’ಕುಟುಂಬದ ಮೆಯ್ಯಾರಿಗೆದ ಸತ್ಯೊಲು’ ತುಳು ಭಕ್ತಿಗೀತೆ ಯೂಟ್ಯೂಬ್‌ನಲ್ಲಿ ಬಿಡುಗಡೆ
ಗಂದಕಾಡು ಕ್ಷೇತ್ರದ ಧರ್ಮದರ್ಶಿಗಳಾದ ಅಶೋಕ್ ಬಂಗೇರಾ ಇವರ ಶುಭ ಆಶೀರ್ವಾದದೊಂದಿಗೆ ತುಳುನಾಡ ಕಾರ್ಣಿಕ ದೈವ ಶ್ರೀ ವರ್ತೆ ಪಂಜುರ್ಲಿಯ ತುಳು ಭಕ್ತಿಗೀತೆ ’ಕುಟುಂಬದ ಮೆಯ್ಯಾರಿಗೆದ ಸತ್ಯೊಲು’ ಎಂಬ ತುಳು ಭಕ್ತಿಗೀತೆ ಸದ್ಯದಲ್ಲೇ ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.
ಶ್ರೀ ಪಾಪು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಭಕ್ತಿ ಗೀತೆಗೆ ತುಳು ರಂಗಭೂಮಿ ಕಲಾವಿದ ಸುರೇಶ್ ನಿಟ್ಟೆ ಸಾಹಿತ್ಯ ಬರೆದು ಹಾಡಿದ್ದಾರೆ. ಇನ್ನು
ನಿರ್ಮಾಣದ ಹೊಣೆಯನ್ನು ಸಂದೀಪ್ ಪೂಜಾರಿ ನಿಟ್ಟೆ ಮತ್ತು ಸ್ವಸ್ತಿಕ್ ಟ್ರೋನ್ ಆಚಾರ್ಯ ಹೊತ್ತುಕೊಂಡಿದ್ದಾರೆ.ಸ್ವಸ್ತಿಕ್ ಡ್ರೋನ್ ಆಚಾರ್ಯ ಅವರು ಪ್ರಚಾರಕಲೆ ಮತ್ತು ಸಂಕಲನ ಮಾಡುವ ಮೂಲಕ ಅದ್ಬುತವಾಗಿ ತುಳು ಭಕ್ತಿಗೆ ಮೂಡಿಬಂದಿದೆ.ಸಂದೀಪ್ ಮಂಗಳೂರು ಮತ್ತು ವಸಂತಿ ಕಡಂಬಳ ಇವರ ಸಹಕಾರದೊಂದಿಗೆ ಈ ಭಕ್ತಿ ಗೀತೆ ಮೂಡಿಬಂದಿದ್ದು ಅಕ್ಟೋಬರ್ 17ರಂದು ಬೆಳಿಗ್ಗೆ 10,ಗಂಟೆಗೆ ಸುರೇಶ್ ನಿಟ್ಟೆ ಶ್ರೀ ಪಾಪು ಯೂಟ್ಯೂಬ್ ಚಾನಲ್ ನಲ್ಲಿ ತುಳುನಾಡ ಕಾರ್ಣಿಕ ದೈವ ಶ್ರೀ ವರ್ತೆ ಪಂಜರ್ಲಿಯ ತುಳುಭಕ್ತಿ ರಿಲೀಸ್ ಆಗಲಿದೆ.