶರಾಗಿದ್ದರು. ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸಿಗೆ ಮತ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಜನರ ವಿಶ್ವಾಸಗಳಿಸಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವ್ಯತ್ಯಾಸವನ್ನು ತೋರಿಸಬೇಕಾಗಿದೆ. ಬೇರೆ ಬೇರೆ ವಿಚಾರಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ. ಕರಾವಳಿಯಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನನ್ನ ಕ್ಷೇತ್ರದಲ್ಲಿ ಎಸ್ಡಿಪಿಐ ಮೂರನೇ ಸ್ಥಾನ ಪಡೆದಿರಬಹುದು. ಆದರೆ ಜನ ನನಗೆ ಆದ್ಯತೆ ಕೊಟ್ಟಿದ್ಧಾರೆ, ಹಿಂದಿಗಿಂತ ಹೆಚ್ಚು ಅಂತರದಲ್ಲಿ ಗೆದ್ದಿದ್ದೇನೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದಲ್ಲಿ ಕೇಂದ್ರ ಸರ್ಕಾರದ ಅನುದಾನ ಕೊಡಲ್ಲ ಎಂಬ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದ ಅನುದಾನ ಭಿಕ್ಷೆಯಲ್ಲ, ನಮ್ಮ ತೆರಿಗೆಯ ದುಡ್ಡಿನಲ್ಲಿ ಅನುದಾನ ಬರುವುದು. ಅನುದಾನ ಕೊಡದಿದ್ದರೆ ಬಾಯಿ ಮುಚ್ಚಿಕೊಂಡು ಕೂರುವುದಿಲ.್ಲ
ಹಿಂದೆ ಬಿಜೆಪಿ ಸಂಸದರು ಮೌನ ವಹಿಸಿದ್ದರೆಂದು ನಾವು ಮೌನ ವಹಿಸಲ್ಲ. ನಮ್ಮ ದುಡ್ಡನ್ನು ಕಿತ್ತು ಗುಜರಾತಿಗೆ ಒಯ್ದು ಕೊಡುವ ಕೆಲಸ ಮಾಡ್ತಿದೆ. ರಾಜ್ಯಕ್ಕೆ ಪ್ರತಿ ವರ್ಷ ಒಂದೂವರೆ ಲಕ್ಷ ಕೋಟಿ ಜಿಎಸ್ಟಿ ಬರಬೇಕಾಗುತ್ತದೆ. ಅದನ್ನು ಪಡೆಯುವುದಕ್ಕೆ ನಮಗೆ ಗೊತ್ತಿದೆ ಎಂದರು.

ತುಳು ದ್ವಿತೀಯ ಭಾಷೆ ಸ್ಥಾನಮಾನ ವಿಚಾರದ ಬಗ್ಗೆ ಖಾದರ್ ಅವರು ಪ್ರತಿಕ್ರಿಯೆ ನೀಡಿ, ದ.ಕ. ಜಿಲ್ಲೆಯವರೇ ಕನ್ನಡ, ಸಂಸ್ಕೃತಿ ಸಚಿವರಾಗಿ ತುಳು ಭಾಷೆ ಬಗ್ಗೆ ನಿರ್ಣಯ ಮಾಡಿಲ್ಲ.
ಬಿಜೆಪಿಯವರು ಹೇಳಿಕೆ ಕೊಟ್ಟು ಮೋಸ ಮಾಡಿದ್ದು ಮಾತ್ರ. ತಜ್ಞರ ಕಮಿಟಿ ಮಾಡಿ ಯಾಕೆ ದ್ವಿತೀಯ ಭಾಷೆಯ ಘೋಷಣೆ ಮಾಡಿಲ್ಲ. ತುಳು ಭಾಷೆ ಮಾನ್ಯತೆ ಬಗ್ಗೆ ನಾವು ಆದ್ಯತೆ ಮೇಲೆ ಮಾಡುತ್ತೇವೆ ಎಂದು ಖಾದರ್ ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಹಿಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಭೋದಯ ಆಳ್ವಾ, ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಯು.ಕೆ. ಮೋನು, ಮಾಜಿ ಮೇಯರ್ ಕವಿತಾ ಸನಿಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಕಾರ್ಪೋರೇಟರ್ ಕುಮಾರಿ ಅಪ್ಪಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.