ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ : ಗರ್ಭಿಣಿಯರಲ್ಲಿ ಪೋಷಣೆ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ
ಮಂಗಳೂರಿನ ಎಸ್‍ಸಿಎಸ್ ಸಮೂಹ ಸಂಸ್ಥೆಗಳ ಅಂಗವಾದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಸೈಂಟ್ ಆನ್ಸ್ ಕಾಲೇಜ್ ಆಫ್ ಎಜ್ಯುಕೇಶನ್ ಅಟೊನೊಮಸ್‍ನಲ್ಲಿ ‘ಗರ್ಭಿಣಿಯರಲ್ಲಿ ಪೋಷಣೆ” ವಿಷಯದ ಕುರಿತು ಜಾಗೃತಿ ಉಪನ್ಯಾಸ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಆಯುರ್ವೇದ ದಿನ ಹಾಗೂ ಆಯುಷ್ ಇಲಾಖೆ – ಎನ್. ಸಿ.ಐ.ಎಸ್. ಎಮ್ ನಿಂದ ನಿರ್ದೇಶಿಸಲಾದ “ಆಜಾದಿ ಕಾ ಅಮೃತ್ ಮಹೋತ್ಸವ್” ಎಂಬ ಯೋಜನೆಯ ಸಲುವಾಗಿ, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ-ಸ್ತ್ರೀ ರೋಗ ವಿಭಾಗದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರವಿ. ರಾವ್. ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರದ ಪ್ರಾಮುಖ್ಯತೆ ಹಾಗೂ ಋತು ಅನುಸಾರ ಮಾಡುವ ಶರದ್ವಿರೇಚನ, ಅಭ್ಯಂಗ ಇತ್ಯಾದಿ ಪಂಚಕರ್ಮ ಚಿಕಿತ್ಸಾ ಕ್ರಮಗಳ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಸೈಂಟ್ ಆನ್ಸ್ ಕಾಲೇಜ್ ಆಫ್ ಎಜ್ಯುಕೇಶನ್ ಅಟೊನೊಮಸ್‍ನ ನ ಪ್ರಾಂಶುಪಾಲರಾದ ಸಿಸ್ಟರ್ ಡೊರೋತಿ ಡಿಸೋಜ ಮುಖ್ಯ ಅಥಿತಿಯಾಗಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಸೂತಿ ತಂತ್ರ-ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ.ಆಶಾ ಕೆ ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಜೆಸಿಂತ ಮೀನಾ ಡಿಸೋಜ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಂಪನ್ಮೂಲ ವ್ಯಕ್ತಿ ಯಾಗಿ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿಡಾ.ಮೇಘ ಉದಯ್ ಅವರು “ಗರ್ಭಿಣಿಯರಲ್ಲಿ ಪೋಷಣೆ” ವಿಷಯದ ಕುರಿತು ಉಪಯುಕ್ತ ಮಾಹಿತಿ ನೀಡಿದರು . ಡಾ. ಶರ್ಮಿಳ ಮಸ್ಕರೇನಸ್ ಸ್ವಾಗತಿಸಿದರು. ಡಾ.ನೀತು ಅವರು ನಿರೂಪಿಸಿದರು. ಕು.ಡಿಯಾನ್ ಅವರು ವಂದಿಸಿದರು.