ಕರ್ನಾಟಕ ರಾಜ್ಯ ರೈತಸಂಘ : ಅರಂತೋಡು ಗ್ರಾಮ ಘಟಕದ ಪುನರ್ರಚನೆ ಹಾಗೂ ಸಭಾ ಕಾರ್ಯಕ್ರಮ

ಅರಂತೋಡು ಗ್ರಾಮ ಘಟಕದ ಪುನರ್ರಚನೆ ಹಾಗೂ ಸಭಾ ಕಾರ್ಯಕ್ರಮ ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ದಿನಾಂಕ ೧೪-೧೧-೨೦೨೧ ರ ಅದಿತ್ಯವಾರ
ತೀರ್ಥರಾಮ ಗೌಡ ಉಳುವಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತಾನಾಡಿದ ರಾಜ್ಯಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಕೇಂದ್ರ ಸರಕಾರ ಸುಗ್ರಿವಾಜ್ಞೆಯ ಮೂಲಕ ತಂದಿರುವ ಜನವೀರೊಧಿ ಮೂರು ಮಸೂದೆಗಳಿಂದ ಭಾರತದ ಆಹಾರ ಸಾರ್ವಭೌಮತ್ವದ ದುಷ್ಪರಿಣಾಮ ಬೀರುತ್ತದೆ. ದೇಶಿಯ ಕೃಷಿ ಸಂಸೃತಿ ಸಂಪೂರ್ಣ ನಾಶವಾಗುತ್ತದೆ. ಸರಕಾರವೂ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನೀಡುವುದರ ಜೊತೆಗೆ ಬೆಂಬಲಬೆಲೆಯನ್ನು ಕಾನೂನಾತ್ಮಕ ಗೊಳಿಸಲು ಸರಕಾವನ್ನು ಆಗ್ರಹಿಸಿದರು ಈ ಸಾಲಿನಲ್ಲಿ ಅನಿರ್ದಿಷ್ಟವಾಗಿ ಮಳೆ ಸುರಿಯುತ್ತಿದ್ದು ಅಡಿಕೆ ಬೆಳೆಯು ಕೊಳೆರೋಗದಿಂದ ಉತ್ಪಾದನೆಯಲ್ಲಿ ತೀವ್ರ ಕುಂಠಿತವಾಗಿದೆ.ಅಲ್ಲದೇ ಅಡಿಕೆಯನ್ನು ಒಣಗಿಸಲು ಮಳೆಯು ಅಡ್ಡಿಯಾಗಿದ್ದು.ಸರಕಾರ ತಕ್ಷಣ ಅಡಿಕೆ ಬೆಳೆಗಾರರ ಸಂಕಷ್ಟ ಆರ್ಥಿಕ ಪರಿಹಾರವನ್ನು ಘೋಷಿಸಲು ಒತ್ತಾಯಿಸಿದರು ಹವಾಮಾನಆಧಾರಿತ ಬೆಳೆವಿಮೆಯ ಪರಿಹಾರವನ್ನು ಪೂರ್ಣಪ್ರಮಾಣದಲ್ಲಿ ತಕ್ಷಣವೇ ನೀಡಲು ಸರಕಾರ ಸೂಚಿಸಬೇಕೆಂದು ಒತ್ತಾಯಿಸಿದರು. ಅಡಿಕೆ ಎಲೆಹಳದಿರೋಗಕ್ಕೆ ರಾಜ್ಯ ಸರಕಾರವೂ ಈಗಾಗಲೇ ೨೫ ಕೋಟಿ ರೂಪಾಯಿಗಳನ್ನು ಘೋಷಿಸಿದ್ದು ಅದನ್ನು ಸಂಶೋದನೆಗೆ ಬಳಸದೆ ನೇರವಾಗಿ ಸಂತ್ರಸ್ತ ರೈತಕುಟುಂಬಕ್ಕೆ ನೀಡಬೇಕು ಹಾಗೂ ಪ್ರಸ್ತುತ ಜಿಲ್ಲಾಡಳಿತ ಮಾಡಿದ ಸರ್ವೆ ಅಸಮರ್ಪಕವಾಗಿದ್ದು ರೈತಸಂಘವೇ ಸಂತ್ರಸ್ತರಿಂದ ನೇರ ಸಮೀಕ್ಷೆ ನಡೆಸಿ ಕರ್ನಾಟಕ ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೃಷಿ ತಜ್ಞರಾದ ಡಾ! ಪ್ರಕಾಶ್ ಕಮ್ಮರಡಿಯವರ ಮೂಲಕ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು ಸರಕಾರವೂ ಈ ವರದಿಯ ಆಧಾರದಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು
