ಕಾವೂರಿನಲ್ಲಿ ಬೀದಿ ಕಾಳಗಕ್ಕೆ ಮುಂದಾದ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು..!
ಮಂಗಳೂರು ನಗರದ ಕಾವೂರು ಜಂಕ್ಷನ್ ಬಳಿ ಸಂಜೆ ಏಳು ಗಂಟೆ ಸುಮಾರಿಗೆ ಬೀದಿ ಕಾಳಗ ನಡೆಯುವುದು ಪೊಲೀಸರ ಮುಂಜಾಗೃತ ಕ್ರಮದಿಂದ ತಪ್ಪಿದ್ದಂತಾಗಿದೆ. ಕಾವೂರು ಠಾಣೆಯ ಸ್ವಲ್ಪ ದೂರದಲಿಲ್ಪೀ ಘಟನೆ ನಡೆದಿದ್ದು ಎರಡು ಕೋಮುಗಳ ಯುವಕರು ಸೇರಿ ಬೀದಿ ಕಾಳಗಕ್ಕೆ ರೆಡಿಯಾಗಿದ್ದರು.
ಯುವಕರಿದ್ದ ಕಾರು ಎದುರಿನಲ್ಲಿದ್ದ ಸ್ಕೂಟರಿಗೆ ಡಿಕ್ಕಿಯಾಗಿತ್ತು. ಸ್ಕೂಟರಿನಲ್ಲಿದ್ದ ಹಿಂದು ಸಂಘಟನೆಯ ಯುವಕರು ಮತ್ತು ಕಾರಿನಲ್ಲಿದ್ದ ಯುವಕರ ನಡುವೆ ಈ ವಿಚಾರಕ್ಕೆ ವಾಗ್ವಾದ ನಡೆದಿದೆ. ಎರಡೂ ಕಡೆಯ ಯುವಕರು ಸ್ಥಳದಲ್ಲಿ ಸೇರಿದ್ದು ಕಾವೂರು ಕೋರ್ದಬ್ಬು ಸ್ಥಾನದ ಬಳಿ ಘಟನೆ ನಡೆದು ಉದ್ವಿಗ್ನ ಸ್ಥಿತಿ ಎದುರಾಗಿತ್ತು.
ಎರಡೂ ಗುಂಪುಗಳು ಕೈ ಮಿಲಾಯಿಸುವ ಗಲಾಟೆಯ ಹಂತಕ್ಕೆ ಬಂದಾಗ, ಸರಿಯಾದ ಸಮಯಕ್ಕೆ ಪೊಲೀಸರು ಧಾವಿಸಿದ್ದು ಸೇರಿದ್ದ ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಅಷ್ಟಾಗುತ್ತಲೇ ಸೇರಿದ್ದ ಯುವಕರೆಲ್ಲಾ ಓಡಿ ತಪ್ಪಿಸಿಕೊಂಡಿದ್ದಾರೆ. ಎದುರಿಗೆ ಸಿಕ್ಕವರಿಗೆಲ್ಲಾ ಲಾಠಿ ರುಚಿ ಸಿಕ್ಕಿದ್ದು. ಪೊಲೀಸರ ಸಕಾಲಿಕ ಕ್ರಮದಿಂದಾಗಿ ಎರಡು ಕೋಮುಗಳ ನಡುವಿವ ಬೀದಿ ಕಾಳಗ ತಪ್ಪಿದದಂತಾಗಿದೆ.