ವಿಟ್ಲ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳ ಪದಗ್ರಹಣ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಸಿಂಹಗಿರಿ ಲಯನ್ಸ್ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಕಾರ್ಯದರ್ಶಿ ಜಲಜಾಕ್ಷಿ ಬಾಲಕೃಷ್ಣ, ಕೋಶಾಧಿಕಾರಿ ರವಿಶಂಕರ್ ಅವರಿಗೆ ಲಯನ್ಸ್ ಕ್ಲಬ್ ಪ್ರಥಮ ಉಪರಾಜ್ಯಪಾಲ ಮೆಲ್ವಿನ್ ಡಿ ಸೋಜ ಪದಗ್ರಹಣಆ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ವಿಟ್ಲ ಲಯನ್ಸ್ ಕ್ಲಬ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಜಿಲ್ಲೆಗೆ ವಿಟ್ಲ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದರು.

ನೂತನ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಮಾತನಾಡಿ ಲಯನ್ಸ್ ಕ್ಲಬ್ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಬಡವರಿಗೆ ಸಹಾಯ ಮಾಡುವ ಮೂಲಕ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ. ತನ್ನ ಅವಧಿಯಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಜಿಲ್ಲಾ ಗವರ್ನರ್ ಅವರ ಕಾರ್ಯಕ್ರಮ ವನ್ನು ನಿರ್ವಹಿಸುತ್ತೇನೆ ಎಂದರು.

ವಿಟ್ಲ ಲಯನ್ಸ್ ಕ್ಲಬ್ ಗೆ ನೂತನವಾಗಿ ಬಬಿತಾ, ರಜತ್ ಆಳ್ವ, ಸಂಜಯ್, ಅರವಿಂದ ರೈ ಮೂರ್ಜೆಬೆಟ್ಟು, ಸೇರ್ಪಡೆಗೊಂಡರು. ಸ್ಥಾಪಕ ಸದಸ್ಯ ಸಿ.ವಿ ಗೋಪಾಲಕೃಷ್ಣ ಅವರನ್ನು ಸ್ಥಾಪಕ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು. ಪಿಯುಸಿ, ಎಸ್ಸೆಎಸ್ಸೆಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಧನ್ಯಶ್ರೀ ಮತ್ತು ಜೀವಿತಾ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಕಡಂಬು ಮತ್ತು ಎರ್ಮೆನಿಲೆ ಬಡಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು. ವಿಟ್ಲ ಪಿಸಿಯೋಥೆರಪಿ ಘಟಕಕ್ಕೆ ಕುರ್ಚಿ ವಿತರಿಸಲಾಯಿತು.

ಜಿಲ್ಲಾ ಮುಖ್ಯ ಕೋ ಆರ್ಡಿನೇಟರ್ ಎಚ್ ಎಂ ತಾರಾನಾಥ್, ನಿಕಟಪೂರ್ವ ಗವರ್ನರ್ ಡಾ. ಗೀತಾಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ನಿರ್ಗಮನ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂಯಿಸ್ ಮಸ್ಕರೇಂಞಸ್, ಕೋಶಾಧಿಕಾರಿ ಗಂಗಾಧರ್, ಪ್ರಮುಖರಾದ ಮುರಳೀಧರ್ ಪ್ರಸಾದ್, ಲಿಯೋ ಕ್ಲಬ್ ಅಧ್ಯಕ್ಷೆ ಯುಕ್ತಾ ಡಿ.ಎಂ, ಕಾರ್ಯದರ್ಶಿ ವೈಭವಿ ಆಚಾರ್ಯ, ಕೋಶಾಧಿಕಾರಿ ಮೊಹಮ್ಮದ್ ಸಹಲಾನ್ ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಪ್ರಭಾಕರ್ ಶೆಟ್ಟಿ ದಂಬೆಕಾನ, ಲಕ್ಷ್ಮಣ್, ಮಹಮ್ಮದ್ ಇಕ್ಬಾಲ್ ಹಾನೇಸ್ಟ್, ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಡಾ. ಗಾಯತ್ರಿ ಗೀತಾಪ್ರಕಾಶ್, ಸಿಂಧು ಶೆಟ್ಟಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.

Related Posts

Leave a Reply

Your email address will not be published.