ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಪತ್ತೆ:ಇಬ್ಬರು ವಶಕ್ಕೆ
ಪೈಶಾಚಿಕ ಕೃತ್ಯವೊಂದರಲ್ಲಿ ವ್ಯವಸ್ಥಿತ ರೀತಿಯಲ್ಲಿ ಟ್ರಕ್ ನಲ್ಲಿ ಕೋಣ, ಎತ್ತು, ಎಮ್ಮೆ ಹೀಗೆ ಹದಿನೇಳು ಜಾನುವಾರುಗಳನ್ನು ಅಡ್ಡಾದಿಡ್ಡಿಯಾಗಿ ತುಂಬಿಸಿಕೊಂಡು ಬರುತ್ತಿರುವ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಗೇಟ್ ಬಳಿ ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಒಂದು ಎತ್ತು ಸಾವನ್ನಪ್ಪಿದ್ದರೆ, ಮತ್ತೊಂದು ಸಾವಿನಂಚಿನಲ್ಲಿದೆ. ಇನ್ನೊಂದು ಕಾರ್ಯಚರಣೆಯ ಸಂದರ್ಭ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಶದಲ್ಲಿರುವ ಆರೋಪಿಗಳು ಟ್ರಕ್ ಚಾಲಕ ಹುಬ್ಬಳ್ಳಿ ದಾರವಾಡ ಮೂಲದ ನೂರ್ ಮಹಮ್ಮದ್ ಮಗ ಕಲಂದರ್ ತಹಶಿಲ್ದಾರ್(33) ಹಾಗೂ ಕ್ಲಿನರ್ ಹುಬ್ಬಳ್ಳಿ ದಾರವಾಡದ ರುಸ್ತುಆಲಿ ಪುತ್ರ ಅಬ್ದುಲ್ ರಹಮಾನ್(30). ಟ್ರಕ್ ಆರೀಫ್ ಎಂಬಾತನ ಹೆಸರಲ್ಲಿ ಇದ್ದು ಇಂಥಹ ಕೃತ್ಯಕ್ಕೆ ರೆಡೀ ಮಾಡಿದಂತ್ತಿರುವ ಟ್ರಕ್ ನ ಮೇಲ್ ಭಾಗದಲ್ಲಿ ಈರುಳ್ಳಿ ಚೀಲಗಳನ್ನು ತುಂಬಿಸಿ ಒಳ ಭಾಗದಲ್ಲಿ ಜಾನುವಾರುಗಳನ್ನು ಜೋತು ಹಾಕಲು ಸರ್ವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಅದರಲ್ಲಿ ಬೃಹತ್ ಎತ್ತು ಕೋಣಗಳನ್ನು ಮನ ಬಂದಂತೆ ತುಂಬಿಸಿ ಕಟ್ಟಲಾಗಿತ್ತು. ಈ ಕರುಣೆ ಇಲ್ಲದ ಕೃತ್ಯದಿಂದಾಗಿ ಒದ್ದಾಟ ನಡೆಸಿ ಒಂದು ಪಾಣ ಬಿಟ್ಟಿದ್ದು ಮತ್ತೊಂದು ಗಂಭೀರ ಗಾಯಗೊಂಡು ಪ್ರಾಣ ಬಿಡುವ ಕೊನೆಯ ಕ್ಷಣದಲ್ಲಿದೆ. ಬಹುತೇಕ ಎಲ್ಲಾ ಜಾನುವಾರುಗಳು ಗಾಯಗೊಂಡಿದೆ.
ದೊಡ್ಡ ಜಾಲವೊಂದು ಇದರ ಹಿಂದಿದ್ದು, ಇದೇ ರೀತಿ ತರಕಾರಿ ಹಣ್ಣು ಹಂಪಲು ಸಾಗಾಟದ ಮುಖವಾಡ ಹಾಕಿಕೊಂಡು ಹಿಂಸಾತ್ಮಕವಾಗಿ ಜಾನುವಾರ ಸಾಗಾಟ ವ್ಯವಸ್ಥಿತಿವಾಗಿ ನಡೆಸುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಕೃತ್ಯದಲ್ಲಿ ಪೊಲೀಸ್ ಇಲಾಖೆಯೂ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಕಾರಣ ಹುಬ್ಬಳ್ಳಿಯಿಂದ ಕೇರಳಕ್ಕೆ ಹೊರಟಿದೆ ಎನ್ನಲಾದ ಈ ಟ್ರಕ್ ಬಹಳಷ್ಟು ಪೊಲೀಸ್ ಚೆಕ್ ಪೋಸ್ಟ್ ಗಳನ್ನು ದಾಟಿ ಬಂದಿದರೂ ಏಕೆ ಪೊಲೀಸ್ ಮೂಗಿಗೆ ಈ ಕೃತ್ಯದ ವಾಸನೆ ಬಡಿದಿಲ್ಲ ಎಂಬ ಸಂಶಯ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಅಶೋಕ್ ಕುಮಾರ್ ತಂಡ ಈ ಟ್ರಕ್ ನ್ನು ಅಡ್ಡ ಹಾಕಿ ಹತ್ತಾರು ಜಾನುವಾರುಗಳ ಪ್ರಾಣ ಉಳಿಸಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಾನುವಾರುಗಳನ್ನು ಗೋವು ಶಾಲೆಗೆ ಸಾಗಿಸಲಾಗಿದೆ.