ಪತಿ ಜೀವನ್ಮರಣ ಹೋರಾಟ: ಪತ್ನಿ ಮಗ ನಾಪತ್ತೆ

ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ನಿರಾಜೆ ಎಂಬಲ್ಲಿ ಪತಿ ಆತ್ಮ ಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೆ ಇತ್ತ ಪತ್ನಿ ಮತ್ತು ಮಗ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಕೊಹಿಲ ಗ್ರಾಮದ ಜನತ ಕಾಲೋನಿ ನಿವಾಸಿ ಮುನಿರ್ ಎಂಬವರ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೆ ಇತ್ತ ಆತನ ಪತ್ನಿ ನೇಹಾ(೩೬) ಹಾಗೂ ಇವರ ಪುತ್ರ ಮಹಮ್ಮದ್ ನಿಹಾಲ್(೩.೫) ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ದೂರು ನೀಡಿರುವ ನಿರಾಜೆ ನಿವಾಸಿ ಮುನೀರ್ ಅವರ ಸಹೋದರಿ ಹಾಜಿರಾ ನನ್ನ ತಮ್ಮ ಮುನೀರ್ ಮೂಡಿಗೆರೆ ನಿವಾಶಸಿಯಾಗಿದ್ದ ನೇಹಾಳನ್ನು ಎoಟು ವರ್ಷಗಳ ಹಿಂದೆ ಮದುವೆಯಾಗಿದ್ದು ಈಕೆಗೆ ಆರು ವರ್ಷದ ಸಫಿಯಾ ಹಾಗೂ ಮೂರುವರೆ ವರ್ಷದ ಮಹಮ್ಮದ್ ನಿಯಾಲ್ ಎಂಬರು ಮಕ್ಕಳಿದ್ದಾರೆ. ಮುನೀರ್ ಹಾಗೂ ಆತನ ಪತ್ನಿ ನೇಹಾ ಎರಡು ವರ್ಷಗಳ ಕಾಲ ಕೊಹಿಲಾದ ಆತನ ಮನೆಯಲ್ಲಿ ವಾಸವಿದ್ದರು. ಬಳಿಕ ಬಾಡಿಗೆ ಮನೆಯಲ್ಲಿದ್ದರು. ಮೂರು ತಿಂಗಳ ಹಿಂದೆ ಮುನೀರ್ ದೊಡ್ಡ ಮಗಳು ಸಫಿಯಾಳನ್ನು ನನ್ನ ತಂದೆಯ ಮನೆಯಲ್ಲಿ ಬಿಟ್ಟು, ಪತ್ನಿ ನೇಹಾ ಹಾಗೂ ಮಗ ಮಹಮ್ಮದ್ ನಿಯಾಲ್ ಜೊತೆ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಕಳೆದ ನವೆಂಬರ್ ತಿಂಗಳಲ್ಲಿ ಸಫಿಯಾಳ ಹುಟ್ಟು ಹಬ್ಬಕ್ಕೆಂದು ಆಗಮಿಸಿ ಆ ದಿನವೇ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಡಿಸೆಂಬರ್ ೨೫ ರಂದು ಮುನೀರ್ ಒಬ್ಬನೇ ಬೆಂಗಳೂರಿನಿoದ ಬಂದು ಕೊಹಿಲದಲ್ಲಿ ತಂದೆಯ ಮನೆಯಲ್ಲಿ ಉಳಿದುಕೊಂಡಿದ್ದ. ಆತನ ಪತ್ನಿ ಹಾಗೂ ಮಗುವಿನ ಬಗ್ಗೆ ವಿಚಾರಿಸಿದರೆ ಇನ್ನೆರಡು ದಿನಗಳಲ್ಲಿ ಅವರು ಬರುತ್ತಾರೆ ಎಂದಿದ್ದ. ಮಾತ್ರವಲ್ಲ ಆತ ಪತ್ನಿ ಮತ್ತು ಮಗನೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದ. ಬಳಿಕ ಡಿಸೆಂಬರ್ ೩೦ ರಂದು ಮುನೀರ್ ಯಾವುದೋ ಕಾರಣಕ್ಕೆ ನೇಣು ಹಾಕಿಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಾವಿನಿಂದ ಪಾರಾಗಿದ್ದ. ಜನವರಿ ೩ ರಂದು ಮತ್ತೆ ನಿರಾಜೆ ಆಯಿಷಾ ಶಾಲಾ ಬಳಿ ಆತ್ಮಹತ್ಯೆಗೆ ಪ್ರಯತ್ನಿಸಿ ಗಂಭೀರ ಸ್ಥಿತಿಗೆ ತಲುಪಿದ್ದ. ಆತನಿಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತೀವೃ ನಿಗಾ ಘಟಕದಲ್ಲಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ನೇಹಾಳಿಗೆ ವಿಷಯ ತಿಳಿಸಲು ದೂರವಾಣಿ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾಯಿ ಮಗನ ಬಗ್ಗೆ ಸಂಬoಧಿಕರ ಬಳಿ ವಿಚಾರಿಸ ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ನಾಪತ್ತೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ತಾಯಿ, ಮಗನನ್ನು ಪತ್ತೆ ಹಚ್ಚಿಕೊಡುವಂತೆ ಪೋಲೀಸರಿಗೆ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published.