ವಿಟ್ಲ: ವಿಟ್ಲ-ಕನ್ಯಾನ ರಸ್ತೆಯೂ ತೀರಾ ಹದಗೆಟ್ಟು ಹೋಗಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಬಿಡಿ, ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿಗೆ ಇಂಟರ್ ಲಾಕ್ ಅಳವಡಿಸಿದ್ದು, ಅದೀಗ ಕಿತ್ತು ಹೋಗಿದೆ. ಈ ರಸ್ತೆ ವಿಟ್ಲದಿಂದ ಕನ್ಯಾನ, ಬಾಯಾರು, ಉಪ್ಪಳ, ಆನೆಕಲ್ಲು, ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಲಿಸುತ್ತದೆ‌ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರ ದುಸ್ಥರವಾಗಿದೆ.ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ ಗಳು, ಗುತ್ತಿಗೆದಾರರು ಮಲಗಿರುತ್ತಾರೆ. ಯಾರೂ ತೊಂದರೆ ಕೊಡಬಾರದು ಎಂದು ಬರೆಯಲಾಗಿದೆ

Related Posts

Leave a Reply

Your email address will not be published.