ಅಪ್ಘಾನಿಸ್ತಾನದಿಂದ ಮಂಗಳೂರಿಗೆ ಆಗಮಿಸಿದ ಡೆಮ್ಸಿ ಮೊಂತೆರೋ

ಉಳ್ಳಾಲ ಉಳಿಯದ ನಿವಾಸಿ ಮೆಲ್ವಿನ್ ಮೊಂತೇರೊ ಅಫ್ಘಾನಿಸ್ತಾನದಿಂದ ಕಳೆದ ವಾರ ಪಾರಾಗಿ ಬಂದಿದ್ದರು. ಇದೀಗ ಉದ್ಯೋಗಕ್ಕಾಗಿ ತೆರಳಿ ಸಿಕ್ಕಿಬಿದ್ದಿದ್ದ ಮೆಲ್ವಿನ್ ಸಹೋದರ ಡೆಮ್ಸಿ ಮೊಂತೆರೊ ಕೂಡ ಇಂದು ಅಪ್ಘನ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ.

ಕಳೆದ ಐದು ವರ್ಷಗಳಿಂದ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಇಕೊಲೊಗ್ ಇಂಟರ್ನ್ಯಾಷನಲ್ ಕಂಪನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮೊಂತೆರೊ ಇಂದು ಉಳ್ಳಾಲದ ಉಳಿಯದಲ್ಲಿರುವ ತನ್ನ ಮನೆಗೆ ಮರಳಿದ್ದಾರೆ.

ಕಳೆದ ಆ.17ರಂದು ಭಾರತೀಯ ವಾಯುಪಡೆ ಮೆಲ್ವಿನ್ ಮೊಂತೆರೊ ಅವರನ್ನ ಸುರಕ್ಷಿತವಾಗಿ ಭಾರತಕ್ಕೆ ಏರ್ ಲಿಫ್ಟ್ ಮಾಡಿತ್ತು. ಮೆಲ್ವಿನ್ ತಮ್ಮ ಡೆಮ್ಸಿಯನ್ನ ಮರುದಿವಸ ಆ.18 ರಂದು ನ್ಯಾಟೊ ಪಡೆಯು ಕಾಬೂಲಿನಿಂದ ಏರ್ ಲಿಪ್ಟ್ ಮಾಡಿತ್ತು. ಅಂದು ರಾತ್ರಿ ಇಡೀ ಕಾಬೂಲ್ ಏರ್ಪೋರ್ಟಲ್ಲಿ ಡೆಮ್ಸಿ ಸೇರಿ 155 ಮಂದಿ ಭಾರತೀಯರು ವಿಮಾನದೊಳಗೆ ಕಳೆದಿದ್ದರು.19 ರಂದು ಬೆಳಗ್ಗೆ ಡೆಮ್ಸಿ ಸೇರಿ ಒಟ್ಟು 155 ಮಂದಿಯನ್ನ ಕಾಬೂಲಿನಿಂದ ಕತಾರಿಗೆ ಏರ್ ಲಿಪ್ಟ್ ಮಾಡಲಾಗಿತ್ತು.

ಕತಾರ್ ಏರ್ಪೋರ್ಟಲ್ಲಿ ಡೆಮ್ಸಿ ನಾಲ್ಕು ದಿನ ಕಳೆದಿದ್ದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಅಲ್ಲಿದ್ದ ಭಾರತೀಯರನ್ನು ಶನಿವಾರ ರಾತ್ರಿ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿತ್ತು. ಆನಂತರ ಮುಂಬೈಗೆ ತಲುಪಿದ್ದು ಇಂದು ಮಧ್ಯಾಹ್ನ ಮಂಗಳೂರಿಗೆ ತಲುಪಿದ್ದಾರೆ.

 

 

Related Posts

Leave a Reply

Your email address will not be published.