ಇನೋಳಿಯ ಬ್ಯಾರೀಸ್ ನಾಲೆಡ್ಜ್ ಸೆಂಟರ್‌ನಲ್ಲಿ ಒಂಭತ್ತನೇ ಪದವಿ ಸಮಾರಂಭ

ಮಂಗಳೂರಿನ ಇನೋಳಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 30 ರಂದು ಪದವಿ ದಿನದ ಸಂಭ್ರಮದ ಕ್ಷಣಗಳನ್ನು ಆಚರಿಸಲಾಗುವುದು.ಬೇರಿಸ್ ಇನ್ಸಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬ್ಯಾರಿಸ್ ಎನ್ವಿರೋ-ಅರ್ಕಿಟೆಕ್ಟರ್ ಡಿಸೈನ್ ಸ್ಕೂಲ್‌ನ ಒಂಭತ್ತನೇ ಪದವಿ ಸಮಾರಂಭವು ನಡೆಯಲಿದೆ.


ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಐಟಿ ಪ್ರಾಂಶುಪಾಲರಾದ ಡಾ. ಎಸ್.ಐ. ಮಂಜುರ್ ಬಾಷಾ, ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಆಶ್ವಥ್ ನಾರಾಯಣ್, ಗ್ಲೋಬಲ್ ಲಿಮಿಟೆಡ್‌ನ ಎನ್‌ಟಿಟಿ ಸಿಇಒ ಶಾರದ್ ಸಂಘಿ, ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಡಾ. ಉಮಾಮಹೇಶ್ವರ್ ರಾವ್, ಶಾಸಕ ಯು.ಟಿ. ಖಾದರ್, ಮಂಜೇಶ್ವರದ ಶಾಸಕ ಎಕೆಎಂ ಆಶ್ರಫ್, ಭಾಗವಹಿಸಲಿದ್ದಾರೆ. ಪದವಿ ಪ್ರದಾನ ಸಮಾರಂಭದ ಉದ್ಘಾಟನಾ ಭಾಷಣವನ್ನು ಸಚಿವ ಡಾ. ಅಶ್ವಥ್ ನಾರಾಯಣ ಅವರು ಮಾಡಲಿದ್ದು, ಮುಖ್ಯ ಭಾಷಣವನ್ನು ಶರದ್ ಸಂಘಿ ಅವರು ಮಾಡಲಿದ್ದಾರೆ. ಪದವಿ ದಿನದ ಭಾಷಣವನ್ನು ಡಾ. ಉಮಾಮಹೇಶ್ವರ್ ರಾವ್ ಮಾಡಲಿದ್ದಾರೆ. 2017 ರ ಬ್ಯಾಚ್‌ನ ಪದವೀಧರರು ಮತ್ತು 2019 ರ ಬ್ಯಾಚ್‌ನ ಇಂಜಿನಿಯರಿಂಗ ಸ್ನಾತಕೋತ್ತರ ಪದವಿಧರರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬೀಡ್ಸ್ ಪ್ರಾಂಶುಪಾಲರಾದ ಆರ್. ಅಶೋಕ್.ಎಲ್. ಮೆಂಡೋನ್ಸಾ, ಬಿಐಟಿ-ಪಾಲಿಟೆಕ್ನಿಕ್ ನಿರ್ದೇಶಕ ಡಾ. ಅಜೀಜ್ ಮುಸ್ತಾಫ, ಬಿಐಟಿ-ಮಂಗಳೂರಿನ ಇಸಿಇ ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.