ಅಘ್ಫಾನ್‌ನಲ್ಲಿ ಮಂಗಳೂರಿಗರು ಬಾಕಿಯಾಗಿದ್ದಲ್ಲಿ ನೆರವಿಗೆ ಕ್ರಮ : ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ 

ಮಂಗಳೂರು ಕಮೀಷರೇಟ್ ವ್ಯಾಪ್ತಿಯ ಒಟ್ಟು 7 ಮಂದಿ ಅಘ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

 ಕಳೆದ ಕೆಲ ಸಮಯದಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗಳ ಹಿನ್ನೆಲೆಯಲ್ಲಿ ಕಾಬೂಲ್‌ನಿಂದ ದಿಲ್ಲಿಗೆ ಏರ್‌ಲಿಫ್ಟ್ ಆಗಿ ಕಳೆದರಡು ದಿನಗಳಿಂದ ತಮ್ಮ ಮನೆಗಳಿಗೆ ಆಗಮಿಸಿರುವ ಏಳು ಮಂದಿ ಮಂಗಳೂರಿಗರ ಜತೆ ತಮ್ಮ ಕಚೇರಿಯಲ್ಲಿ ಅವರ ಕುಶೋಲಪರಿ ನಡೆಸಿದರು. ಪ್ರಸಾದ್ ಆನಂದ್, ದಿನೇಶ್ ರೈ, ಶ್ರವಣ್ ಅಂಚನ್, ಜಗದೀಶ್ ಪೂಜಾರಿ, ಡೆಸ್ಮಂಡ್ ಡೇವಿಡ್ ಡಿಸೋಜ, ಡೆನ್ಸಿಲ್ ಮೊಂತೆರೋ, ಮೆಲ್ವಿನ್ ಮೊಂತೆರೋ ಇವರೆಲ್ಲರೂ ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಕಾಬೂಲ್‌ನಿಂದ ಆ.17ರಂದು ದಿಲ್ಲಿಗೆ ಕರೆತಂದು ಬಳಿಕ ಆ.23 ಮತ್ತು 24ರಂದು ಅವರೆಲ್ಲಾ ಮಂಗಳೂರಿಗೆ ಆಗಮಿಸಿದ್ದಾರೆ. ಇವರೆಲ್ಲರೂ ಮಿಲಿಟರಿ ಹಾಗೂ ರಕ್ಷಣಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಹಿಂದಿರುಗಲು ಸಾಧ್ಯವಾಗಿದೆ. ಮಂಗಳೂರು ಅಥವಾ ದ.ಕ. ಜಿಲ್ಲೆಯ ಇತರರು ಇತರ ಕೆಲಸಗಳಲ್ಲಿ ಅಲ್ಲಿರುವವವರ ಬಗ್ಗೆ ಇವರಿಗೆ ಯಾವುದೇ ಮಾಹಿತಿ ಇಲ್ಲ. ಇವರೆಲ್ಲಾ 2011ರಿಂದ ಅಲ್ಲಿ ಎ.ಸಿ. ಮೆಕ್ಯಾನಿಕ್, ಹೆವಿ ಇಕ್ಯೂಪ್‌ಮೆಂಟ್ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಕೇಂದ್ರ ಸರಕಾರವು ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಒಂದು ವೇಳೆ ಇನ್ನೂ ಯಾರಾದರೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿರುವ ಮಂಗಳೂರಿಗರು ಇದ್ದಲ್ಲಿ ಮಾಹಿತಿ ನೀಡಿದರೆ, ರಾಜ್ಯದ ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಮಾಹಿತಿಯನ್ನು ಒದಗಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.ಈ ವೇಳೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.