ಇತ್ತಿಚೇಗೆ ಕಾರ್ಮಿಕ ಮುಖಂಡ ಕೆ.ಪಿ.ಜೋನಿಯವರ ಮಗಳು ವಿಶೇಷವಾದ ಅನಾರೋಗ್ಯ ದಿಂದ ಹಸು ನೀಗಿದ್ದು ಹಾಗೂ ಸಂಘಕ್ಕೆ ಆರ್ಥಿಕ ಸಹಾಯ ನೀಡಿದ್ದ ಬಾಲಚಂದ್ರ ಕೆಳಗಿ,ಶುಭಕರ ರಾವ್ ಕುಂಭಕೋಡು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು
ಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ,ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೊನ್ಸ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ.ತಾಲೂಕು ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು,ತಾಲೂಕು ಗೌರವಾಧ್ಯಕ್ಷರಾದ ನೂಜಾಲೂ ಪದ್ಮನಾಭ ಗೌಡ,ತಾಲೂಕು ಸಂಚಾಲಕರಾದ ಸೆಬಾಸ್ಟಿಯನ್ ತಾಲೂಕು ಕೋಷಾಧಿಕಾರಿ ದೇವಪ್ಪ ಗೌಡ ಕುಂದಲ್ಪಾಡಿ ಹಾಗೂ ತೋಡಿಕಾನ ಗ್ರಾಮ ಘಟಕದ ಆಧ್ಯಕ್ಷರಾದ ಕೇಶವ ಪ್ರಸಾದ್ ಹಾಗೂ ಯುವ ಮುಖಂಡ ಮಂಜುನಾಥ ಮಡ್ತಿಲ ಹಾಗೂ ಅರಂತೋಡು ಮತ್ತು ತೋಡಿಕಾನ ಗ್ರಾಮದ ಸಂಘದ ಪದಾಧಿಕಾರಿಗಳು ಮತ್ತು ಸಕ್ರಿಯ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ನಿರ್ವಉಳುವಾರು. ಅರಂತೋಡು ಗ್ರಾಮ ಘಟಕದ ನೂತನ ಗೌರವಾಧ್ಯಕ್ಷರಾಗಿ ಪಿ.ಬಿ. ಪ್ರಭಾಕರ ರೈ,ಅಧ್ಯಕ್ಷರಾಗಿ ಬಿ.ಪಿ. ಮೋಹನ್ ದೇರಾಜೆ,ಪ್ರಧಾನ ಕಾರ್ಯದರ್ಶಿ ಯಾಗಿ ನಾಗೇಂದ್ರ ಕುಲ್ಚಾರ್ ಕೋಷಾಧಿಕಾರಿಯಾಗಿ ಮೋಹನ್ ಆಡ್ತಲೆ ಉಪಾಧ್ಯಕ್ಷರುಗಳಾಗಿ ಎ.ಎಮ್.ಜನಾರ್ಧನ,ಟಿ ಹೂವಯ್ಯ,ಚೌಕರ್ ಬಾಜಿನಡ್ಕ ಆಯ್ಕೆ ಯಾದರು

Related Posts

Leave a Reply

Your email address will not be published.