ಕೇಂದ್ರದಲ್ಲಿರುವುದು ಹೃದಯಹೀನ ಸಂವೇದನಾ ರಹಿತ ಸರಕಾರ: ಸುನಿಲ್ ಕುಮಾರ್ ಬಜಾಲ್

ಮಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದುರ್ಬಲ ಆರ್ಥಿಕ ನೀತಿಯಿಂದಾಗಿ ದೇಶದ ಅರ್ಥ ವ್ಯವಸ್ಥೆ ಅಧಪತನದತ್ತ ಸಾಗುತ್ತಿದೆ. ತಪ್ಪು ಆರ್ಥಿಕ ನೀತಿಯಿಂದಾಗಿ ಅಕ್ರಮಗಳೇ ಬಿಜೆಪಿ ಸರಕಾರದ ನೀತಿಗಳಾಗುತ್ತಿವೆ. ಹಾಗಾಗಿ ಭ್ರಷ್ಟಾಚಾರ ಪ್ರಕರಣ ಹೊರಬರುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.ಅವರು ಇಂದು ಹಳೆ ಬಂದರು ಸಗಟು ಮಾರುಕಟ್ಟೆಯ ಗೋಳಿಕಟ್ಟೆ ವೃತ್ತದ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್,ವಿದ್ಯುತ್,ಗ್ಯಾಸ್ ಮತ್ತು ಇತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.

ಕೋರೋನಾದ ಸಂಕಷ್ಟದ ಕಾಲದಲ್ಲಿ ಲಾಕ್ ಡೌನ್ ಅಸ್ತ್ರ ಬಳಸಿಕೊಂಡು ಜನರನ್ನು ಗೃಹ ಬಂಧನದಲ್ಲಿಟ್ಟು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೃದಯ ಮತ್ತು ಸಂವೇದನೆ ಇಲ್ಲದೆ ಅಮಾನುಷವಾಗಿ ವರ್ತಿಸುತ್ತಿದೆ ಎಂದು ಆಪಾದಿಸಿದ ಅವರು, ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿ ಉಪ್ಪಿನಿಂದ ಕರ್ಪೂರದ ವರೆಗೆ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ಸರಕಾರಗಳನ್ನು ಕಿತ್ತೆಸೆಯದೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.ಬಂದರು ಶ್ರಮಿಕರ ಅಧ್ಯಕ್ಷರಾದ ಪಿ.ಎಸ್ ವಿಲ್ಲಿ ವಿಲ್ಸನ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಜ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಸಂಘದ ಪ್ರಮುಖರಾದ ಹಂಝ ಜಪ್ಪಿನಮೊಗರು, ಸಿದ್ದಿಕ್ ಬೆಂಗರೆ, ಫಾರೂಕ್ ಉಳ್ಳಾಲ, ಮಾದವ ಕಾವೂರ್,ಮಜೀದ್ ಉಳ್ಳಾಲ, ಎಸ್ ವೈ ಎಸ್ ರಾಜ್ಯ ಮುಖಂಡ ಅಶ್ರಫ್ ಕಿನಾರ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.