ಏಳೂರು ಮೊಗವೀರ ಮಹಾಸಭಾದ ವತಿಯಿಂದ ಹೆಜಮಾಡಿಯಲ್ಲಿ ಸಮುದ್ರ ಪೂಜೆ
ಏಳೂರು ಮೊಗವೀರ ಮಹಾ ಸಭಾದ ವತಿಯಿಂದ ಭಾನುವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ ನೆರವೇರಿಸಿ, ಸಮುದ್ರ ದೇವತೆಗೆ ಹಾಲು, ತೆಂಗಿನಕಾಯಿ ಸಮರ್ಪಣೆ ನೆರವೇರಿಸಲಾಯಿತು.
ಪಲಿಮಾರು, ಗುಂಡಿ, ಸಣ್ಣ ಗುಂಡಿ, ಹೆಜಮಾಡಿ, ಮಟ್ಟು, ಆಚೆಮಟ್ಟು ಹಾಗೂ ಕನ್ನಂಗಾರು ಸೇರಿ ಏಳು ಊರಿನ ಮೊಗವೀರ ಬಾಂಧವರು ಹಾಲು, ತೆಂಗಿನ ಕಾಯಿ, ಫಲವಸ್ತುಗಳನ್ನು ತಂದು ಸಮುದ್ರ ದೇವರಿಗೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಏಳೂರು ಮೊಗವೀರ ಮಹಾ ಸಭಾದ ಸದಸ್ಯ, ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ ಮಾತನಾಡಿ, ಹೆಜಮಾಡಿಯ ಗ್ರಾಮ ದೇವರಾದ ಮಹಾಲಿಂಗೇಶ್ವರ ದೇವಸ್ಥಾನ, ಮಾರುತಿ ಮಂದಿರ ಮತ್ತಿತರ ದೈವ ದೇವರ ಪ್ರಸಾದವನ್ನು ಪೂಜಿಸಿ ತರಲಾಯಿತು. ಇದನ್ನು ಸಮುದ್ರ ದೇವರಿಗೆ ಸಮರ್ಪಿಸಲಾಯಿತು.ಪ್ರತೀ ವರ್ಷವೂ ನಾವು ಏಳೂರು ಮೊಗವೀರ ಮಹಾ ಸಭಾದ ವತಿಯಿಂದ ಸಮುದ್ರ ಪೂಜೆ ನೆರವೇರಿಸುತ್ತಿದ್ದೇವೆ ಎಂದರು.ಈ ಸಂದರ್ಭ ಮೊಗವೀರ ಮಹಾ ಸಭಾಧ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.