ಕಡಬದಲ್ಲಿ ಎರಡು ಕಾರುಗಳ ನಡುವೆ ಅಪಘಾತ: ಇಬ್ಬರು ಸ್ಥಿತಿ ಗಂಭೀರ
ಕಡಬ :ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕುಂಡಾಜೆ ಸೇತುವೆಯಲ್ಲಿ ಮಾರುತಿ ಬೆಲೋನೊ ಹಾಗು ಅಲ್ಟೋ ಕಾರು ನಡುವೆ ಅಪಘಾತ ಸಂಭವಿಸಿದೆ.
ಮಾರುತಿ ಬೆಲೋನೊ ಕಾರ್ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಳೆಯವರ ಕಾರು ಎಂದು ತಿಳಿದು ಬಂದಿದ್ದು. ಬೆಲೋನೊ ಕಾರು ಕೆ.ಎ ಎಂ.ಜೆ 4683 ಆಲಂಕಾರು ಭಾಗದಿಂದ ಕೊಯಿಲದ ಕಡೆಗೆ ಹೊಗುತ್ತಿದ್ದು. ಅಲ್ಟೋ ಕಾರು ಕೆ.ಎ 21 .ಪಿ.2263 ಉಪ್ಪಿನಂಗಡಿಯಿಂದ ಕಡಬದ ಕಡೆಗೆ ವೇಗವಾಗಿ ಬರುತ್ತಿದ್ದ ಅಲ್ಟೋ ಕಾರು ಗುದ್ದಿದ ರಭಸಕ್ಕೆ ಉಪ್ಪಿನಂಗಡಿ ಕಡೆಗೆ ತಿರುಗಿ ನಿಂತಿದೆ. ಗಾಯಾಳುಗಳು ಪುತ್ತೂರಿನ ಖಾಸಗಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಪೋಲಿಸರು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.