ವಿಷ್ಣುಮಂಗಲ ಇಂಗ್ಲಿಷ್ ಕಥಾ ಸಂಕಲನ ಬಿಡುಗಡೆ
ಡಾ. ವಸಂತಕುಮಾರ ಪೆರ್ಲ ಅವರ ಮೂಲ ಕನ್ನಡ ಕಥೆಗಳ ಇಂಗ್ಲಿಷ್ ಅನುವಾದ ವಿಷ್ಣುಮಂಗಲ ಇಂಗ್ಲಿಷ್ ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್ಕ್ಲಬ್ನಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಅವರು ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಒಂದು ಸಣ್ಣ ಕೃತಿ 16 ಕಥೆಗಳನ್ನೊಳಗೊಂಡಿದೆ. ಈ ಕಥೆಗಳನ್ನು 100ರ ಹರೆಯಲ್ಲಿರುವ ಪ್ರಸಿದ್ಧ ಅನುವಾದಕ ಬಿ.ಆರ್. ಭೀಮಾಚಾರ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ನÀ ಅಧ್ಯಕ್ಷರಾದ ಡಾ.ಎಂ.ಪಿ. ಶ್ರೀನಾಥ್, ಕೃತಿಕಾರರಾದ ಡಾ. ವಸಂತ್ ಕುಮಾರ್ ಪೆರ್ಲ ಉಪಸ್ಥಿತರಿದ್ದರು.



















